ಕುಮಟಾ-ಹೊನ್ನಾವರ ಹಾಗೂ ಸುತ್ತಮುತ್ತಲಿನ ಜನತೆಗೆ ‘ನಾಗರಾಜ ನಾಯಕ ತೊರ್ಕೆ’ ಎಂಬುದು ಹೊಸ ಹೆಸರೇನೂ ಅಲ್ಲ . ಮಕ್ಕಳಿಂದ ಹಿಡಿದು ವೃದ್ಧರವರೆಗೆ,ವಿದ್ಯಾರ್ಥಿಗಳಿಂದ ಹಿಡಿದು ಶಿಕ್ಷಕ-ಪಾಲಕರವರೆಗೆ,ಬಡವ ಬಲ್ಲಿದವರೆಲ್ಲರಿಗೂ ‘ನಾಗರಾಜ ನಾಯಕ’ರ ಪರಿಚಯವಿದೆ,ಆತ್ಮೀಯತೆ ಯಿದೆ,ಗೌರವವಿದೆ. ನಾಗರಾಜ ನಾಯಕ ಬೆಳೆದಿರುವುದು ತಮ್ಮ ಸಮಾಜಮುಖಿ ಕಾರ್ಯಗಳು ಹಾಗೂ ಎಲ್ಲರನ್ನೂ ಪ್ರೀತಿಸುವ ಅತ್ಯಂತ ವಿಶೇಷ ಗುಣಗಳಿಂದ..

ಹೌದು , ತಾನು ಅನುಭವಿಸಿದ ಕಷ್ಟ ಕಾಲದ ಆ ದಿನಗಳು ಇನ್ಯಾರ ಜೀವನದಲ್ಲೂ ಬರಬಾರದು,ಸಮಾಜದ ಋಣವನ್ನೂ ಸಾಧ್ಯವಾದಷ್ಟು ತೀರಿಸಬೇಕು ಎನ್ನುವ ಉದ್ದೇಶದಿಂದ “ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್” ಅನ್ನು ಸ್ಥಾಪಿಸಿ ಆ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ನಾಗರಾಜ ನಾಯಕ “ಜನ ಮನದ ನಾಯಕ” ಎಂಬುದು ವೆಂಕಟೇಶ್ ಗೌಡ ಅವರ ಅಭಿಪ್ರಾಯ .

FB IMG 1517977958950

‘ಸತ್ವಾಧಾರ ನ್ಯೂಸ್’ ಜೊತೆಗೆ ಮಾತನಾಡಿದ ವೆಂಕಟೇಶ, ನಾಗರಾಜ್ ನಾಯಕರವರ ಕುರಿತಾದ ತಮ್ಮ ಅಭಿಮಾನವನ್ನು ಬಿಚ್ಚಿಟ್ಟರು . ‘ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್’ ಅನ್ನು ಸ್ಥಾಪಿಸಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸುತ್ತ ,ಶಿಕ್ಷಕರನ್ನು- ಆಡಳಿತ ಮಂಡಳಿಯವರನ್ನೂ ಗೌರವಿಸುತ್ತಾ ಬಂದವರು ನಾಗರಾಜ ನಾಯಕ ರವರು. .ಈ ಕಾರ್ಯಗಳಿಂದಾಗಿ ಸಮಾಜಕ್ಕೆ ಅಗತ್ಯವಿದ್ದ ಶಿಕ್ಷಣ ಪ್ರೇಮಿಯಾಗಿ ನಮ್ಮ ಮುಂದೆ ಕಾಣಿಸಿಕೊಂಡವರು.

RELATED ARTICLES  ಮಳೆಗೆ ಕೊಚ್ಚಿಹೋದ ಸೇತುವೆ: ವಾಹನ ಸವಾರರ ಪರದಾಟ

ಇವರಲ್ಲಿನ ಶಿಕ್ಷಣ ಪ್ರೇಮದ ಗುಣದಿಂದಲೇ ಮಕ್ಕಳ ಹಾಗೂ ಪಾಲಕರ ಮನದಲ್ಲಿ ನಾಗರಾಜ ನಾಯಕ ರವರ ಹೆಸರು ಸದಾ ಅಚ್ಚುಳಿಯುವಂತೆ ಮಾಡಿದೆ.

ಕಲಾ ಆಸಕ್ತರೂ ಕಲಾ ಆರಾಧಕರೂ ಆಗಿರುವ ನಾಗರಾಜ ನಾಯಕರು ಕಲೆ ಹಾಗೂ ಕಲಾವಿದರ ಬದುಕಿಗೆ ಆಸರೆಯಾಗಿ ಬಂದ ಕಾರಣದಿಂದಲೇ ಕಲಾ ಪ್ರಪಂಚ ಹಾಗೂ ಕಲಾಭಿಮಾನಿಗಳೂ ಅವರ ಮೇಲೆ ಅಪಾರ ಗೌರವವನ್ನು ಹೊಂದಿದ್ದಾರೆ .ಅಶಕ್ತ ಕಲಾವಿದರಿಗೆ ಆರ್ಥಿಕ ಸಹಾಯ ,ಕಲಾ ಕಾರ್ಯಕ್ರಮಗಳ ಸಂಯೋಜನೆಗಳ ಮೂಲಕ ಕಲಾ ಜಗತ್ತಿನಲ್ಲಿ ಗುರುತಿಸುವ ವ್ಯಕ್ತಿಯಾಗಿದ್ದಾರೆ.

