ಶಿರಸಿ : ಅಶ್ವಿನಿ ಕುಮಾರ ಭಟ್ ನಿರ್ದೇಶನದಲ್ಲಿ ರೂಪುಗೊಂಡಿರುವ 40 ನಿಮಿಷದ ಸಾಕ್ಷ್ಯ ಚಿತ್ರ ‘ಅಘನಾಶಿನಿ’ ಅಮೇರಿಕಾದ ಕೊಲೊರಾಡೋ ಪರಿಸರ ಚಲನಚಿತ್ರೋತ್ಸವ, ಕ್ಯಾಲಿಫೋರ್ನಿಯಾ ಬೊರ್ರೆಗೊ ಸ್ಪ್ರಿಂಗ್ಸ್ ಫಿಲ್ಮ್ ಫೆಸ್ಟಿವಲ್ ಹಾಗೂ ಇಂಪ್ಯಾಕ್ಟ್ ಡಾಕ್ ಅವಾರ್ಡ್ ನ “ಎಕ್ಸಲೆನ್ಸ್ ಪ್ರಶಸ್ತಿ” ಆದಿಯಾಗಿ ಈ ವರೆಗೆ ಒಟ್ಟೂ ಒಂಬತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿದೆ.

ಸಾಕ್ಷ್ಯಚಿತ್ರವು ನದಿ ಪರಿಸರ ಮತ್ತು ಜನಜೀವನವು ನದಿಯೊಂದಿಗೆ ಹೊಂದಿರುವ ಸಂಬಂಧವನ್ನು ನವಿರಾಗಿ ಕಟ್ಟಿಕೊಡುತ್ತದೆ. ನದಿಯ ನಿರೂಪಣೆಯಲ್ಲೇ ಚಿತ್ರ ಮೂಡಿಸಿರುವುದು ಈ ಸಾಕ್ಷ್ಯಚಿತ್ರದ ಹೆಗ್ಗಳಿಕೆ. ಕನ್ನಡ ಅವತರಣಿಕೆಗೆ ಸಹನಾ ಬಾಳ್ಕಲ್ ಮತ್ತು ಇಂಗ್ಲೀಷ್ ಅವತರಣಿಕೆಗೆ ವಾಸಂತಿ ಹರಿಪ್ರಕಾಶ್ ಧ್ವನಿ ನೀಡಿದ್ದು, ಪ್ರವೀಣ್ ಡಿ ರಾವ್ ಸಂಗೀತ ನಿರ್ದೇಶಿಸಿದ್ದಾರೆ.

RELATED ARTICLES  ನದಿಪಾತ್ರಗಳಲ್ಲಿನ ಮರಳು ದಿಬ್ಬಗಳಿಂದ ಮರಳು ತೆಗೆಯುವಿಕೆ ಹಾಗೂ ಸಾಗಾಣಿಕೆಗೆ ಬ್ರೇಕ್..! ಜಿಲ್ಲಾಧಿಕಾರಿಗಳ ಆದೇಶ.

ಹಾಲಿವುಡ್ ಅಂತರಾಷ್ಟ್ರೀಯ ಸ್ವತಂತ್ರ ಸಾಕ್ಷ್ಯಚಿತ್ರ ಪ್ರಶಸ್ತಿ, ಅಮೇರಿಕಾದ ಜಾರ್ಜಿಯಾ ಸ್ಪಾಟ್ ಲೈಟ್ ಡಾಕ್ – “ಗೋಲ್ಡ್ ಅವಾರ್ಡ್”, ಇಸ್ರೇಲ್ ನಜರೆತ್ ಫಿಲ್ಮ್ ಫೆಸ್ಟಿವಲ್ ನ “ಫೈನಲಿಸ್ಟ್” ಗಳಿಗೆ ಆಯ್ಕೆಯಾಗಿರುವುದಲ್ಲದೇ ಕಾಂಬೋಡಿಯಾ ಇಂಟನ್ರ್ಯಾಷನಲ್ ಫಿಲ್ಮ್ ಫೆಸ್ಟಿವಲ್,ಮೂವಿಂಗ್ ವಾಟರ್ ಫಿಲ್ಮ್ ಫೆಸ್ಟಿವಲ್ಫ್ ಮತ್ತು ಕಾಶ್ಮೀರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಪರಿಸರ ಚಲನಚಿತ್ರ ಪ್ರಶಸ್ತಿಗಳ “ಅಧಿಕೃತ ಆಯ್ಕೆ”ಗೆ ಭಾಜನವಾಗಿದೆ.

