ಆಧುನಿಕ ಕಾಲದ ಆಹಾರ ಪದ್ಧತಿಯಿಂದ ಆರೋಗ್ಯಕ್ಕೆ ಹಲವಾರು ಸಮಸ್ಯೆಗಳು ಕಾಡುತ್ತವೆ. ಈ ವೇಗದ ಯುಗದಲ್ಲಿ ಸುಲಭವಾಗಿ ಬೇಗ ಮಾಡುವ ಆಹಾರಗಳನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ವಿಷಕಾರಿ ಪದಾರ್ಥಗಳು ಸೇರಿ, ಹೊಟ್ಟೆನೋವು, ಅಜೀರ್ಣ ಮತ್ತು ಮಲಬದ್ಧತೆಯಿಂದ ಸಮಸ್ಯೆಗಳು ಆಗಾಗ ಕಾಡುತ್ತವೆ. ಇದರಿಂದ ಕೆಟ್ಟ ಕೊಬ್ಬು ಉತ್ಪಾದನೆಯಾಗಿ ಬೊಜ್ಜಿನ ಸಮಸ್ಯೆಯೂ ಕಾಡಬಹುದು.

ಈ ಕಲ್ಮಶಗಳನ್ನು ಹೊರಹಾಕಿದರೆ ಆರೋಗ್ಯ ಉತ್ತಮವಾಗಿರುತ್ತದೆ. ಅದಕ್ಕೆ ಇಲ್ಲಿದೆ ನೋಡಿ 3 ಸರಳ ವಿಧಾನಗಳು:

ಸೇಬುಹಣ್ಣಿನ ಜ್ಯೂಸ್:
‘ದಿನಕ್ಕೊಂದು ಸೇಬು ವೈದ್ಯರನ್ನು ಇಡುವುದು ದೂರ’ ಎಂಬ ಗಾದೆ ಮಾತೇ ಇದೆ. ಹಾಗೆ ದಿನಕ್ಕೆ ಒಂದೆರಡು ಸೇಬು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿ ದಿನ ಬೆಳಗ್ಗೆ ಒಂದು ಲೋಟ ಸೇಬುಹಣ್ಣಿನ ರಸವನ್ನು ಸಕ್ಕರೆ ಬೆರೆಸದೆ ಹಾಗೆ ಕುಡಿದರೆ ಹೊಟ್ಟೆಯ ಕಲ್ಮಶಗಳು ಹೊರಬರಲು ಸಹಾಯ ಮಾಡುತ್ತವೆ. ಸೇಬು ಹಣ್ಣಿನಲ್ಲಿ ವಿಟಮಿನ್ ಭರಿತ ಪೆಕ್ಟಿನ್ ಪೋಷಕಾಂಶವಿದ್ದು ಇವು ಜೀರ್ಣಕ್ರಿಯೆಯಲ್ಲಿ ಹೆಚ್ಚು ಸಹಕಾರಿಯಾಗುತ್ತದೆ.

RELATED ARTICLES  ಬದುಕನ್ನು ತಿಂದುಹಾಕುತ್ತಿರುವ ತಂಬಾಕು!

ಪಪ್ಪಾಯ ಎಲೆಗಳು:
ಸಾಮಾನ್ಯವಾಗಿ ಜಂತುಹುಳಗಳಿಂದ ಹೊಟ್ಟೆಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಮಕ್ಕಳಲ್ಲಿ ಇದು ಗುದದ್ವಾರದಲ್ಲಿ ತುರಿಕೆ ಉಂಟುಮಾಡಿ ಅವರಿಗೆ ಬಹಳಷ್ಟು ತೊಂದರೆಯನ್ನುಂಟು ಮಾಡುತ್ತದೆ. ಈ ಜಂತುಹುಳಗಳನ್ನು ಹೊರಹಾಕಲು ಪಪ್ಪಾಯ ಎಲೆಗಳು ತುಂಬಾ ಸಹಾಯಕಾರಿ. ಪಪ್ಪಾಯ ಎಲೆಗಳ ರಸ ತಯಾರಿಸಿ ದೊಡ್ಡವರು ದಿನಕ್ಕೆ 1 ಲೋಟದಂತೆ ದಿನಾ ಕುಡಿಯಬೇಕು. ಇದಕ್ಕೆ ಸ್ವಲ್ಪ ಜೇನುತುಪ್ಪ ಕೂಡ ಸೇರಿಸಬಹುದು. ಸುಮಾರು 30 ದಿನ ದಿನಾ ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಕಲ್ಮಶ ಪೂರ್ತಿಯಾಗಿ ಹೊರಹೋಗಿ ಜಂತುಹುಳುಗಳು ಕೂಡ ನಾಶವಾಗುತ್ತವೆ.

RELATED ARTICLES  ನೋವು ನಿವಾರಕ ಲೇಹ್ಯಾ! ಇಲ್ಲಿದೆ ಅದ್ಭುತ ಔಷಧ

ಹರಳೆಣ್ಣೆ:
ಹರಳೆಣ್ಣೆ ಹೊಟ್ಟೆಯ ಸಮಸ್ಯೆಗೆ ಅನಾದಿಕಾಲದಿಂದಲೂ ಕಂಡುಕೊಂಡು ಬಂದ ಮನೆ ಔಷಧಿ. ದಿನಕ್ಕೆ ಸ್ವಲ್ಪ ಹರೆಳೆಣ್ಣೆ ಕುಡಿದರೆ ಹೊಟ್ಟೆಯ ವಿಷಕಾರಿ ಅಂಶಗಳು, ಜಂತುಹುಳುಗಳು ಮತ್ತು ಕ್ರಿಮಿಗಳು ನಾಶವಾಗುತ್ತವೆ.