ಕುಮಟಾ: ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಓರ್ವ ವ್ಯಕ್ತಿ ಮರಣಹೊಂದಿದ್ದು ಆತನ ಸಾವಿಗೆ ಅಸ್ಪತ್ರೆಯ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆತನ ಕಡೆಯವರು ಪ್ರತಿಭಟನೆ‌ನಡೆದ ಘಟನೆಯೊಂದು ನಡೆದಿದೆ.

ವ್ಯಕ್ತಿಯ ಸಾವಿಗೆ ಆಸ್ಪತ್ರೆಯಲ್ಲಿ ತೋರಿದ ನಿಷ್ಕಾಳಜಿಯೇ ಕಾರಣ ಎಂದು ಮನೆಯವರು ದೂರಿದ್ದಾರೆ. ಈ ಸಂದರ್ಭದಲ್ಲಿ ಆಸ್ಪತ್ರೆಗೆ ಧಾವಿಸಿದ ಬಿಜೆಪಿ ಮುಖಂಡ ಸೂರಜ್ ನಾಯ್ಕ ಸೋನಿ ಕುಟುಂಬದವರಿಂದ ವಿಷಯ ತಿಳಿದರು.

ನಂತರ ಪ್ರತಿಕ್ರಿಯೆ ನೀಡಿದ ಅವರು ನಿರ್ಲಿಪ್ತ ಶಾಸಕಿಯ ಧೊರಣೆಯಿಂದ ಕುಮಟಾ ಸರ್ಕಾರಿ ಆಸ್ಪತ್ರೆಯ ವ್ಯವಸ್ಥೆ ಅಸ್ಥವ್ಯಸ್ಥವಾಗಿದೆ.

RELATED ARTICLES  ಶ್ರೀ ಶ್ರೀ ಶಂಕರಾನಂದ ಸ್ವಾಮಿಗಳಿಗೆ ಗೋಕರ್ಣ ಗೌರವ

ಸರ್ಕಾರ ಡಿ ಗ್ರೂಪ್ ನೌಕರರಿಗೆ ೮೦೦೦ ವೇತನ ಕೊಡುತ್ತಿದ್ದರು ಅವರಿಗೆ ಅಂದಾಜು ೪೦೦೦ ವೇತನ ಸಿಗುತ್ತಿದೆ . ಇದು ಹೇಗೆ ಮತ್ತು ಇದಕ್ಕೆಲ್ಲಾ ಕಾರಣ ಏನು ..?? ತಾಲೂಕಾ ಆಸ್ಪತ್ರೆಯಲ್ಲಿ ನೇರ ನೇಮಕಾತಿ ಮಾಡದೆ ೧೯ ಡಿ ಗ್ರೂಪ್ ಸಹಾಯಕರನ್ನು NGO ಮುಖಾಂತರ ನೇಮಕಮಾಡಿಕೊಂಡಿದ್ದಾರೆ ಇದೊಂದು ದೊಡ್ಡ ಕರ್ಮಕಾಂಡ.

ಕೆಲಸದಿಂದ ತೆಗೆದು ಹಾಕುವ ಭಯದಿಂದ ಅವರಿಗಾದ ಅನ್ಯಾಯವನ್ನು ಹೇಳಲು ಹಿಂದೇಟು ಹಾಕುತ್ತಿದ್ದಾರೆ ಮತ್ತು ಇದರಿಂದ ಕೆಲಸ ಮಾಡಲು ಅವರಿಗೆ ನಿರಾಸಕ್ತಿಯಾಗಿದೆ . ನರೇಂದ್ರ ಮೋದಿಯವರು ಹೇಳಿದಂತೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಕಮೀಷನ ಸರ್ಕಾರವಾಗಿದೆ . ಕುಮಟಾದ ಈ ಕಮೀಷನ್ ಕರ್ಮಕಾಂಡಕ್ಕೆ ನಾನು ನೇರವಾಗಿ ಶಾಸಕಿ ಶಾರದಾ ಶೆಟ್ಟಿಯವರ ಮೇಲೆ ಆರೋಪ ಮಾಡುತ್ತೇನೆ . ನಿಮ್ಮ ಕಮೀಷನ್ ಆಸೆಗಾಗಿ ಬಡ ಜನರಿಗೆ ಒಳ್ಳೆಯ ಚಿಕಿತ್ಸೆ ಒದಗಿಸುತ್ತಿರುವ ಆಸ್ಪತ್ರೆಯ ವೈದ್ಯರ ಹೆಸರು ಮತ್ತು ಚಿಕಿತ್ಸೆಗಾಗಿ ಬರುವ ಬಡ ಜನರ ಜೀವ ಬಲಿ ತೆಗೆದುಕೊಳ್ಳದಿರಿ ಎಂದು ಶಾಸಕರನ್ನು ಪ್ರಶ್ನಿಸಿದರು.

RELATED ARTICLES  ಕ್ರೀಡಾ ಚಟುವಟಿಕೆಗಳು ಪರಸ್ಪರರಲ್ಲಿ ಸೌಹಾರ್ದತೆಯನ್ನು ಮೂಡಿಸುತ್ತವೆ- ನಾಗರಾಜ ನಾಯಕ ತೊರ್ಕೆ.