ಶಿರಸಿ: ಯಾವುದೇ ವ್ಯಕ್ತಿಯ ಯಶಸ್ಸಿಗೆ ಕಲೆ, ಸಂಗೀತ ಸಹಕಾರಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂ ಸೌಲಭ್ಯಾಭಿವೃದ್ಧಿ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು.

ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿ ಶುಕ್ರವಾರ ಕದಂಬೋತ್ಸವಕ್ಕೆ ಅದ್ದೂರಿ ಚಾಲನೆ ನೀಡಿ ಅವರು ಮಾತನಾಡಿದರು.

ಯಾವುದೇ ವ್ಯಕ್ತಿಯ ಯಶಸ್ಸಿನ ಹಿಂದೆ ಕಲೆ ಮತ್ತು ಸಂಸ್ಕøತಿಯ ಪಾತ್ರ ಬಹುಮುಖ್ಯವಾಗಿರುತ್ತದೆ. ಈ ಹಿನ್ನೆಲೆಯಿಂದಲೇ ಕರ್ನಾಟಕ ಸರ್ಕಾರದಿಂದ ಕಲೆ ಮತ್ತು ಸಂಸ್ಕøತಿಹೆ ಹೆಚ್ಚಿ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು.

ಪ್ರತಿಯೊಬ್ಬರೂ ಮನುಷ್ಯರಾಗಿ ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡು ಬದುಕಬೇಕು. ಅದಕ್ಕೆ ಇಂತರ ಉತ್ಸವಗಳನ್ನು ಸಂಘಟಿಸುವ ಮೂಲಕ ಪ್ರತಿಯೊಬ್ಬರಲ್ಲೂ ಮಾನವೀಯ ಮೌಲ್ಯಗಳನ್ನು ಬಿತ್ತುವಂತಾಗಿದೆ.

ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಉತ್ಸವ ಸೇರಿದಂತೆ ವಿವಿಧ ಉತ್ಸವಗಳು ನಿರಂತರವಾಗಿ ನಡೆಯುತ್ತಿವೆ. ಇದರ ಜತೆಯಲ್ಲಿಯಲ್ಲೇ ಜಿಲ್ಲೆಯ ಸರ್ವಂಗೀಣ ಅಭಿವೃದ್ಧಿಯಾಗಿದೆ. ಜಿಲ್ಲಾದ್ಯಂತ ವಿವಿಧ ರಸ್ತೆಗಳು, ನೀರಾವರಿ ಯೋಜನೆಗಳು ಹೀಗೆ ವಿವಿಧ ಅಭಿವೃದ್ಧಿ ಯೋಜನೆಗಳ ನಡೆದಿವೆ. ಬನವಾಸಿ ಶಿರಸಿ ನಡುವೆ ಇರುವ ವೃತ್ತಕ್ಕೆ ಪಂಪ ವೃತ್ತ ಎಂದು ಇಂದು ನಾಮಕರಣ ಮಾಡಲಾಗಿದೆ ನಾಡಿನ ಹೆಮ್ಮೆಯ ಪಂಪ ಪ್ರಶಸ್ತಿಯನ್ನು ಸಹೃದಯಿ ಪ್ರೊ. ನಿಸಾರ ಅಹಮದ್ ಅವರಿಗೆ ನೀಡಲಾಗುತ್ತಿರುವುದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ. ಎಂದು ಹೇಳಿದರು.
ಪಂಪ ಪ್ರಶಸ್ತಿಗೆ ಭಾಜನರಾದ ನಿಸಾರ ಅಹಮದ್ ಅವರು ಮಾತನಾಡಿ ಕನ್ನಡದ ಹೆಮ್ಮೆಯ ಪಂಪ ಪ್ರಶಸ್ತಿ ನನಗೆ ಬಂದಿರುವುದು ಹೆಮ್ಮೆ ಅನಿಸುತ್ತಿದೆ. 11 ವರ್ಷಗಳ ಹಿಂದೆಯೇ ಪಡೆಯಬೇಕಾದ ಪ್ರಶಸ್ತಿಯನ್ನು ಇಂದು ಪಡೆಯುವಂತಾಯಿತು. ಇದನ್ನು ಕೊಡಮಾಡಿದ ರಾಜ್ಯ ಸರ್ಕಾರಕ್ಕೆ, ಮುಖ್ಯಮಂತ್ರಿಯವರಿಗೆ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಯ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಕನ್ನಡ ಭಾಷೆ ಅತ್ಯಂತ ಪ್ರಾಚೀನ ಸುಂದರ ಭಾಷೆ. ಜಗತ್ತಿನ ಎಲ್ಲ ಪ್ರಾಚೀನ ಭಾಷೆಗಲ್ಲಿ 19ನೇಸ್ಥಾನದಲ್ಲಿ ಕನ್ನಡ ಭಾಷೆ ಇದೆ ಎಂಬುದ ನಮ್ಮ ಹೆಮ್ಮೆ. ಆದ್ದರಿಂದ ಕನ್ನಡ ಭಾಷೆಯನ್ನು ಆಡಳಿತ ಭಾಷೆ ಮತ್ತು ಆಡು ಭಾಷೆಯಾಗಿಸಿಕೊಳ್ಳುವ ಮೂಲಕ ಶ್ರೀಮಂತಗೊಳಿಸಬೇಕು ಎಂದರು.

