ಕುಮಟಾ: ಜನತೆಗೆ ಮನರಂಜನೆಗೆ ನಿತ್ಯವೂ ಹೊಸ ಹೊಸ ಕಾರ್ಯಕ್ರಮ ಉಣಬಡಿಸುತ್ತಿರುವ ಕುಮಟಾ ಉತ್ಸವದ ಮೂರನೇ ದಿನ ಸಂಪನ್ನವಾಗಿದ್ದು ಜನತೆ ಹಾಗ ಮೋಡಿಯಲ್ಲಿ ಮೈಮನ ಪುಳಕವಾಗಿಸಿಕೊಂಡರು.

ಲೋಕೇಶ್ ತಿಂಗಳರಾಯ ನೇತೃತ್ವದ ಚಕ್ರೇಶ್ವರಿ ಕಲಾತಂಡ ಕುಂದಾಪುರ ಅವರಿಂದ ಹಾಸ್ಯ ಕಾರ್ಯಕ್ರಮ ನೆರವೇರಿತು.

ಭಾರ್ಗವಿ ನೃತ್ಯ ತಂಡ ಉಡುಪಿ ಇವರಿಂದ ನಡೆದ ಸ್ಪೆಷಲ್ ಡ್ಯಾನ್ಸ್ ಹಾಗೂ ಕುಮಾರಿ ಪ್ರತೀಕ್ಷಾ ಭಟ್ ಬೆಂಗಳೂರು ಇವರಿಂದ ನಡೆದ ರಷ್ಯನ್ ರಿಂಗ್ ಡ್ಯಾನ್ಸ್ ಜನಾಕರ್ಷಣೆಯ ಕೇಂದ್ರಬಿಂದುವಾಗಿತ್ತು . ಹಾಸನದಲ್ಲಿ ನಡೆದ ಲೇಸರ್ ಶೋ ಜನರ ಮೈ ಮನ ಪುಳಕಗೊಳಿಸಿತು.

RELATED ARTICLES  ವಾಹನಗಳಿಗೆ ತಪ್ಪುತ್ತಿಲ್ಲ ಕಿರಿ ಕಿರಿ: ಕೈಗಾ-ಕೊಪ್ಪಳ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಎಂದು?

ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗು ಬೇಬಿ ಆದ್ಯ ಮತ್ತು ತಂಡದವರಿಂದ ನಡೆದ ರಸಮಂಜರಿ ಕಾರ್ಯಕ್ರಮ ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು .ರಂಗಿತರಂಗ ಚಲನಚಿತ್ರದ ನಟ ನಿರುಪ್ ಭಂಡಾರಿ ಮತ್ತು ನಟಿ ಆವಂತಿಕಾ ಶೆಟ್ಟಿ ಅವರ ಉಪಸ್ಥಿತಿ ಕಾರ್ಯಕ್ರಮದ ರಂಗು ಹೆಚ್ಚಿಸಿತ್ತು .

RELATED ARTICLES  ಹಳ್ಳಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಬೆಳಕು ಸಂಸ್ಥೆ.

ಇಂದು ನಡೆಯುವ ವೈವಿಧ್ಯಮಯ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಕಾಣಿಸಿಕೊಳ್ಳಲಿದ್ದು ಜನರು ಕಾತುರದಲ್ಲಿ ಕಾಯುತ್ತಿದ್ದಾರೆ .ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ಅವರಿಗೆ ಇದು ಪ್ರಥಮ ಕಾರ್ಯಕ್ರಮವಾಗಿರುವುದರಿಂದ ಜನರು ಬಹಳಷ್ಟು ನಿರೀಕ್ಷೆ ಹೊಂದಿದ್ದಾರೆ .