ಕುಮಟಾ ಉತ್ಸವಕ್ಕೆ ಬಂದ ಸಾವಿರಾರು ಜನ ನಗೆಯ ಕಡಲಲ್ಲಿ ತೇಲಿದರು . ಇಂದು ಕುಮಟಾ ಉತ್ಸವದಲ್ಲಿ ಸದ್ದು ಮಾಡಿದ್ದು ಪ್ರಾಣೇಶ್ ಮತ್ತು ತಂಡ .ಕುಮಟಾ ಉತ್ಸವದಲ್ಲಿ ನೆರೆದಿದ್ದ ಸಹಸ್ರಾರು ಜನರ ಹೊಟ್ಟೆ ಹುಣ್ಣಾಗುವಂತೆ ನಗಿಸಿದೆ ಪ್ರಾಣೇಶ್ ಮತ್ತು ತಂಡ .

ಹೌದು ಇಂದಿನ ಪ್ರಮುಖ ಆಕರ್ಷಣೆಯಾದ ಪ್ರಾಣೇಶ್ ಮತ್ತು ತಂಡದಿಂದ ನಡೆದ ಹಾಸ್ಯ ಚಟಾಕಿ ಕಾರ್ಯಕ್ರಮ ನೆರೆದಿದ್ದ ಸಹಸ್ರಾರು ಜನರನ್ನು ನಗೆಯ ಕಡಲಲ್ಲಿ ತೇಲಿಸಿತು .

RELATED ARTICLES  ಉತ್ತರ ಕನ್ನಡದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರ ಸಂಚಾರ : ಪಕ್ಷ ಸಂಘಟನೆಗೆ ನಡೆಯಲಿದೆ ಹೊಸ ತಂತ್ರ

ಮಾತು ಮಾತಿಗೂ ಹಾಸ್ಯ ಚಟಾಕಿಗಳನ್ನು ಹಾರಿಸುವುದರ ಮೂಲಕ ಜನತೆ ಎದ್ದು ಬಿದ್ದು ನಗುವಂತೆ ಮಾಡಿತ್ತು ಈ ತಂಡ .

ಅದರ ಜೊತೆ ಜೊತೆಗೆ ಗಂಡುಕಲೆ ಎಂದೇ ಬಿಂಬಿತವಾದ ಯಕ್ಷಗಾನ ಆಖ್ಯಾನ”ಭೂ ಕೈಲಾಸ” ಪ್ರದರ್ಶನ ಕೂಡ ನಡೆಯಿತು ಯಕ್ಷ ಕಲಾವಿಧರು ಜನರಿಗೆ ಸಾಂಸ್ಕೃತಿಕ ಸಿಂಚನಮಾಡಿದರು .

ಚಳಿಯ ಹವೆಯಲ್ಲಿ ಸಂಗೀತಾ ರವೀಂದ್ರನ್ ದಾಮೋದರ ನಾಯ್ಕ್ ,ನಿಖಿಲ್ ಪಾರ್ಥ ಸಾರಥಿಯವರ ಕಾರ್ಯಕ್ರಮ ಹಾಗೂ ಗಾಳಿಪಟ ಚಲನ ಚಿತ್ರದ ನಟಿ ಭಾವನಾ ಅವರಿಂದ ನೃತ್ಯ ಪ್ರದರ್ಶನ ವಿಶೇಷ ಆಕರ್ಷಣೆಯಾಗಿ ಜನತೆಗೆ ಮನರಂಜನೆಯನ್ನು ನೀಡಿತ್ತು .

RELATED ARTICLES  ಕೊಂಕಣದಲ್ಲಿ ಸಂಭ್ರಮದಗಣರಾಜ್ಯೋತ್ಸವ

ಬೆಂಗಳೂರಿನ ತಂಡದಿಂದ ಸಂಗೀತ ವೃಷ್ಟಿ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದು ನೆರೆದಿದ್ದವರ ಮೈ ರೋಮಾಂಚನಗೊಳಿಸಿತು.

ಈ ಎಲ್ಲಾ ಕಾರ್ಯಕ್ರಮಗಳ ಮೂಲಕ ಎರಡನೆಯ ದಿನದ ಕುಮಟಾ ಉತ್ಸವ ಸಂಪನ್ನವಾದರೆ ಮೂರನೆ ದಿನದ ಸವಿ ಸಂಜೆಗಾಗಿ ಮತ್ತೆ ಜನತೆ ಸಮಯ ಕಾಯುವಂತೆ ಭಾಸವಾಗುತ್ತಿದೆ.