ಕುಮಟಾ; ಇತ್ತಿಚ್ಚಿಗೆ ಬೆಂಗಳೂರಿನಲ್ಲಿ ನಡೆದ ಸಂಗೀತ “Take Up Voice” ಸ್ಪರ್ಧೆಯಲ್ಲಿ ಅಶೋಕ ಪಾಲೆಕರ ಇವರು ರಾಜ್ಯಮಟ್ಟದ ಚಿತ್ರ ಸಂಗೀತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪ್ರಶಸ್ತಿ ಪಡೆದಿದ್ದಾರೆ.
Step by step voice ಸಂಸ್ಥೆರವರ ಆಶ್ರಯದಲ್ಲಿ ಬೆಂಗಳೂರಿನ ಅತ್ತಿಬಲೆ ಕ್ರೀಡಾಂಗಣದಲ್ಲಿ ನಡೆದ “Tack up voice” ಸಂಗೀತ ಸ್ಪರ್ಧೆಯಲ್ಲಿ ಅಶೋಕ ಪಾಲೇಕರ ದ್ವಿತೀಯ ಸ್ಥಾನ ಪಡೆದಿರುವ ಇವರು ಕುಮಟಾದ ಹಲವಾರು ಮಕ್ಕಳಿಗೆ ಹಾಡುವ ಶೈಲಿ.ಅಭಿನಯ,ಶಬ್ಧ ಉಚ್ಚಾರ,ನಿರೂಪಣೆ ತರಭೇತಿ ನೀಡಿ ತಮ್ಮದೇ ಆದ “ಸ್ವರಾತ್ಮಿಕಾ ಮೆಲೋಡಿಯಸ್ ವಾಯ್ಸ್” ಮಕ್ಕಳ ಆರ್ಕೇಸ್ರ್ಟಾ ತಂಡ ರಚಿಸಿ ರಾಜ್ಯದ ಹಲವಾರು ಕಡೆಯಲ್ಲಿ ಪ್ರದರ್ಶನ ನೀಡಿ ಮನೆ ಮಾತಾಗಿದೆ.ಇವರಲ್ಲಿ ತರಭೇತಿ ಪಡೆದ ವಿದ್ಯಾರ್ಥಿಗಳು ” ಯುವ ಆರ್ಕೇಸ್ಟ್ರಾ ತಂಡ ರಚಿಸಿ ಕಾರ್ಯಕ್ರಮ ನೀಡುತ್ತಿರುವುದು ಸಂತಸ ತಂದಿದೆ ಮತ್ತು ರಾಜ್ಯ ಅಂತರಾಷ್ರ್ಠೀಯ ಮಟ್ಟದಲ್ಲಿ ಗಾಯಕರಾಗಿ ಹೊರಹೊಮ್ಮುತ್ತಿದ್ದಾರೆ.
ಇತ್ತಿಚಿಗೆ ಬಿತ್ತರವಾಗುತ್ತಿರುವ ಜಿ ಕನ್ನಡ ಲಿಟ್ಲಚಾಂಪ ನಲ್ಲಿ ಕುಮಟಾದ ದೀಕ್ಷಾ ನಾಯ್ಕ ಇವರ ವಿದ್ಯಾರ್ಥಿ ಯಾಗಿರುವುದು ಸ್ಮರೀಸಬಹುದು. ಉತ್ತಕ ಕನ್ನಡ ಜಿಲ್ಲೆಯೇ ಇದೊಂದೆ ಚಿತ್ರ ಸಂಗೀತ ತರಭೇತಿ ಕೇಂದ್ರ ಇರುವುದರಿಂದ ಹೊರ ತಾಲೂಕಿನ ವಿದ್ಯಾರ್ಥಿಗಳು ತರಬೇತಿ ಪೆಡಯುತ್ತಿದ್ದಾರೆ.
ರಾಜ್ಯಮಟ್ಟದ ದ್ವಿತೀಯ ಸ್ಥಾನಪಡೆದ ಇವರಿಗೆ ಸಂಗೀತ ಕಲಾಭಿಮಾನಿಗಳು ಅಭಿನಂದಿಸಿದ್ದಾರೆ.