ಹೊನ್ನಾವರ : ಕಳೆದ ಡಿಸೆಂಬರ್‍ನಲ್ಲಿ ಮೃತನಾದ ಬಡ ಮೀನುಗರ ಕುಟುಂಬದ ಯುವಕ ಪರೇಶ ಮೇಸ್ತ ಮನೆಗೆ ಸಚಿವ ಅನಂತಕುಮಾರ ಹೆಗಡೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ಸಮಯದಲ್ಲಿ ಪರೇಶ ತಂದೆ ತಾಯಿ ಸೇರಿದಂತೆ ಕುಟುಂಬದ ಸದಸ್ಯರು ನಮ್ಮ ಮಗನ ಸಾವಿನ ಸೂಕ್ತ ತನಿಖೆ ಮಾಡಿ ನ್ಯಾಯ ಒದಗಿಸಿ ಹಾಗೂ ತಪ್ಪಿತಸ್ದರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಭೇಡಿಕೊಂಡರು.

RELATED ARTICLES  ಚಿರನಿದ್ದೆಗೆ ಜಾರಿದಯುವ ಸಿ.ಎ.ವಿಷ್ಣು ಹೆಬ್ಬಾರ

ಮಗನ ಸಾವಿನ ವಿಷಯ ಹಾಗೂ ಸಂದರ್ಭಗಳನ್ನು ನಾವು ನೀಡಿದ ಕೇಸನ್ನು ಆದರಿಸಿ ಪೋಲಿಸರು ಅಫರಾದಿಗಳ ಬಂಧನ ನಡೆಸುತ್ತಿಲ್ಲ. ದಯಮಾಡಿ ಅಪರಾಧಿಗಳನ್ನು ಬಂಧಿಸಲು ಆಗ್ರಹಪಡಿಸುವಂತೆ ಕೇಳಿಕೊಂಡು ಭಾವುಕರಾದರು.

ಮೃತನ ಕುಟುಂಬಕ್ಕೆ ಸಚಿವರು 2ಲಕ್ಷ ರೂಪಾಯಿ ಪರಿಹಾರ ನೀಡಿದರು. ಅದೇ ರೀತಿ ಮಾಜಿ ಶಾಸಕ ದಿನಕರ ಶೆಟ್ಟಿ, ನಾಗರಜ ನಾಯ್ಕ ತೊರ್ಕೆ ತಲಾ 25 ಸಾವಿರ ವೆಂಕ್ರಟಮಣ ಹೆಗಡೆ ಸೂರಜ ನಾಯ್ಕ ಸೋನಿ ತಲಾ 10 ಸಾವಿರ ಪರಿಹಾರ ವಿತರಿಸಿದರು.

RELATED ARTICLES  ಹವ್ಯಕ ಮಹಾಮಂಡಲಕ್ಕೆ ಮೋಹನ್ ಹೆಗಡೆ ಅಧ್ಯಕ್ಷ

ಈ ಸಂದರ್ಭದಲ್ಲಿ ಉಮೇಶ ಮೇಸ್ತ, ಲೋಕೇಶ ಮೇಸ್ತ, ತಾಲೂಕ ಅಧ್ಯಕ್ಷ ಸುಬ್ರಾಯ ನಾಯ್ಕ, ಉಮೇಶನಾಯ್ಕ ರಾಜುಭಂಡಾರಿ, ವಿನಾಯಕ ಶೇಟ್, ಸೇರಿದಂತೆ ಬಿಜೆಪಿ ಮುಖಂಡರು ಉಪಸ್ದಿತರಿದ್ದರು.