ಕುಮಟಾ: ಕರ್ನಾಟಕ ಕರಾಟೆ ಶಿಕ್ಷಕರ ಸಂಘ, ಉತ್ತರ ಕನ್ನಡ ಜಿಲ್ಲಾ ಸ್ಪೋಟ್ರ್ಸ & ಕರಾಟೆ ತರಬೇತುದಾರರ ಸಂಘ,ಕರಾಟೆ ಡೋ ಕೆನ್ರ್ಯೂಕಾನ್ ಶೋಟೋಕಾನ್ ಇಂಡಿಯಾ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಕರಾಟೆ ಶಿಕ್ಷಕರ ಸಂಘ ಉತ್ತರ ಕನ್ನಡ ಜಿಲ್ಲಾ ಸ್ಪೋಟ್ರ್ಸ ಮತ್ತು ಕರಾಟೆ ತರಬೇತುದಾರರ ಸಂಘದ ಆಶ್ರಯದಲ್ಲಿ ಮೂರನೇ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯು ಕುಮಟಾದ ಪುರಭವನದಲ್ಲಿ 03-02-2018 ರಂದು ಜರುಗಿತು.

ಈ ಕಾರ್ಯಕ್ರಮವನ್ನು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವರಾದ ಮಾನ್ಯ ಅನಂತಕುಮಾರ ಹೆಗಡೆಯವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕರಾಟೆ ಸ್ವ ರಕ್ಷಣೆಯ ಕಲೆಯಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿಧ್ಯಾರ್ಥಿಗಳು ಕರಾಟೆಯತ್ತ ಆಕರ್ಷಿತರಾಗುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದು ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.

RELATED ARTICLES  ಬಸ್ ಸಂಚಾರ ಅಸ್ಥವ್ಯಸ್ಥ.

ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಪದಕಗಳನ್ನು ಅನಾವರಣಗೊಳಿಸಿ ಸ್ಪರ್ಧಾಳುಗಳಿಗೆ ಶುಭಕೋರಿದರು.

ಇದೇ ವೇದಿಕೆಯಲ್ಲಿ ಮಾನ್ಯ ಸಚಿವರಾದ ಅನಂತಕುಮಾರ ಹೆಗಡೆಯವರನ್ನು ಬಿಜೆಪಿ ಪ್ರಮುಖರಾದ ರೂಪಾಲಿ ನಾಯ್ಕ ಹಾಗೂ ವೆಂಕಟರಮಣ ಹೆಗಡೆ ಅವರುಗಳು ಸನ್ಮಾನಿಸಿ ಗೌರವಿಸಿದರು.

RELATED ARTICLES  ಟಿ ಸುನಂದಮ್ಮ ಪ್ರಶಸ್ತಿಗೆ ಸಾಹಿತಿ ಭುವನೇಶ್ವರಿ ಹೆಗಡೆ ಆಯ್ಕೆ

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮುಖಂಡರಾದ ಸೂರಜ್ ನಾಯ್ಕ ಸೋನಿ ಅವರು ವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಶಾಸಕ ದಿನಕರ ಶೆಟ್ಟಿ , ಬಿಜೆಪಿ ಪ್ರಮುಖ ಮಂಜುನಾಥ ಜನ್ನು, ಪುರಸಭಾ ಸದಸ್ಯ ಪ್ರಶಾಂತ ನಾಯ್ಕ , ಪುರಸಭಾ ಸದಸ್ಯ ಸಂತೋಷ ನಾಯ್ಕ , ಪುರಸಭಾ ಸದಸ್ಯ ಮಂಜುನಾಥ ಜೈನ್ , ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷರಾದ ನಿತ್ಯಾನಂದ ಕೆಮ್ಮಣ್ಣು , ಉ.ಕ ಕರಾಟೆ ಸಂಘದ ಅಧ್ಯಕ್ಷ ಅನ್ಮೋಲ್ ರೇವಣಕರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.