ಸಾಕ್ಷ್ಯಚಿತ್ರವು ಇಂಗ್ಲೀಷ್ ಮತ್ತು ಕನ್ನಡ ಅವತರಣಿಕೆ ಹೊಂದಿದ್ದು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲದೇ ರಾಜ್ಯಾದ್ಯಂತ ಸುಮಾರು ಮೂವತ್ತಕ್ಕೂ ಹೆಚ್ಚು ಬಾರಿ ವಿವಿಧ ಕಡೆಗಳಲ್ಲಿ ಪ್ರದರ್ಶನಗೊಂಡಿದೆ.

RELATED ARTICLES  ಸರ್ಕಾರಿ ಶಾಲೆ ಉಳಿವಿಗೆ ದ್ವಿಭಾಷೆ ಅಗತ್ಯ : ಸುಬ್ರಾಯ ವಾಳ್ಕೆ

ಭಾರತದ ಭೂದೃಶ್ಯಗಳ ಅನನ್ಯ ಛಾಯಾಗ್ರಹಣದಲ್ಲಿ ತೊಡಗಿಕೊಂಡಿರುವ ಲ್ಯಾಂಡ್ಸ್ಕೇಪ್ ವಿಝಾಡ್ರ್ಸ್ ಎಂಬ ಛಾಯಾ ಸಂಸ್ಥೆಯಿಂದ ಹೊರಬಂದಿರುವ “ಅಘನಾಶಿನಿ’ಯು ಕ್ರೌಡ್ ಫಂಡಿಂಗ್ ಮತ್ತು ರೋಹಿಣಿ ನಿಲೇಕಣಿ ಫಿಲಾನಥ್ರೋಪಿಸ್ ಸಹಭಾಗಿತ್ವದಲ್ಲಿ ನಿರ್ಮಾಣ ಗೊಂಡಿದೆ. ಸುನಿಲ್ ಹೆಗಡೆ, ಶ್ರೀ ಹರ್ಷ ಗಂಜಾಂ ಮತ್ತಿತರು ಛಾಯಾ ತಂಡದಲ್ಲಿದ್ದಾರೆ.
ನದಿ ಕಣಿವೆಯ ದೇವರ ಕಾಡು, ರಾಮಪತ್ರೆ ಜಡ್ಡಿ, ಸಿಂಗಳೀಕ ಪ್ರಪಂಚ, ಹೊಳೆಯುವ ಶಿಲೀಂಧ್ರ, ಲವಣಯುಕ್ತ ನೀರಿನಲ್ಲಿ ಬೆಳೆಯಬಲ್ಲ ಭತ್ತ, ಅಳಿವೆಯ ಬಳಚಿನ ಶ್ರೀಮಂತಿಕೆ, ಜಗತ್ತಿನಲ್ಲಿ ಕೆಲವೇ ಸ್ಥಳಗಳಲ್ಲಿ ಸಂಭವಿಸುವ ಚಂದ್ರಧನುಷ್ ಇತ್ಯಾದಿ ವಿಸ್ಮಯಗಳನ್ನು ಸಾಕ್ಷ್ಯಚಿತ್ರ ನವಿರಾಗಿ ಕಟ್ಟಿಕೊಡುತ್ತದೆ.