ಕುಮಟಾ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕುಮಟಾ(ಉ.ಕ.) ಇದರ ನೂತನ ಗೋದಾಮಿನ ಕಟ್ಟಡದ ಉದ್ಘಾಟನೆ ಹಾಗೂ ಸಂತೆ ಮಾರುಕಟ್ಟೆಯ ಮೇಲ್ಚಾವಣಿ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಆರ್. ವಿ.ದೇಶಪಾಂಡೆಯವರು ಹಾಗೂ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು.

RELATED ARTICLES  ಸಂಪನ್ನವಾದ ಹೊನ್ನಾವರ ಜಾತ್ರೆ : ಹರಿದು ಬಂದ ಭಕ್ತ‌ ಸಾಗರ: ರಥ ಎಳೆದು ಪುನೀತರಾದ ಜನತೆ.

ಈ ಸಂದರ್ಭದಲ್ಲಿ ಮಾತನಾಡಿದ ದೇಶಪಾಂಡೆಯವರು ರೈತರ ಜೀವನವನ್ನು ಒಳ್ಳೆಯ ರೀತಿಯಲ್ಲಿ ರೂಪಿಸಲು ಇಂತಹ ಮಾರುಕಟ್ಟೆಗಳು ಅಗತ್ಯವಾಗಿದ್ದು ಇವುಗಳ ಅಭಿವೃದ್ಧಿಯಾದಾಗ ಅನ್ನದಾತನಿಗೆ ಅನುಕೂಲ ಎಂದರು.

ಶಾರದಾ ಶೆಟ್ಟಿಯವರು ಮಾತನಾಡಿ ಕುಮಟಾದ ಈ ಮಾರುಕಟ್ಟೆ ಯಲ್ಲಿ ಅಗತ್ಯವಿದ್ದ ಗೋದಾಮಿನ ಕಟ್ಟಡ ಇಂದು ಸಂಪನ್ನವಾಗಿದ್ದು ಜನತೆಗೆ ಅನುಕೂಲವಾಗಲಿ ಎಂದರು.

RELATED ARTICLES  ಫೇ 28 ಕ್ಕೆ ಕುಮಟಾ ತಾಲೂಕಿನ ಒಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ.

ಈ ಸಂಧರ್ಭದಲ್ಲಿ ಜಿ. ಪಂ. ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಮೊಗೇರ, ತಾ. ಪಂ. ಅಧ್ಯಕ್ಷರಾದ ಶ್ರೀಮತಿ ವಿಜಯಾ ಪಟಗಾರ ಮತ್ತು ಪುರಸಭೆ ಅಧ್ಯಕ್ಷರಾದ ಶ್ರೀ ಮದೂಸೂದನ ಶೇಟ್ ಹಾಗೂ ಪ್ರಮುಖ ಮುಖಂಡರು ಉಪಸ್ತತರಿದ್ದರು.