ಹೊನ್ನಾವರ: ಸ್ಥಳೀಯ ನ್ಯೂ ಇಂಗ್ಲೀಷ್ ಸ್ಕೂಲ್ನಲ್ಲಿ ಶಾಲಾ ವಾರ್ಷಿಕೋತ್ಸವದ ನಿಮಿತ್ತ ಪ್ರಶಸ್ತಿ ಪತ್ರ ವಿತರಣಾಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಶೈಕ್ಷಣಿಕಕ್ಷೇತ್ರದಲ್ಲಿಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರಶಸ್ತಿ ನೀಡಿಗೌರವಿಸಲಾಯಿತು.ಸಾಂಸ್ಕøತಿಕ ಮತ್ತುಕ್ರೀಡಾ ಚಟುವಟಿಕೆಗಳಲ್ಲಿ ಅಸಾಧಾರಣ ಸಾಧನೆಗೈದ ವಿದ್ಯಾರ್ಥಿಗಳನ್ನು ಪ್ರಶಸ್ತಿ ನೀಡಿಗೌರವಿಸಲಾಯಿತು.

.ಕಾರ್ಯಕ್ರಮದಅಧ್ಯಕ್ಷತೆಯನ್ನು ನ್ಯೂಎಜ್ಯುಕೇಶನ್ ಸೊಸೈಟಿಯ ಸದಸ್ಯರಾದ ಶಿವಾನಂದ ಪ್ರಭು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಹೊನ್ನಾವರ ಕ್ಷೇತ್ರಶಿಕ್ಷಣಾಧಿಕಾರಿಗಳ ಪರವಾಗಿಕಛೇರಿಯದೈಹಿಕ ವಿಷಯ ಪರಿವೀಕ್ಷಕ ಎಸ್. ಎನ್‍ಗೌಡರವರು, ಪ್ರಶಸ್ತಿನೀಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಶಾಲೆಯ ಮುಖ್ಯಅಧ್ಯಾಪಕರಾದ ವಿ.ಎಸ್. ಅವಧಾನಿಯವರು ಪ್ರಾರಂಭದಲ್ಲಿ ಸ್ವಾಗತಿಸಿ ಪ್ರಸಕ್ತ ವರ್ಷದ ವರದಿವಾಚನ ಮಾಡಿದರು. ಮಕ್ಕಳ ಸ್ವರಚಿತಕವನ,ಕಥೆ ಚುಟುಕಗಳನ್ನೊಳಗೊಂಡ “ಮರಿದುಂಬಿ” ಹಸ್ತಪತ್ರಿಕೆಯನ್ನುಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಎಸ್. ಎನ್.ಗೌಡರು ಅನಾವರಣಗೊಳಿಸಿದರು.

RELATED ARTICLES  ಸಮರ್ಥ ಆಡಳಿತ ನೀಡಿದ ಮೋದಿಯವರ ಆಡಳಿತದ ಬಗ್ಗೆ ಜನರಿಗೆ ತಿಳಿಸಲು ನಾಳೆ ಕುಮಟಾದಲ್ಲಿ ಬೈಕ್ ರ್ಯಾಲಿ.

ಶಾಲೆಯ ಸಾಧನೆ ಸಾರುವ“ಚಿತ್ರಕಾವ್ಯ” ವನ್ನುಡಿಜಿಟಲ್ ಬೋರ್ಡ ಬಳಸಿ ಪ್ರದರ್ಶಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಯವರಾದ ರಘು ಪೈ ಉಪಸ್ಥಿತರಿದ್ದರು. ಜಯಂತ ನಾಯಕ ಶಿಕ್ಷಕರು ದತ್ತಿ ಬಹುಮಾನಗಳನ್ನು ಪ್ರಸ್ತುತಪಡಿಸಿದರು. ಸೂರಜ ನಾಯ್ಕ ಸಾಂಸ್ಕ್ರತಿಕ ಬಹುಮಾನಗಳ ಯಾದಿಯನ್ನು ಪ್ರಸ್ತುತಪಡಿಸಿದರೆ, ಲೋಕೇಶ ಚಂದಾವರ್‍ಕ್ರೀಡಾ ಪ್ರತಿಭೆಗಳ ಯಾದಿ ಮಂಡಿಸಿದರು. ಶಾಲಾ ಶಿಕ್ಷಕರಾದ ಅಶೋಕ ನಾಯ್ಕ ಹಾಗೂ ರಾಘವೇಂದ್ರ ಹೆಗಡೆಕಾರ್ಯಕ್ರಮ ನಿರೂಪಿಸಿದರು. ಎ. ಕೆ.ಭಟ್ಟ ವಂದಿಸಿದರು.ಶಾಲಾ ಶಿಕ್ಷಕರು ಕಾರ್ಯಕ್ರಮವನ್ನುಅಚ್ಚುಕಟ್ಟಾಗಿ ಸಂಘಟಿಸಿದ್ದರು.

RELATED ARTICLES  ಕರಾವಳಿ ಉತ್ಸವಕ್ಕೆ ಭರದ ಸಿದ್ಧತೆ. ಸಿದ್ಧವಾಗಿದೆ ಹೊಸ ವೇದಿಕೆ.

ಕುಮಾರಿ.ಸ್ನೇಹಾ ಸಂಗಡಿಗರು ಸ್ವಾಗತಗೀತೆ ಹಾಡಿದರು.ತದನಂತರ ನಡೆದ ಲಘುಮನರಂಜನಾಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭರತನಾಟ್ಯ, ನೃತ್ಯ, ಕಿರುನಾಟಕಎಲ್ಲರಗಮನ ಸೆಳೆದವು.