ಓದುತ್ತಿರುವ ಪುಸ್ತಕ ಬಿಡದಂತೆ ಓದಿಸಿಕೊಂಡು ಹೋಗುವುದು ಒಂದು ತೆರನಾದ ಯಶಸ್ಸಾದರೆ ಕಣ್ಣಲ್ಲಿ ನೀರು ತುಂಬಿ ಮುಂದೆ ಓದಲು ಸಾದ್ಯವೇ ಇಲ್ಲ ಎಂದು ಮುಚ್ಚಿಡುವ ಧಾರುಣ ಬದುಕಿನ ಕತೆ ಅಂಚೆ ಪೇದೆಯ ಆತ್ಮ ಕಥನ ಎಂಬುದಾಗಿ ಕವಯಿತ್ರಿ ಮಾಧವಿ ಭಂಡಾರಿ ಹೇಳಿದರು. ಅವರು ಹೊನ್ನಾವರ ತಾಲೂಕಿನ ಕಡತೋಕಾ ಜನತಾ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಚುಟುಕು ಕವಿ ವಿಡಂಬಾರಿಯವರ ಅಂಚೆ ಪೇದೆಯ ಆತ್ಮ ಕಥನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

RELATED ARTICLES  ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೇಸ್ ವಿಜಯ ಕುಮಟಾದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು.

ಸಹಯಾನ ಕೆರೆಕೋಣ, ಅನಿಕೇತನ ಸಂಸ್ಕøತಿ ಅಧ್ಯಯನ ಕೇಂದ್ರ ಕಡತೋಕ ಹಾಗೂ ಜನತಾ ವಿದ್ಯಾಲಯ ಕಡತೋಕ ಇವರ ಸಹಯೋಗದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು. ಅಧ್ಯಕ್ಷತೆ ವಹಿಸಿದ್ಧ ವಿದ್ಯಾಲಯದ ಪ್ರಾಂಶುಪಾಲರಾದ ದುರ್ಗಮ್ಮ ಪಿ.ಎಚ್. ಮಾತನಾಡಿ ನನ್ನ ಮತ್ತು ನಮ್ಮ ಸುಯೋಗ ದೊಡ್ಡದಿದೆ ಇಂತಹ ಗೌರವಾನ್ವಿತರು ಇರುವ ಊರಿನಲ್ಲಿ ನಾವೆಲ್ಲ ಇದ್ದೇವೆ ಎಂಬುದೇ ಹೆಮ್ಮೆ ಎಂದರು.

RELATED ARTICLES  ಅಸಂಘಟಿತ ವಲಯ ಕಾರ್ಮಿಕರಿಗೆ ಒಂದು ಬಾರಿ ಪರಿಹಾರಧನವಾಗಿ 5 ಸಾವಿರ ರೂ.ಗಳ ನೆರವು ಅರ್ಹ ಫಲಾನುಭವಿಗಳು ಪಡೆದುಕೊಳ್ಳುವಂತಾಗಬೇಕೆಂದು : ಡಾ.ಹರೀಶ ಕುಮಾರ ಕೆ

ಚಿಂತನ ರಂಗ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಕಿರಣ್ ಭಟ್ ಸಂಘಟನಾಪರ ಮಾತುಗಳನ್ನಾಡಿದರು. ಮುಖ್ಯೋಪಾಧ್ಯಾಯರಾದ ಉಷಾ ಭಟ್ ಮುಖ್ಯ ಅತಿಥಿಗಳಾಗಿದ್ದು ಉಪಸ್ಥಿತರಿದ್ದು ಮಾತನಾಡಿದರು. ವಿದ್ಯಾಧರ ಕಡತೋಕ ಪುಸ್ತಕದ ಕುರಿತಾಗಿ ಮಾತನಾಡಿದರು. ಕವಿ ವಿಡಂಬಾರಿ ಚುಟುಕು ವಾಚಿಸಿ ಎಲ್ಲರನ್ನೂ ಸ್ಮರಿಸಿದರು. ಉಪನ್ಯಾಸಕರಾದ ವಿ.ಆರ್.ಭಟ್ ಸ್ವಾಗತಿಸಿದರೆ ದಿನೇಶ್ ವೈದ್ಯ ವಂದಿಸಿದರು. ಪ್ರದೀಪ ಖರ್ವಾ ಕಾರ್ಯಕ್ರಮ ನಿರ್ವಹಿಸಿದರು.