ಹೊನ್ನಾವರ: ಭಾರತ ಸರ್ಕಾರದ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತಾ ಸಚಿವಾಲಯದ Skill India, NSDC, Dhatri, RIIIT ಹಾಗೂ SDM ಕಾಲೇಜ್ ಹೊನ್ನಾವರ ಇವರ ಸಹಯೋಗದೊಂದಿಗೆ ಹೊನ್ನಾವರದ SDM ಕಾಲೇಜ್ ಆವರಣದಲ್ಲಿ ಉದ್ಯೋಗಮೇಳ ಉದ್ಘಾಟನೆಗೊಂಡಿದೆ.
ಕಾರ್ಯಕ್ರಮವನ್ನು ಕೌಶಲ್ಯಾಭೀವೃದ್ಧಿ ಸಚಿವ ಅನಂತ ಕುಮಾರ ಹೆಗಡೆ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಕೌಶಲ್ಯ ಭಾರತ’ ಯೋಜನೆಯಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಆಸಕ್ತ ಯುವಕ/ಯುವತಿಯರಿಗೆ ಕೌಶಲ್ಯ ತರಬೇತಿ ಹಾಗೂ ಅದಕ್ಕೆ ತಕ್ಕಂತೆ ಉದ್ಯೋಗವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಈ ಪ್ರಯತ್ನಗಳು ಪ್ರಾರಂಭಗೊಂಡಿದ್ದು, ಉದ್ಯೋಗಮೇಳ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ಉದ್ಯೋಗಮೇಳದಲ್ಲಿ 40 ಕ್ಕೂ ಅಧಿಕ ಪ್ರತಿಷ್ಟಿತ ಕಂಪನಿಗಳು ಭಾಗವಹಿಸಿವೆ. ಪ್ರಮುಖವಾಗಿ Housejoy, BP, FLO, Swiggy, Runner,Duster, KSSA ಮುಂತಾದ ಕಂಪನಿಗಳು ಭಾಗವಹಿಸಿದೆ.
ITI, Polytechnic, Diploma, BE, MCA, Bcom & Engineering ಪದವೀಧರರ ಜೊತೆಗೆ 5ನೇ ತರಗತಿ ಮೇಲ್ಪಟ್ಟವರು ಸಹ ಭಾಗವಹಿಸಬಹುದು.Security Guards, Delivery Boys, Plumbers, Beautition, Facility support staff, Engineer ಮುಂತಾದ ಹುದ್ದೆಗಳಿಗೆ ಅವಕಾಶವಿದ್ದು ಆಕಾಂಕ್ಷಿಗಳು ಭಾಗವಹಿಸಿ ಇದರ ಉಪಯೋಗ ಪಡೆದರು. ಯಾವುದೇ ಪ್ರವೇಶ ಶುಲ್ಕ ಇಲ್ಲದೇ ಈ ಸೌಲಭ್ಯ ವಹಿಸಲಾಗಿತ್ತು.
ಈ ಸಂದರ್ಭದಲ್ಲಿ ಡಾ.ಎಂ.ಪಿ ಕರ್ಕಿ, ಬಿಜೆಪಿ ಪ್ರಮುಖರಾದ ನಾಗರಾಜ ನಾಯಕ ತೊರ್ಕೆ, ದಿನಕರ ಶೆಟ್ಟಿ,ಸೂರಜ ನಾಯ್ಕ ಸೋನಿ,ರೂಪಾಲಿ ನಾಯ್ಕ, ಹಾಗೂ ಇನ್ನಿತರರು ಹಾಜರಿದ್ದರು.