ಐಸಿಸಿ ಅಂಡರ್ 19 ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ನ್ಯೂಜಿಲೆಂಡ್ ನ ಬೇಓವಲ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ವೇಗಿಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡ 216 ರನ್ ಗಳಿಗೆ ಆಲೌಟ್ ಆಯಿತು. 217 ರನ್ ಗಳ ಗುರಿ ಪಡೆದ ಭಾರತ ತಂಡದ ಆರಂಭಿಕ ಆಟಗಾರರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದಾಗಿ ಭಾರತ 8 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿತು.

RELATED ARTICLES  ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ ಯೋಗ ದಿನಾಚರಣೆ :

ಭಾರತ ಪರ ನಾಯಕ ಪೃಥ್ವಿ ಶಾ 29, ಶುಭ್ಮನ್ ಗಿಲ್ 31 ಮನ್ಜೋತ್ ಕಲ್ರ ಅಜೇಯ 101 ಮತ್ತು ದೇಸಾಯ್ ಅಜೇಯ 47 ರನ್ ಸಿಡಿಸಿದ್ದಾರೆ.
ಆಸ್ಟ್ರೇಲಿಯಾ ಪರ ಎಡ್ವರ್ಡ್ 28, ಜೋನಾಥನ್ ಮೆರ್ಲೋ 76, ಉಪ್ಪಲ್ 34, ಮೆಕ್ಸ್ವೀನಿ 23 ರನ್ ಗಳಿಸಿದ್ದಾರೆ.

RELATED ARTICLES  ಕಾಗೇರಿಯವರಿಗೆ ರಾಜಿನಾಮೆ ಸಲ್ಲಿಸಿದ ಇನ್ನೋರ್ವ ಶಾಸಕ : ರಾಜಕೀಯದಲ್ಲಿ ಹೊಸ ಸಂಚಲನ

ಭಾರತ ಪರ ಬೌಲಿಂಗ್ ನಲ್ಲಿ ಪೊರೆಲ್, ಶಿವಸಿಂಗ್, ನಾಗರ್ಕೋಟಿ ಮತ್ತು ರಾಯ್ ತಲಾ 2 ವಿಕೆಟ್ ಪಡೆದರೆ ಶಿವಂ ಮವಿ 1 ವಿಕೆಟ್ ಪಡೆದಿದ್ದಾರೆ.