ಹೊನ್ನಾವರ: ತಾಲೂಕಿನ ಕಡತೋಕ ಪಂಚಾಯತಿಯ ಗುಡ್ಣಕಟ್ಟಾ ಊರಕೇರಿಯಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಹಂತ-4 (ಗಾಂಧಿ ಪಥ ಗಾಂಧಿ ಗ್ರಾಮ) ಯೋಜನೆಯಡಿಯಲ್ಲಿ ನಿರ್ಮಾಣವಾಗಲಿರುವ ಸೇತುವೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿತು.

ಅಂದಾಜು 5 ಕೋಟಿ 13 ಲಕ್ಷ ಅನುದಾನದ ಸೇತುವೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಭೂಮಿಪೂಜೆ ನೆರವೇರಿಸಿದರು.

RELATED ARTICLES  ಮುರ್ಡೆಶ್ವರ ಕಡಲ ತೀರದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ ಮೀನುಗಾರರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಶಾರದಾ ಮೋಹನ ಶೆಟ್ಟಿ ಅಭಿವೃದ್ಧಿ ನಮ್ಮ ಗುರಿ, ಇತರೆ ಯಾವುದೇ ಮಾತುಗಳಿಗೂ ಯಾರೂ ಕಿವಿಗೊಡಬಾರದು ಎಂದರು.

RELATED ARTICLES  ಕೊಳೆತ ರೀತಿಯಲ್ಲಿ ವ್ಯಕ್ತಿಯೊಬ್ಬನ ಶವ : ಕೆಲಕಾಲ ಗೊಂದಲ

ಈ ಸಂದರ್ಭದಲ್ಲಿ ಶೋಭಾ ನಾಯ್ಕ, ಕಿರಣ ಭಂಡಾರಿ,ಲಂಬೋದರ ನಾಯ್ಕ,ಎಂ ಎಸ್ ಹೆಗಡೆ, ಶ್ರೀನಾಥ ಶೆಟ್ಟಿ,ಪಂಚಾಯತ್ ಸದಸ್ಯರು, ಅಧಿಕಾರಿಗಳು ಹಾಗೂ ಊರ ನಾಗರಿಕರ ಉಪಸ್ಥಿತಿಯಲ್ಲಿ ಭೂಮಿಪೂಜೆ ನೆರವೇರಿತು.