ಕುಮಟಾ: ತಾಲೂಕಿನ ಮಿರ್ಜಾನ ಪಂಚಾಯತ್ ವ್ಯಾಪ್ತಿಯ ತಾರೀಬಾಗಿಲು ಮುಸ್ಲಿಂ ಮೇಲಿನಕೇರಿಯಲ್ಲಿ ರಸ್ತೆ ಕಾಮಗಾರಿಯ ಭೂಮಿ ಪೂಜೆ ನೆರವೇರಿತು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಧಿಯಿಂದ ಅಂದಾಜು 5 ಲಕ್ಷ ಅನುದಾನದ ರಸ್ತೆ ಕಾಮಗಾರಿಗೆ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಭೂಮಿ ಪೂಜೆ ನೆರವೇರಿಸಿದರು.

RELATED ARTICLES  ಬಹುಭಾಷಾ ನಟಿ ಮೀನಾ ಅವರ ಪತಿ ಇನ್ನಿಲ್ಲ..!

ಅಲ್ಪ ಸಂಖ್ಯಾತರು ಹಾಗೂ ಬಡವರ ಅಭಿವೃದ್ಧಿ ನಮ್ಮ ಕಾಯಕವಾಗಬೇಕು ಆಗ ಮಾತ್ರವೇ ಕರಗನಾಟಕದ ಅಭಿವೃದ್ಧಿ ಸಾಧ್ಯ ಹಾಗಾಗಿ ಕಾಂಗ್ರೇಸ್ ಸರಕಾರ ಅಭಿವೃದ್ಧಿಯ ಪಥದಲ್ಲಿ ಕರ್ನಾಟಕವನ್ನು ಕೊಂಡೊಯ್ಯುತ್ತಿದೆ ಎಂದರು.

RELATED ARTICLES  ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಸಾಹಿತಿ ಡಾ.ಆರ್.ಪಿ.ಹೆಗಡೆ ಸೂಳಗಾರ ಆಯ್ಕೆ

ಪಂಚಾಯತ್ ಸದಸ್ಯರ, ಅಧಿಕಾರಿಗಳ ಹಾಗೂ ಊರ ನಾಗರಿಕರ ಉಪಸ್ಥಿತಿಯಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಆಘಾ,ದೀಪಕ್ ಭಟ್ಟ, ಸುರೇಖಾ ವಿವೇಕರ ಹಾಗೂ ಗೋಪಾಲ ಅಂಬಿಗ ಉಪಸ್ತಿತರಿದ್ದರು.