ಭಟ್ಕಳ: ಹಾಡುಹಗಲೇ ವಾಹನವೊಂದನ್ನು ತಡೆದು ಇಬ್ಬರ ಮೇಲೆ ಹಲ್ಲೆ ಮಾಡಿದ್ದಲ್ಲದೇ ಅವರ ಬಳಿಯಿದ್ದ ಹಣ ಹಾಗೂ ಮೊಬೈಲ್‍ನ್ನು ದೋಚಿಕೊಂಡು ಪರಾರಿಯಾದ ಘಟನೆ ಇಲ್ಲಿನ ರಾ.ಹೆ.63ರ ವೆಂಕಟಾಪುರ ಬಳಿಯ ಐಸ್ ಫ್ಯಾಕ್ಟರಿ ಬಳಿ ನಡೆದಿದೆ.

ಘಟನೆಯಲ್ಲಿ ಕುಂದಾಪುರದ ತಲ್ಲೂರು ನಿವಾಸಿ ಕಷ್ಣ ಪೂಜಾರಿ ಮತ್ತು ಗುರುರಾಜ ಶೆಟ್ಟಿ ಹಲ್ಲೆಗೊಳಗಾದವರೆಂದು ತಿಳಿದು ಬಂದಿದೆ. ಇವರು ಉಪ್ಪಿನಕಾಯಿ ವಿತರಕರಾಗಿದ್ದು ಶನಿವಾರದಂದು ಉಪ್ಪಿನಕಾಯಿಯನ್ನು ಮುರುಡೇಶ್ವರದಲ್ಲಿ ವಿತರಿಸಿ ಮರಳಿ ಕುಂದಾಪುರಕ್ಕೆ ತಮ್ಮ ವಾಹನದಲ್ಲಿ ತೆರಳುತ್ತಿದ್ದ ಸಂಧರ್ಭದಲ್ಲಿ ಹಿಂಬದಿಯಿಂದ ಎರಡು ಬೈಕ್‍ನಲ್ಲಿ ಬಂದ ಐದಾರು ಮಂದಿ ಏಕಾಎಕಿ ತಮ್ಮ ವಾಹನಕ್ಕೆ ಹಿಂಬದಿಯಿಂದ ಕಲ್ಲನ್ನು ಎಸೆದು ಕಾರಿನ ಗಾಜನ್ನು ಪಡಿ ಮಾಡಿದ್ದರು. ಹಾಗೂ ಕಾರಿನತ್ತ ಬಂದು ಹಲ್ಲೆ ಮಾಡಿ ಅವರ ಬಳಿಯಿದ್ದ 4000 ಸಾವಿರ ನಗದು ಮತು ಮೊಬೈಲ್‍ನ್ನು ದೋಚಿ ಪರಾರಿಯಾಗಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.

RELATED ARTICLES  ಐಶಾರಾಮಿ ಕಾರಿನಲ್ಲಿ ಬಂದು ಗೋ ಕಳ್ಳತನ

ಆದರೆ ಈ ಕುರಿತಂತೆ ಇಲ್ಲಿನ ಗ್ರಾಮೀಣ ಪೊಲೀಸರು ಘಟನೆಯೂ ಒಂದು ಪರಸ್ಪರ ಜಗಳಕ್ಕೆ ಸಂಬಂಧಿಸಿದ ಪ್ರಕರಣವಾಗಿದ್ದು, ವಾಹನ ಓವರ್ ಟೇಕ್ ಮಾಡುವ ಸಂಧರ್ಬದಲ್ಲಿ ಎರಡು ವಾಹನಗಳ ಮಧ್ಯೆ ಪೈಪೋಟಿ ನಡೆದು ನಂತರ ಜಗಳಕ್ಕೆ ತಿರುಗಿದೆಂದು ಎಂದು ತಿಳಿಸಿದ್ದಾರೆ.

RELATED ARTICLES  ‘ಪ್ರಗತಿ ಮಾಹಿತಿ’ ಪ್ರಚಾರಾಂದೋಲನಕ್ಕೆ ಚಾಲನೆ

ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ಸಂಬಂಧ ಓರ್ವ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆದು ವಿಚಾರಿಸಲಾಗಿದೆ ಎಂದು ತಿಳಿದುಬಂದಿದೆ. ತನಿಖೆ ಮುಂದುವರೆದಿದೆ.