ಸದಾ ಸಾಮಾಜಿಕ ಕಾರ್ಯ ಹಾಗೂ ಜನ ಸ್ನೇಹಿ ನಡೆ ನುಡಿಗಳಿಂದಲೇ ಗುರುತಿಸಿಕೊಂಡ ಹಾಗೂ ಜನಾನುರಾಗಿಗಳಾಗಿ ಜನರ ಮನದಲ್ಲಿ ಉಳಿದ ಕುಮಟಾ ಹೊನ್ನಾವರ ಕ್ಷೇತ್ರದ ಮಾಜಿ ಶಾಸಕರು ಹಾಗೂ ಬಿ.ಜೆ‌.ಪಿ ಮುಖಂಡರಾದ ದಿನಕರ ಶೆಟ್ಟಿಯವರ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

IMG 20180203 WA0014 1

ಕುಮಟಾ ಹಾಗೂ ಸುತ್ತಲಿನ ಜನತೆಗೆ ಅಗತ್ಯ ಸಂದರ್ಭದಲ್ಲಿ ಸ್ನೇಹಿತರಂತೆ ಒದಗಿಬರುವ ಜನಾನುರಾಗಿ ನಾಯಕ ದಿನಕರ ಶೆಟ್ಟಿ ಎಂಬುದು ಹಲವರ ಅಭಿಮತ.

ಸತ್ವಾಧಾರ ನ್ಯೂಸ್ ಜೊತೆಗೆ ಮಾತನಾಡಿದ ಗಣಪತಿ ನಾಯ್ಕ, ದಿನದಿಂದ ದಿನಕ್ಕೆ ದಿನಕರ ಶೆಟ್ಟಿಯವರ ಪ್ರಭಾವ ಹೆಚ್ಚುತ್ತಿದೆ ಹಾಗೂ ಪಕ್ಷದಲ್ಲಿ ಅವರ ಕಾರ್ಯಚಟುವಟಿಕೆಯ ಬಗ್ಗೆ ಸಂತಸ ವ್ಯಕ್ತವಾಗಿದೆ ಎನ್ನುತ್ತಾರೆ.

ಅದಷ್ಟೇ ಅಲ್ಲ ಈ ಹಿಂದೆ ಕುಮಟಾ ಪದವಿ ಕಾಲೇಜಿಗೆ ಎರಡು ಕೋಟಿ ರೂ ಕಟ್ಟಡ ವ್ಯವಸ್ಥೆ, ಪಿಯು ಕಾಲೇಜಿಗೆ ಅನುಮತಿ ತರುವಲ್ಲಿ ದಿನಕರ ಶೆಟ್ಟಿಯವರ ಕಾರ್ಯ ಹಾಗೂ ಶ್ರಮದ ಬಗ್ಗೆ ಅವರ ಬೆಂಬಲಿಗರಿಗೆ ಅಪಾರ ಗೌರವವಿದೆಯಂತೆ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

IMG 20180203 WA0017

ಕುಮಟಾ ಬಸ್ ನಿಲ್ದಾಣದ ಮಂಜೂರಿ ಕುರಿತಾದ ಕೆಲಸ ,ಬೆಣ್ಣೆ ಕಾಲೇಜಿಗೆ ಜಾಗ ಮಂಜೂರಿ ಹಾಗೂ ಕಟ್ಟಡದ ವಿಷಯದಲ್ಲಿ ಅವರು ತೆಗೆದುಕೊಂಡಿದ್ದ ಮುತುವರ್ಜಿ ಮಾತ್ರ ಇನ್ನೂ ಹಲವು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.

ಲುಕ್ಕೇರಿಯಲ್ಲಿ ಹಾಲಕ್ಕಿ ಸಭಾಭವನ ಪೂರ್ಣಗೊಳಿಸಲು ದಿನಕರ ಶೆಟ್ಟಿಯವರು ಮಾಡಿದ ಸಹಾಯ ಮಾತ್ರ ಎಂದಿಗೂ ಮರೆಯುವಂತೆ ಇಲ್ಲ ಎಂಬುದು ಗಣಪು ಗೌಡರವರ ನುಡಿ.

