ಕುಮಟಾ: ಶಂಭುಲಿಂಗೇಶ್ವರ ಮಹಾಸತಿ ಗೆಳೆಯರ ಬಳಗ, ಮೇಲಿನ ಹೊಸಳ್ಳಿ ಹಾಗೂ ಊರ ನಾಗರಿಕರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಮಟ್ಟದ ಓಪನ್ ವಾಲಿಬಾಲ್ ಪಂದ್ಯಾವಳಿಯನ್ನು ಮೇಲಿನ ಹೊಸಳ್ಳಿಯ ಮಹಾಸತಿ ಕ್ರೀಡಾಂಗಣದಲ್ಲಿ ಜರುಗಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಮಾನವನು ಪರಿಪೂರ್ಣನಾಗಲು ಶಿಕ್ಷಣದೊಂದಿಗೆ ಕ್ರೀಡಾ ಹಾಗೂ ಸಾಂಸ್ಕøತಿಕ ಮನೋಭಾವನೆ ಕೂಡಾ ಅಗತ್ಯವಾಗಿದೆ. ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಸದೃಢ ದೇಹ ಹಾಗೂ ಮನಸ್ಸು ಹೊಂದಬೇಕಾದರೆ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ತೀರಾ ಅಗತ್ಯವಾಗಿದೆ. ಸಮಾಜದಲ್ಲಿ ಸಾಮರಸ್ಯತೆ ಬೆಳೆಯಲು ಇಂತಹ ಕ್ರೀಡಾ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಹೆಚ್ಚೆಚ್ಚು ಜರುಗಬೇಕು ಇದರಿಂದ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಹಾಗೂ ಜನರಲ್ಲಿ ಸಾಂಸ್ಕøತಿಕ ಹಾಗೂ ಕ್ರೀಡಾಭಿಮಾನವನ್ನು ಮೂಡಿಸಿದಂತಾಗುತ್ತದೆ ಎಂದರು.

RELATED ARTICLES  ಶಿರಸಿಯಲ್ಲಿಯೂ ಹನಿ ಟ್ರಾಪ್..? ನಗ್ನ ವಿಡಿಯೋ ಮಾಡಿ ಹಣಕ್ಕಾಗಿ ಬೆದರಿಕೆ : ಪ್ರಕರಣ ದಾಖಲು : ಆರೋಪಿಗಳ ಬಂಧನ.

ಅಂಕಣ ಉದ್ಘಾಟಿಸಿದ ಚಲನಚಿತ್ರ ನಿರ್ಮಾಪಕರಾದ ಸುಬ್ರಾಯ ವಾಳ್ಕೆ ಅವರು ಮಾತನಾಡಿ ಇತರೇ ಸಂಘಟನೆ ಹಾಗೂ ಊರ ನಾಗರಿಕರ ಸಹಕಾರದೊಂದಿಗೆ ಅತ್ಯುತ್ತಮ ರೀತಿಯಲ್ಲಿ ಈ ಪಂದ್ಯಾವಳಿ ಸಂಘಟನೆಗೊಂಡಿದೆ. ನಮ್ಮ ಆರೋಗ್ಯದ ದೃಷ್ಠಿಯಿಂದ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿ.ಪಂ. ಸದಸ್ಯರಾದ ಪ್ರದೀಪ ನಾಯಕ ದೇವರಬಾವಿ ಅವರು ಮಾತನಾಡಿ ಈ ಭಾಗದಲ್ಲಿ ಯುವಕರು ಸಂಘಟಿತರಾಗಿ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇದಕ್ಕೆ ತಮ್ಮಿಂದಾದ ಸಹಕಾರ ನೀಡುವುದಾಗಿ ಹೇಳಿದರು.

RELATED ARTICLES  ಜ. 04 ರಂದು ದಿ. ರಾಮಚಂದ್ರ ಹೆಗಡೆಯವರಿಗೆ ಶ್ರದ್ಧಾಂಜಲಿ ಹಾಗೂ ತಾಳಮದ್ದಲೆ ಕಾರ್ಯಕ್ರಮ

ಸಭಾಧ್ಯಕ್ಷತೆ ವಹಿಸಿದ ಯುವ ಒಕ್ಕೂಟದ ಅಧ್ಯಕ್ಷರಾದ ಸೂರಜ ನಾಯ್ಕ ಸೋನಿ ಅವರು ಮಾತನಾಡಿ ಯುವಶಕ್ತಿ ಒಗ್ಗೂಡಿ ಇಂತಹ ಕ್ರೀಡಾಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಾಲಿಬಾಲ್ ಕ್ರೀಡೆಯನ್ನು ಉತ್ತೇಜಿಸುವಂತಹ ಕೆಲಸ ಮಾಡಿದ್ದಾರೆ ಎಂದು ಸಂಘಟಕರನ್ನು ಶ್ಲಾಘಿಸಿದರು.

ಇದೇ ವೇದಿಕೆಯಲ್ಲಿ ನಿವೃತ್ತ ಸೈನಿಕರಾದ ವೆಂಕಟೇಶ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಹಲವಾರು ಗಣ್ಯರು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.