RELATED ARTICLES  ಅಂಬಿಗರ ಚೌಡಯ್ಯ ಜಯಂತಿಯ ಕುರಿತಾಗಿ ಪತ್ರಿಕಾಗೋಷ್ಠಿ : ಜನವರಿ 21ರಂದು ಕಾರ್ಯಕ್ರಮ

ಇಂದಿನ ಯುವ ಪೀಳಿಗೆ ಪಂಪ, ರನ್ನ, ವಚನ ಸಾಹಿತ್ಯ ಸೇರಿದಂತೆ ವಿವಿಧ ಹೆಸರಾಂತ ಸಾಹಿತಿಗಳ ಸಾಹಿತ್ಯವನ್ನು ಓದಿ ಅರ್ಥ ಮಾಡಿಕೊಳ್ಳಬೇಕು ಎಂದರು.

ಶಾಸಕ ಶಿವರಾಮ ಹೆಬ್ಬಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಸಂತೋಷ್ ರೇಣಕೆ, ತಾಲೂಕು ಪಂಚಾಯ್ತಿ ಅಧ್ಯಕ್ಷೆ ಲತಾ ಕಾಳೇರಮನೆ, ಸದಸ್ಯರಾದ ರೂಪ ಗಣಪತಿ ನಾಯಕ್, ಉಷಾ ಹೆಗಡೆ, ಎಲ್.ಟಿ.ಪಾಟೀಲ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಣೇಶ್ ಸಣ್ಣಲಿಂಗಪ್ಪ, ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿ.ಎಫ್.ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES  ಗೋಕರ್ಣ ಓಂ ಬೀಚ್ ನಲ್ಲಿ ಸುಳಿಗೆ ಸಿಲುಕಿದ ಮೂವರು ಪ್ರವಾಸಿಗರು..! ಜೀವ ರಕ್ಷಿಸಿದ ಲೈಫ್ ಗಾರ್ಡಗಳು.

ಜಾನಪದ ವೈಭವ ಅನಾವರಣ: ಮಧ್ಯಾಹ್ನ ಗುಡ್ನಾಪುರ ವರದಾ ನದಿತಟದಲ್ಲಿ ದಲ್ಲಿ ಜಾನಪದ ಕಲಾಜಾಥಾಕ್ಕೆ ಶಾಸಕ ಶಿವರಾಮ ಹೆಬ್ಬಾರ ಆವರು ಚಾಲನೆ ನೀಡಿದರು.

ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಕಲಾ ತಂಡಗಳು ಕದಂಬೋತ್ಸವ ಮೆರವಣಿಗೆಗೆ ಮೆರಗು ಮೂಡಿಸಿದವು. ಬೇಡರ ವೇಷ, ಗುಮಟೆ ಪಾಂಗ್, ಡೊಳ್ಳು ಕುಣಿತ, ಕೀಲು ಕುದುರೆ, ವೀರಗಾಸೆ, ಮರಗಾಲು, ಜಾನಪದ ನೃತ್ಯ, ಭೂಕೈಲಾಸ, ಮಹಿಳಾ ಡೊಳ್ಳು ಕುಣಿತ, ಬನವಾಸಿ ನಾಮದೇವ ಯುವಕ ಮಂಡಳಿಯಿಂದ ಯಕ್ಷಗಾನ ಮತ್ತು ಕಥಕ್ ನೃತ್ಯ ವೇಷಧಾರಿಗಳು ಮೆರವಣಿಗೆಗೆ ಜೀವ ತುಂಬಿದವು.

ಯಲ್ಲಾಪುರದ ಸುಮಾ ರವೀಂದ್ರ ಮಂಚಿಕೇರಿ ಅವರ ಭಕ್ತಿ ಗೀತೆ ಬೆಂಗಳೂರಿನ ಪ್ರತಿಭಾ ಹೆಗಡೆಯವರ ಶಾಸ್ತ್ರೀಯ ಸಂಗೀತ, ಅನಿತಾ ಕುಲಕರ್ಣಿಯವರ ಸಿತಾರ ವಾದನ, ಸಿದ್ದಾಪುರದ ಮಾದವಿ ರಾಮಾ ಗೌಡ ಮತ್ತು ತಂಡದಿಂದ ಡೊಳ್ಳು ಕುಣಿತ, ಮುಂಡಗೋಡದ ಟಿಬೇಟಿಯನ್ ಕಾಲೋನಿ ಕಲಾವಿದರಿಂದ ಟಿಬೇಟಿಯನ್ ನೃತ್ಯ ಪುಣೆ ನಂದಿನಿರಾವ್ ಗುಜ್ಜಾರ ಮತ್ತು ತಂಡದಿಂದ ಇನಿ-ದನಿ ಕಾರ್ಯಕ್ರಮಗಳು ವೇದಿಕೆ ಇನ್ನಷ್ಟು ಮೇರಗು ತಂದವು.

ಫೆಬ್ರವರಿ 3 ರ ಕಾರ್ಯಕ್ರಮಗಳು ಉಡುಪಿ ಯಕ್ಷಸಿರಿ ತಂಡದಿಂದ, ಮಹಿಳಾ ಯಕ್ಷಗಾನ, ಹುಬ್ಬಳ್ಳಿ ಶಶಿಕಲಾ ದಾನಿ ಇವರಿಂದ ಜಲತರಂಗ, ಯಲ್ಲಾಪುರದ ಕವಿತಾ ಹೆಬ್ಬಾರ ಮತ್ತು ತಂಡದಿಂದ ಜನಪದ ನೃತ್ಯ, ಮೈಸೂರು ಸುಮಾ ರಾಜ ಕುಮಾರ ತಂಡದಿಂದ ರಸಮಂಜರಿ ಸೇರಿದಂತೆ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.