ಗೋಕರ್ಣ: ಶ್ರೀ ಕ್ಷೇತ್ರ ಗೋಕರ್ಣದ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರ ಹೇಮಲಂಬ ಸಂವತ್ಸರದ ಶಿವರಾತ್ರಿ ಮಹೋತ್ಸವವು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ದಿನಾಂಕ 09-02-2018 ಶುಕ್ರವಾರದಿಂದ 17-02-2018 ಶನಿವಾರದವರೆಗೆ ಉಪಾಧಿವಂತ ಮಂಡಳದ ಸಹಯೋಗದೊಂದಿಗೆ ನವದಿನಗಳ ಪರ್ಯಂತ, ರೂಢಿಗತ ಪರಂಪರೆಯಂತೆ , ವೈಭವದಿಂದ ಜರುಗಲಿದೆ .

RELATED ARTICLES  ಉಚಿತ ವೈದ್ಯಕೀಯ  ಶಿಬಿರ ಭಾನುವಾರ

ಪ್ರತಿದಿನವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು , ಅಮೃತಾನ್ನ ಪ್ರಸಾದ ಭೋಜನ ವ್ಯವಸ್ಥೆ, ಸಾರ್ವಭೌಮ ಪ್ರಶಸ್ತಿ ಪುರಸ್ಕಾರ, ಧರ್ಮಸಭೆ , ವಿದ್ಯಾರ್ಥಿ ವೇತನ ವಿತರಣೆ, ದಿನಾಂಕ 13-02-2018 ಮಂಗಳವಾರ ಶಿವಯೋಗದ ಮಹಾಪರ್ವ, ದಿನಾಂಕ 16-02-2018 ಶುಕ್ರವಾರ ಮಹಾರಥೋತ್ಸವ ಜರುಗಲಿದೆ .

RELATED ARTICLES  ವಿಶ್ವಕಮ೯ ಗೆಳೆಯರ ಬಳಗ(ರಿ) ಭಟ್ಕಳ ಇದರ ಆಶ್ರಯದಲ್ಲಿ " ಮನೆಗೊಂದು ಗಿಡ" ಅಭಿಯಾನದ ಕಾರ್ಯಕ್ರಮ.