ಕುಮಟಾ : ಜಗತ್ತಿನ ಏಕಮೇವ ಭಾಷೆ ಎಂದರೆ ಸಂಗೀತವಾಗಿದ್ದು, ಇದರಲ್ಲಿ ಎಲ್ಲರನ್ನು ಆಕರ್ಷಿಸಬಹುದಾದ ಮಹಾನ್ ಶಕ್ತಿ ಅಡಗಿದೆ ಎಂದು ಕೆಪಿಟಿಸಿಎಲ್ ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ವಿ.ಐ.ಹೆಗಡೆ ಅಭಿಪ್ರಾಯಪಟ್ಟರು.

ಅವರು ಕೂಜಳ್ಳಿ ಕುಳಿಹಕ್ಕಲ ಶ್ರೀ ಶಾಂತಿಕಾ ಪರಮೇಶ್ವರಿ ಸಭಾಭವನದಲ್ಲಿ ಜರುಗಿದ ಸ್ವರ ಸಂಗಮದ 20ನೇ ವಾರ್ಷಿಕೋತ್ಸವ ಹಾಗೂ ಸನ್ಮಾನ ಸಮರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಂಗೀತ ಇಲ್ಲದ ಕ್ಷೇತ್ರವಿಲ್ಲ. ಆರೋಗ್ಯ ಕಾಪಾಡುವಲ್ಲಿಯೂ ಪ್ರಭಾವಬೀರುತ್ತದೆ. ನಮ್ಮನ್ನು ನಾವು ಉದ್ಧರಿಸಿಕೊಳ್ಳಲು ಸರಳ ಮಾರ್ಗ ಎಂದರೆ ಸಂಗೀತ. ಇಂತಹ ಸಂಗೀತವನ್ನು ಸ್ವರ ಸಂಗಮ ಪ್ರೋತ್ಸಾಹಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

RELATED ARTICLES  ಸದ್ಗುಣಗಳನ್ನು ರೂಢಿಸಿಕೊಳ್ಳುವುದೇ ನಿಜವಾದ ವಿದ್ಯಾಭ್ಯಾಸ -ಬ್ರಹ್ಮಾನಂದ ಭಾರತೀ ಸ್ವಾಮೀಜಿ

ಮುಖ್ಯ ಅತಿಥಿಯಾಗಿ ತೆರಿಗೆ ಸಲಹೆಗಾರ ಎಂ.ಕೆ.ಹೆಗಡೆ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಸಂಗೀತ ಶಾಲೆ ನಡೆಸುವುದು ಕಷ್ಠಕರ. ಆದರೂ 20 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಸ್ವರ ಸಂಗಮದ ಕಾರ್ಯ ಶ್ಲಾಘನೀಯವಾಗಿದೆ ಎಂದರು. ರಾಷ್ಟ್ರಪ್ರಶಸ್ಥಿ ಪುರಸ್ಕøತ ಕೂಜಳ್ಳಿಯವರಾದ ಮುಂಬೈನ ಶ್ರೀಪತಿ ಗಣಪತಿ ಹೆಗಡೆ ಸಾಧನೆಗಾಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸ್ವರ ಸಂಗಮ ಉಪಾಧ್ಯಕ್ಷ ರಮೇಶ ಭಟ್ಟ, ಎಂ.ಎಂ.ಹೆಗಡೆ ಹೊಲನಗದ್ದೆ ಮತ್ತಿತರರು ಇದ್ದರು. ಮೇದಾ ಸಂಗಡಿಗರು ಪ್ರಾರ್ಥಿಸಿದರು. ಸ್ವರ ಸಂಗಮ ಅಧ್ಯಕ್ಷ ಸುಬ್ರಾಯ ಜಿ.ಭಟ್ಟ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಟಿ.ಎನ್.ಭಟ್ಟ ಕಾರ್ಯಕ್ರಮ ನಿರೂಪಿಸಿದರು. ಸ್ವಸಂಗಮದ ಸದಸ್ಯರುಗಳು ಸಹಕರಿಸಿದರು.

RELATED ARTICLES  ಮದ್ಯದ ಜೊತೆಗೆ ವಿಷ ಸೇವಿಸಿ ಆತ್ಮಹತ್ಯೆ ಯತ್ನ

ಆರಂಭದಲ್ಲಿ ಸ್ವರ ಸಂಗಮ ವಿದ್ಯಾರ್ಥಿಗಳಿಂದ ಸಂಗೀತ, ಬಳಿಕ ಬೋಳತಟ್ಟೆ ಈಶ್ವರ ಶಾಸ್ತ್ರೀ ಕೊಳಲು ಹಾಗೂ ಸಭಾಕಾರ್ಯಕ್ರಮದ ಬಳಿಕ ಶ್ರೀ ಪತಿ ಹೆಗಡೆ ಮುಂಬ್ಯೆ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರುಗಿತು. ಗಣಪತಿ ಹೆಗಡೆ ಹರಿಕೇರಿ ತಬಲಾ, ಸಿಬ್ರಹ್ಮಣ್ಯ ಹೆಗಡೆ ತಬಲಾ ಹಾಗೂ ಗೌರೀಶ ಯಾಜಿ ಕೂಜಳ್ಳಿ ಸಂವಾದಿನಿ ಸಾಥನೀಡಿದರು.
ಫೋಟೊ : ಕಾರ್ಯಕ್ರವನ್ನು ವಿ.ಐ.ಹೆಗಡೆ ಉದ್ಘಾಟಿಸಿದರು, ರಾಷ್ಟ್ರಪ್ರಶಸ್ಥಿ ಕಲಾವಿದ ಶ್ರೀಪತಿ ಹೆಗಡೆಗೆ ಸನ್ಮಾನ, ಶ್ರೀಪತಿ ಹೆಗಡೆ ಹಾಡುತ್ತಿರುವುದು.