ಹೊನ್ನಾವರ : ಕಳೆದ ವರ್ಷ ಡಿಸೆಂಬರ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನೇ ಬಹುತೇಕ ಸ್ತಬ್ಧಗೊಳಿಸಿದ ಕೊಲೆಯ ಆರೋಪಿಯನ್ನು ಸುಮಾರು ಎರಡು ತಿಂಗಳಿನ ನಂತರ ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿದೆ. 2017 ಡಿಸೆಂಬರ್ 6 ರಂದು ಕ್ಷುಲ್ಲಕ ಕಾರಣಕ್ಕೆ ಎರಡು ಕೋಮುಗಳ ನಡುವೆ ಘರ್ಷಣೆ ಏರ್ಪಟ್ಟಿತ್ತು. ಈ ವೇಳೆ ಇದೇ ಸ್ಥಳದಲ್ಲಿದ್ದ ಯುವಕ ಪರೇಶ್ ಮೇಸ್ತಾ ಕಾಣೆಯಾಗಿದ್ದು, ಎರಡು ದಿನದ ನಂತರ ಹೊನ್ನಾವರದ ಶಟ್ಟಿಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದನು.

RELATED ARTICLES  ಏಕಾಂಗಿಯಾಗಿ ಬಾವಿ ತೋಡಿದ್ದ ಗೌರಿ ನಾಯ್ಕಗೆ ‘ವೀರ ಮಹಿಳೆ’ ಪ್ರಶಸ್ತಿ

ಈ ಹಿನ್ನಲೆಯಲ್ಲಿ ಪರೇಶ್ ಮೇಸ್ತಾ ತಂದೆ ಕಮಲಾಕರ್ ಮೇಸ್ತಾ ತಮ್ಮ ಮಗನ ಕೊಲೆಯಾಗಿರುವ ಬಗ್ಗೆ ಹೊನ್ನಾವರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣವನ್ನು ಸಿಬಿಐಗೆ ವಹಿಸಿದ್ದರೂ ಈ ಕುರಿತು ತನಿಖೆ ನಡೆಸುತಿದ್ದ ಪೊಲೀಸರು ಗಲಭೆ ನಂತರ ಕಾಣೆಯಾಗಿದ್ದ ಆಪಾದಿತರನ್ನು ಬಂಧಿಸಲು ಹುಡುಕಾಟ ನಡೆಸಿತ್ತು.

ಖಚಿತ ಮಾಹಿತಿ ಆಧಾರದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ತಲೆಮರಿಸಿಕೊಂಡಿದ್ದ ಸಲೀಂ ಶೇಖ್ ನನ್ನು ಬಂಧಿಸಿದೆ. ಸಿಪಿಐ ಚೆಲುವರಾಜ ಅಪಾದಿತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೊನೆಗೂ ಸಲಿಂ ಬಂಧನದೊಂದಿಗೆ ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಹೊಸ ಬೆಳವಣಿಗೆಯಾದಂತಾಗಿದೆ. ಸಾದಾರಣವಾಗಿ ಎಲ್ಲಾ ಪ್ರಕರಣಗಳಲ್ಲಿ ಆರೋಪಿಗಳನ್ನು ಅತಿ ಸುಲಭವಾಗಿ ಬಂಧಿಸಿ ಪ್ರಕರಣ ಬಗೆಹರಿಸುತ್ತಿದ್ದ ಪೋಲಿಸರಿಗೆ, ಪರೇಶ್ ಪ್ರಕರಣದಲ್ಲಿ ಸಾಕಷ್ಟು ರಾಜಕೀಯ ಬೆರೆತು ಪ್ರಕರಣ ಕಬ್ಬಿಣದ ಕಡಲೆಯಾಗಿ ಪರಿಣಮಿಸಿತ್ತು

RELATED ARTICLES  ರೆಡಿಯಾಯ್ತು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ! ಉತ್ತರ ಕನ್ನಡದ ಕ್ಷೇತ್ರಗಳಿಗೆ ಸ್ಪರ್ಧಿಗಳು ರೆಡಿ?