ಅಂಕೋಲಾ : ಶೆಟಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಲನ ಅದ್ದೂರಿಯಿಂದ ನಡೆಯಿತು.

ಸಮ್ಮೇಳನವನ್ನು ತಾ.ಪಂ ಅಧ್ಯಕ್ಷೆ ಸುಜಾತಾ ಗಾಂವಕಾರ ಉದ್ಘಾಟಿಸಿ ಮಾತನಾಡಿ ಖಾಸಗಿ ಶಾಲೆಗೆ ಕಡಿಮೆಯಿಲ್ಲದಂತೆ ಈ ಶಾಲೆಯು ಎಲ್ಲ ಶೈಕ್ಷಣಿಕ ಮತ್ತು ಭೌತಿಕ ಸೌಲಭ್ಯವನ್ನು ಹೊಂದಿರುತ್ತದೆ. ಎಂದು ಹೇಳಿದರು.

ಶೆಟಗೇರಿ ಗ್ರಾ.ಪಂ ಅಧ್ಯಕ್ಷ ಶಶಿಧರ ನಾಯಕ ಅಧ್ಯಕ್ಷತೆ ವಹಿಸಿದ್ದರು. ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ವಿನೋದ ಜಿ. ನಾಯಕ ಹಸ್ತಪತ್ರಿಕೆಯನ್ನು ಉದ್ಘಾಟಿಸಿದರು.

RELATED ARTICLES  ನಾಗಾಂಜಲಿ ನಾಯ್ಕ ಮನೆಗೆ ಭೇಟಿ ನೀಡಿ ಸನ್ಮಾನಿಸಿದ ಕೇಂದ್ರ ಮಂತ್ರಿ ಅನಂತಕುಮಾರ ಹೆಗಡೆ.

ಮುಖ್ಯೋಪಾಧ್ಯಾಪಕ ನಾರಾಯಣ ಬಿ. ನಾಯಕರವರಿಗೆ ನಾಗರಿಕ ಸನ್ಮಾನ ನಡೆಯಿತು. ತಾ.ಪಂ ಸದಸ್ಯೆ ಶಾಂತಿ ಬಿ. ಆಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವ್ಹಿ.ಟಿ. ನಾಯಕ, ಊರ ಗಣ್ಯರಾದ ಆರ್.ವ್ಹಿ. ನಾಯಕ ಹೊಸಕೇರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಆನಂದ ಬಿ. ಗಾಂವಕಾರ, ಎಸ್.ಡಿ.ಎಮ್.ಸಿ. ಅಧ್ಯಕ್ಷೆ ಮಮತಾ ಎಸ್. ನಾಯಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

RELATED ARTICLES  ಶ್ರೀಮಯ ಯಕ್ಷಗಾನ ಗುರುಕುಲ ಕಲಾ ಕೇಂದ್ರಕ್ಕೆ ಅರ್ಜಿ ಆಹ್ವಾನ

ಶಿಕ್ಷಕ ಗೌರೀಶ ಎಚ್. ನಾಯಕ ವರದಿ ವಾಚಿಸಿದರು, ಮೀರಾ ಎಚ್. ನಾಯಕ, ಮಂಗಲಾ ಆರ್. ನಾಯಕ, ಮುಕ್ತಾ ಎಸ್. ನಾಯಕ ಕಾರ್ಯಕ್ರಮ ನಿರೂಪಣೆ ಮಾಡಿದರು.