FB IMG 1517977999024

ಭಾರತ ಸರಕಾರದ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ಉಜ್ವಲ ಯೋಜನೆಯ ಉಚಿತ ಗ್ಯಾಸ್ ಕಿಟ್ ಗಳನ್ನು ಮನೆಮನೆಗೆ ತಲುಪಿಸುವಲ್ಲಿ ‘ನಾಗರಾಜ ನಾಯಕ ತೊರ್ಕೆ’ ಮತ್ತು “ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್” ನ ಕಾರ್ಯ ಅಪೂರ್ವವಾದದ್ದು ಎನ್ನುತ್ತಾರೆ ಸುಶೀಲಾ ಮೇಸ್ತಾ .ಬಡವರಿಗೆ ಅನುಕೂಲವಾಗುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಉಜ್ವಲ ಯೋಜನೆಯನ್ನು ಅರ್ಹ ಫಲಾನುಭವಿಗಳ ಮನೆ ಮನೆಗೆ ತಲುಪಿಸುವಲ್ಲಿ ನಾಗರಾಜ್ ನಾಯಕ್ ರವರ ಪರಿಶ್ರಮ ಎದ್ದು ಕಾಣುತ್ತದೆ . ಈ ನಿಮಿತ್ತವಾಗಿ ಅವರು ಕುಮಟಾ ಹೊನ್ನಾವರ ತಾಲೂಕುಗಳ ಮೂಲೆ ಮೂಲೆಗೂ ಸಂಚಾರ ಮಾಡಿದವರು. ಇವರ ಸಂಚಾರವೇ ಜನರಲ್ಲಿ ಹೊಸ ಸಂಚಲನ ಮೂಡಿಸುವಂತೆ ಮಾಡಿದೆ ಎನ್ನೋದು ಜನತೆಯ ಅಭಿಪ್ರಾಯ .

RELATED ARTICLES  ತಿಂಗಳಿನಿಂದ ಕೆಟ್ಟು ನಿಂತ ಲೈಟ್! ಶಂಶುದ್ದೀನ್ ಸರ್ಕಲ್‍ ನಲ್ಲಿ ಸಂಚರಿಸಲು ಭಯ ಪಡುತ್ತಿದ್ದಾರೆ ಜನರು.

ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನೀಡಲು ಮುಕ್ತ ಮನಸ್ಸು ಹೊಂದಿರುವ ಇವರು ಅನೇಕ ಯುವಕರಿಗೆ ಉದ್ಯೋಗದ ಮಾರ್ಗ ತೋರಿಸಿದವರು. ಅದಷ್ಟೇ ಅಲ್ಲದೇ ಶಿಕ್ಷಣದ ಆಸೆ ಹೊಂದಿದ್ದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಹಾಯ ಮಾಡಿದ ಇವರ ಮೃದು ಮನಸ್ಸಿನ ವ್ಯಕ್ತಿತ್ವಕ್ಕೆ ಎಲ್ಲರೂ ಮಾರು ಹೋಗಿದ್ದಾರೆ.

FB IMG 1517977879589

ಮುದ್ದು ಮೊಗದ ಮೃದು ಸ್ವಭಾವದಿಂದ ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾ ಜನತೆಯ ನೋವು ನೀಗುವ ನೈಜ ಸ್ನೇಹಿತರಾಗಿ ಎಲ್ಲರ ಮನಗೆದ್ದಿರುವ ಈ ನಿಜ ಕಾರಣದಿಂದಲೇ “ಜನ ಮನದ ನಾಯಕರಾಗಿದ್ದಾರೆ ನಾಗರಾಜ ನಾಯಕ ತೊರ್ಕೆ”.

ವರದಿ :- ಸತ್ವಾಧಾರಾ ನ್ಯೂಸ್.
ಸಹಕಾರ: ಜಯದೇವ ಬಳಗಂಡಿ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಹೆಮ್ಮೆಯ ವಿಸ್ಮಯ ಟಿ.ವಿ.ಗೆ ನಾಗರಾಜ ನಾಯಕ ರವರು ಹಿಂದೊಮ್ಮೆ ನೀಡಿದ್ದ “ಸಂದರ್ಶನ”ದ ಝಲಕ್ ಇಲ್ಲಿದೆ ನೋಡಿ.
ವಿಡಿಯೋ ಕೃಪೆ : ವಿಸ್ಮಯ ಟಿ.ವಿ.
[youtube https://www.youtube.com/watch?v=FiEDdqAzitE&w=360&h=360]