ನವದೆಹಲಿ: ನ್ಯೂಜಿಲೆಂಡ್ ನ ಬೇ ಓವಲ್ ಮೈದಾನದಲ್ಲಿ ನಡೆದ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬಲಿಷ್ಟ ಆಸ್ಟ್ರೇಲಿಯಾ ತಂಡವನ್ನು ಮಣಿಸಿ 4ನೇ ಬಾರಿಗೆ ಕಿರಿಯರ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಹುಮಾನ ಘೋಷಣೆ ಮಾಡಿದೆ.

ಈ ಬಗ್ಗೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿರುವ ಬಿಸಿಸಿಐ, ತಂಡದ ಆಟಗಾರರಿಗೆ ಮತ್ತು ಕೋಚ್ ರಾಹುಲ್ ದ್ರಾವಿಡ್, ಸಹಾಯಕ ಕೋಚ್ ಗಳಿಗೆ ಶುಭ ಹಾರೈಸಿದೆ. ಅಲ್ಲದೆ ತಂಡಕ್ಕೆ ಬಹುಮಾನ ಘೋಷಣೆ ಮಾಡಲಾಗಿದ್ದು, ಟೂರ್ನಿಯುದ್ದಕ್ಕೂ ಮತ್ತು ಟೂರ್ನಿ ಆರಂಭಕ್ಕೂ ಮುನ್ನ ವಿಶ್ವಕಪ್ ಗಾಗಿ ತಂಡವನ್ನು ಸಜ್ಜುಗೊಳಿಸಿದ್ದ ಕೋಚ್ ರಾಹುಲ್ ದ್ರಾವಿಡ್ ಅವರಿಗೆ 50 ಲಕ್ಷ ರೂ ಬಹುಮಾನ ಘೋಷಣೆ ಮಾಡಿದ್ದು, ತಂಡದ ಎಲ್ಲ ಆಟಗಾರರಿಗೂ ತಲಾ 30 ಲಕ್ಷ ರೂ ನೀಡುವ ಕುರಿತು ಘೋಷಣೆ ಮಾಡಿದೆ.

RELATED ARTICLES  ಸರಕಾರವೇ ಗೌರಿ ಲಂಕೇಶ್ ರನ್ನು ಕೊಲೆಗೈದಿರಬಹುದು? ಚಕ್ರವರ್ತಿ ಸೂಲಿಬೆಲೆ.

ಅಲ್ಲದೆ ತಂಡದ ಸಹಾಯಕ ಕೋಚ್ ಹಾಗೂ ಸಹಾಯಕ ಸಿಬ್ಹಂದಿಗಳಿಗೂ ಬಹುಮಾನ ಘೋಷಣೆ ಮಾಡಲಾಗಿದ್ದು, ಎಲ್ಲ ಸಿಬ್ಬಂದಿಗಳಿಗೂ ತಲಾ 20 ಲಕ್ಷ ರೂ ಬಹುಮಾನ ಘೋಷಣೆ ಮಾಡಿದೆ.

RELATED ARTICLES  ಉತ್ತರಕನ್ನಡದಲ್ಲಿ ಒಂದೇ ದಿನ ದ್ವಿಶತಕದ ಸನಿಹ ಬಂದ ಕೊರೋನಾ ಪ್ರಕರಣ