ಕುಮಟಾ: ತದಡಿಯ ಮೂಡಂಗಿಯ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ 26/01/18 ರಂದು ಕಿರಿಯ ಪ್ರಾಥಮಿಕ ಶಾಲಾ ರಂಗ ಮಂದಿರದ ಆವರಣದಲ್ಲಿ ಸಾಂಸ್ಕøತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಶಾಸಕಿ ಶಾರದಾ ಶೆಟ್ಟಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಗಣರಾಜ್ಯೋತ್ಸವದ ಶುಭ ಸಂದರ್ಭದಂದು ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಡಾ|| ಬಿ. ಆರ್. ಅಂಬೇಡ್ಕರ ಅವರು ಸಂವಿಧಾನವನ್ನು ರಚಿಸಿ ಹಲವು ಹಕ್ಕು ಕರ್ತವ್ಯಗಳನ್ನು ನೀಡಿದೆ. ನಾವೆಲ್ಲ ಸಂವಿಧಾನವನ್ನು ಗೌರವಿಸಬೇಕು, ಅದರಂತೆ ನಡೆಯಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಜನವರಿ 26/1950 ರಂದು ನಮ್ಮ ಭಾರತೀಯ ಸಂವಿಧಾನ ಜಾರಿಗೆ ಬಂದಿತು. ವಿಶ್ವಕ್ಕೇ ಮಾದರಿಯಾದಂತಹ ನಮ್ಮ ಸಂವಿಧಾನವನ್ನು ಡಾ|| ಬಿ. ಆರ್. ಅಂಬೇಡ್ಕರರವರು ರಚಿಸಿದ್ದು ಅವರನ್ನು ಸಂವಿಧಾನದ ಶಿಲ್ಪಿ ಎಂದು ಕರೆಯುತ್ತಾರೆ. ಸಾಮಾಜಿಕ, ಆರ್ಥಿಕ & ರಾಜಕೀಯ ನ್ಯಾಯವನ್ನು, ಸಮಾನತೆ ಹಾಗೂ ಎಲ್ಲರ ನಡುವೆ ಭ್ರಾತೃತ್ವವನ್ನು ಬೆಳೆಸುವುದು ನಮ್ಮ ಸಂವಿಧಾನದ ಮೂಲ ಆಶಯವಾಗಿದೆ. ಎಲ್ಲಾ ಧರ್ಮದ ಆಚರಣೆಗೂ ಅವಕಾಶವನ್ನು ಕಲ್ಪಿಸಲಾಗಿದೆ. ಹಾಗಾಗಿ ನಾವೆಲ್ಲ ಸಹೋದರತೆಯೊಂದಿಗೆ ಪರಸ್ಪರ ಸಾಮರಸ್ಯತೆಯೊಂದಿಗೆ ಬಾಳೋಣ ಎಂದು ಕರೆ ನೀಡಿದರು.

RELATED ARTICLES  ಸಿದ್ದಾಪುರದಲ್ಲಿ ಸಿಕ್ಕಿಬಿದ್ದರು ಶಾಲಾ ಸಿಲೆಂಡರ್ ಕಳ್ಳರು!

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿ.ಪಂ. ಸದಸ್ಯರಾಧ ಪ್ರದೀಪನಾಯಕ ದೇವರಬಾವಿ ಅವರು ಸಂವಿಧಾನದ ಇತಿಹಾಸ ಹಾಗೂ ಆಶಯದ ಕುರಿತಾಗಿ ಮಾತನಾಡಿದರು.

ಇದೇ ವೇದಿಕೆಯಲ್ಲಿ ಮೀನುಗಾರರ ಸಂಘದ ನಿವೃತ್ತ ಕಾರ್ಯದರ್ಶಿ ನಾರಾಯಣ ಎನ್. ಹೊಸಕಟ್ಟ, ಮ.ಕೋ. ಆಪ್. ಬ್ಯಾಂಕ್ ನ ನಿವೃತ್ತ ವ್ಯವಸ್ಥಾಪಕರಾದ ಅಶೋಕ ಆರ್. ನಾಯ್ಕ, ಮೀನುಗಾರರ ಸಹಕಾರಿ ಸಂಘದ ಇನ್ನೊರ್ವ ನಿವೃತ್ತ ಕಾರ್ಯದರ್ಶಿಗಳಾದ ನಾರಾಯಣ ಸಣ್ಣು ಮೂಡಂಗಿ, ಇನ್ನೋರ್ವ ನಿವೃತ್ತ ಕಾರ್ಯದರ್ಶಿ ಈಶ್ವರ ಎಚ್. ಮೂಡಂಗಿ, ನಿವೃತ್ತ ಮುಖ್ಯಾಧ್ಯಾಪಕರಾದ ಶ್ರೀ ಜಯವಂತ ಎಸ್. ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

RELATED ARTICLES  ಶೈಕ್ಷಣಿಕ ಜಾಗೃತೆ ಮೂಡಿದಾಗ ಮಾತ್ರ ಹಿಂದುಳಿದ ಸಮಾಜಗಳ ಅಭಿವೃದ್ಧಿ ಸಾಧ್ಯ.

ಈ ಸಂಧರ್ಭದಲ್ಲಿ ಮಾಜಿ ಶಾಸಕ ದಿನಕರ ಶೆಟ್ಟಿ, ಮಹೇಶ ಜಿ. ಶೆಟ್ಟಿ, ಶೇಖರ ಜಿ. ನಾಯ್ಕ, ಮಹೇಶ ಎನ್. ಮೂಡಂಗಿ, ಶಾರದಾ ಆರ್. ಮೂಡಂಗಿ, ಸರೋಜಾ ವಿ. ಮೂಡಂಗಿ, ರಾಂಚಂದ್ರ ಬಿ. ಹೊಸ್ಕಟ್ಟ, ಮೋಹನ ಎಮ್. ಮೂಡಂಗಿ, ಚೇತನ ಎಮ್. ಮೂಡಂಗಿ, ಪ್ರಕಾಶ ಕೆ. ಮೂಡಂಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.