ದೀವಗಿಯಲ್ಲಿ ನೂರಾರು ವರ್ಷಗಳಿಂದ ಮನೆ ಕಟ್ಟಿಕೊಂಡು ನೆಲೆಸಿರುವ ಭಂಡಾರಿ ಸಮಾಜ ,ಹಾಲಕ್ಕಿ, ಕ್ರಿಶ್ಚಿಯನ್‌ ಹಾಗೂ ಇನ್ನೂ ಅನೇಕ ಸಮಾಜದ ಜನರಿಗೆ ಪಟ್ಟಾ ಕೊಡಿಸುವಲ್ಲಿ ದಿನಕರ ಶೆಟ್ಟಿಯವರ ಕಾರ್ಯ ಮರೆಯುವಂತಿಲ್ಲ ಎನ್ನುತ್ತಾರೆ ಅಲ್ಲಿನ ನಿವಾಸಿಗಳು.

RELATED ARTICLES  ಹಿಂದೂ ಹುಡುಗಿಯರ ಮೈಯನ್ನು ಯಾರಾದ್ರೂ ಮುಟ್ಟಿದರೆ ಅಂತವರ ಕೈ ಕಡಿಯಿರಿ: ಅನಂತ ಕುಮಾರ್ ಹೆಗಡೆ.

IMG 20180203 WA0016

ಕಾರವಾರ – ಬೆಂಗಳೂರು, ಬೆಂಗಳೂರು – ಕಾರವಾರ ರೈಲು ಹೊನ್ನಾವರದಲ್ಲಿ ನಿಲುಗಡೆಗೆ ದಿನಕರ ಶೆಟ್ಟಿಯವರು ವಹಿಸಿದ ಮುತುವರ್ಜಿ ಹಾಗೂ ಶ್ರಮದ ಬಗ್ಗೆ ಗಣಪತಿ ನಾಯ್ಕ ಹೆಮ್ಮೆ ಪಡುತ್ತಾರೆ.

ಕುಮಟಾ-ಹೊನ್ನಾವರ ಮತದಾರ ಕ್ಷೇತ್ರದ ಮೂಲೆ ಮೂಲೆಯಲ್ಲಿನ ಹಳ್ಳಿಗಳ ಒಡನಾಟದಲ್ಲಿರುವ ದಿನಕರ ಶೆಟ್ಟಿಯವರಿಗೆ ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವಿದೆ,ಎಲ್ಲ ವರ್ಗದವರ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಸ್ಪಷ್ಟವಾದ ಕಲ್ಪನೆಯಿದೆಯೆನ್ನುವುದು ಸಾಲ್ಕೋಡನ ಪ್ರಕಾಶ ಭಟ್ಟ ಅವರ ಅಭಿಮತ.

IMG 20180203 WA0015

ಈ ಎಲ್ಲ ಪೂರಕ ಅಂಶಗಳು ಹಾಗೂ ಪಕ್ಷ ನಿಷ್ಠೆಗೆ ಇವರು ನೀಡುತ್ತಿರುವ ಒತ್ತು ಇವು ದಿನ ದಿನವೂ ದಿನಕರರ ಅಭಿಮಾನೀ ಬೆಂಬಲಿಗರ ಸಂಖ್ಯೆ ಏರುತ್ತಿರುವಲ್ಲಿ ಮಹತ್ತರ ಕಾರಣಗಳು ಎಂಬುದು ಕ್ಷೇತ್ರದ ಅಭಿಮಾನೀ ಜನತೆಯಿಂದ ಕೇಳಿ ಬರುತ್ತಿರುವ ಅಭಿಮಾನದ ಮಾತು.