ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಸಿ.ವಿ.ಎಸ್.ಕೆ ಪ್ರೌಢಶಾಲಾ ಸಭಾಭವನದಲ್ಲಿ ದಿ. ಮಾಧವ ಮಂಜುನಾಥ ಶಾನಭಾಗ ಸ್ಮರಣಾರ್ಥ ದತ್ತಿ ನಿಧಿ ಕೊಂಕಣಿ ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಶ್ರೀ ಮುಕುಂದ ಪೈ, ನಿವೃತ್ತ ಆರ್ಥಿಕ ಸಲಹೆಗಾರರು (ಯುಎಸ್‍ಎ) ಇವರು ಉದ್ಘಾಟಿಸಿ, ಕೊಂಕಣಿ ಭಾಷೆಯನ್ನು ಉಳಿಸಿ-ಬೆಳೆಸಲು ಕರೆ ನೀಡಿ, ಕೊಂಕಣಿ ಭಾಷೆ ವಿಶ್ವವ್ಯಾಪಿಯಾಗಬೇಕೆಂದು ನುಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಗೌರವಾಧ್ಯಕ್ಷರಾದ ಶ್ರೀ ಕಾಶಿನಾಥ ನಾಯಕ ಮಾತನಾಡಿ, ಈ ರೀತಿಯ ಕಾರ್ಯಕ್ರಮಗಳು ಹೆಚ್ಚು-ಹೆಚ್ಚಾಗಿ ಆಯೋಜಿಸಿ, ಮಕ್ಕಳಲ್ಲಿ ಕೊಂಕಣಿ ಭಾಷೆಯ ಅಭಿಮಾನ ಮೂಡಿಸಿ, ಇಂತಹ ಸವಿಯಾದ ಚೆಂದದ ಭಾಷೆಯನ್ನು ಉಳಿಸಿ ಬೆಳೆಸಬೇಕಾದದ್ದು ನಮ್ಮ ಆದ್ಯ ಕರ್ತವ್ಯವಾಗಬೇಕಾಗಿದೆಯೆಂದು ಸಲಹೆ ನೀಡಿದರು. ಟ್ರಸ್ಟಿನ ಗೌರವಾನ್ವಿತ ಕಾರ್ಯದರ್ಶಿಗಳಾದ ಶ್ರೀ ಮುರಲೀಧರ ಪ್ರಭು ಪ್ರಾಸ್ತಾವಿಕ ಮಾತುಗಳನ್ನಾಡಿ, ದಿ. ಮಾಧವ ಮಂಜುನಾಥ ಶಾನಭಾಗ ರನ್ನು ಸ್ಮರಿಸುತ್ತ ಅವರು ಕೊಂಕಣಿ ಭಾಷೆಗೆ ನೀಡಿದ ಕೊಡುಗೆಯನ್ನು ನೆನೆಯುತ್ತ, ಮಾತೃ ಭಾಷೆಯನ್ನು ಪೋಷಿಸಿ ಹಾಗೆಯೇ ಉಳಿದ ಭಾಷೆಗಳನ್ನೂ ಪ್ರೀತಿಸಿ ಎಂದು ಸವಿಸ್ತಾರವಾಗಿ ವಿವರಿಸಿದರು.

RELATED ARTICLES  ಡಿ.ವೈ.ಎಸ್.ಪಿ ಕಾರಿಗೆ ಓಮಿನಿ ಡಿಕ್ಕಿ : ಯಲ್ಲಾಪುರ ಸಮೀಪ ದುರ್ಘಟನೆ

ವೇದಿಕೆಯಲ್ಲಿ ಶ್ರೀಮತಿ ಜ್ಞಾನದಾ ಶಾನಭಾಗ, ಶ್ರೀ ರೋಹಿದಾಸ ಗಾವಡಿ, ಟ್ರಸ್ಟಿಗಳಾದ ಶ್ರೀ ವಿ.ಆರ್.ನಾಯಕ, ಪ್ರಾಚಾರ್ಯೆ ಶ್ರೀಮತಿ ಸುಲೋಚನಾ ರಾವ್, ಮುಖ್ಯಾಧ್ಯಾಪಕಿ ಶ್ರೀಮತಿ ಸುಮಾ ಪ್ರಭು ಉಪಸ್ಥಿತರಿದ್ದರು.

RELATED ARTICLES  ಬೈಕ್ ಸಮೇತ ನೀರಿನಲ್ಲಿ ಕೊಚ್ಚಿಹೋದ ಹೊನ್ನಾವರ ಮೂಲದ ವ್ಯಕ್ತಿ

ಶ್ರೀ ಮುಕುಂದ ಪೈರವರು ಕೊಂಕಣಿ ಭಾಷೆಗಾಗಿ ಮಾಡಿದ ಸೇವೆಯನ್ನು ಪರಿಗಣಿಸಿ, ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಅದೇ ರೀತಿ, ಕಾರ್ಯಕ್ರಮದ ಅಂಗವಾಗಿ ನಡೆದ ಸಾಂಸ್ಕøತಿಕ ಸರ್ಧೆಗಳ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನವನ್ನು ವಿತರಿಸಲಾಯಿತು.

ಸುಮಾ ಪ್ರಭು ಸ್ವಾಗತಿಸಿದರು, ಶಿಕ್ಷಕಿ ವಿನಯಾ ನಾಯಕ ಹಾಗೂ ಶಿಕ್ಷಕ ಗೌರೀಶ ಭಂಡಾರಿ ನಿರೂಪಿಸಿದರು, ಶಿಕ್ಷಕ ಚಿದಾನಂದ ಭಂಡಾರಿ ವಂದಿಸಿದರು, ವಿದ್ಯಾರ್ಥಿನಿ ತೇಜಸ್ವಿನಿ ಶಾನಭಾಗ ಪ್ರಾರ್ಥಿಸಿದರು.