ಮುಂಡಗೋಡ; ತಾಲೂಕಿನ ಮಳಗಿಯಲ್ಲಿರುವ ಜವಾಹರ ನವೋದಯ ವಿದ್ಯಾಲಯವು ಸಮಗ್ರ ಹಾಗೂ ನಿರಂತರ ಸ್ವಚ್ಚತೆಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೆ ಅತ್ಯುತ್ತಮ ಪ್ರಶಸ್ತಿಯ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯಡಿಯಲ್ಲಿ 2017-18 ನೇ ಸಾಲಿನ ಸ್ವಚ್ಚ ವಿದ್ಯಾಲಯ ಪುರಸ್ಕಾರ ಮಾನ್ಯ ಜಿಲ್ಲಾಧಿಕಾರಿಗಳಿಂದ ಬಂದ ಪುರಸ್ಕಾರವನ್ನು ಮುಂಡಗೋಡ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎಂ ಬಸವರಾಜಪ್ಪನವರು ಜವಾಹರ ನವೋದಯ ಪ್ರಾಂಶುಪಾಲರಾದ ವ್ಹಿ.ಬಿ.ಲಮಾಣಿಯವರಿಗೆ ನೀಡಲಾಯಿತು ಈ ಸಂದರ್ಭದಲ್ಲಿ ಸಮನ್ವಯ ಅಧಿಕಾರಿ ಆನಂದ ಕೊರವರ, ಬಿಆರ್‍ಪಿ ಸೋಮಶೇಖರ ಲಮಾಣಿ, ಜವಾಹರ ನವೋದಯ ವಿದ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

RELATED ARTICLES  ಕುಮಟಾದ ಹೆಗಡೆಯಲ್ಲಿ ಮನೆ ನಿರ್ಮಾಣದ ಸಂದರ್ಭದಲ್ಲಿ ಅವಘಡ: ಸೆಂಟ್ರಿಂಗ್ ಕೆಲಸಗಾರ ಸಾವು!!