ಕಾರವಾರ: ಹಿಂದಿನ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳು ಕಾರ್ಯರೂಪಕ್ಕೆ ಬರುತ್ತಿಲ್ಲ ಹಾಗೂ ವಾರ್ಡಿನ ಅಭಿವೃದ್ಧಿಗಳಾಗುತ್ತಿಲ್ಲ ಎಂದು ಆರೋಪಿಸಿ ನಗರಸಭಾ ಸದಸ್ಯರು ಪ್ರಸಕ್ತ ಸಾಲಿನ ಬಜೆಟ್ ಬಹಿಷ್ಕರಿಸಿದ ಘಟನೆ ಇಲ್ಲಿನ ನಗರಸಭೆಯಲ್ಲಿ ನಡೆಯಿತು.

ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ ಗಣಪತಿ ನಾಯ್ಕ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆ ಗೌಜಿ ಗದ್ದಲಗಳ ನಡುವೆ ಆರಂಭವಾಯಿತು.

ಸಭೆಯಲ್ಲಿ ಹಾಜರಿದ್ದ ಕೆಲ ಸದಸ್ಯರು ಈ ಹಿಂದೆ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ನಿರೀಕ್ಷಿಸಿದಂತೆ ವಾರ್ಡಿನ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ಹೀಗಾಗಿ ಈ ಬಾರಿಯ ಬಜೆಟ್ ಮಂಡನೆಗೆ ಅವಕಾಶ ನೀಡುವುದಿಲ್ಲ ಎಂದರು.

RELATED ARTICLES  ವೈನ್ ಶಾಪ್ ಹಾಗೂ ಬಾರ್‌ಗಳನ್ನ ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ .

ಬಜೆಟ್ ಮಂಡನೆಗೆ ವಿರೋಧ ವ್ಯಕ್ತಪಡಿಸಿದ ಸದಸ್ಯರಾದ ಸಂದೀಪ್ ತಳೇಕರ, ಪ್ರೇಮಾನಂದ ಗುನಗಾ, ಲಕ್ಷ್ಮಿ ಕೋಳಂಬಕರ, ಇಂದಿರಾ ಕಿಟ್ಟಾ, ಕೆ.ಟಿ.ತಾಂಡೇಲ್, ಸಂತೋಷ ನಾಯ್ಕ, ಪಾಂಡುರಂಗ ರೇವಂಡಿಕರ್, ರಂಜು ಮಾಸೇಲಕರ, ರಮೇಶ ಗೌಡ,ಮಹೇಶ ತಾಮ್ಸೆ, ರವಿ ಕುಡ್ತಳಕರ, ರವೀಂದ್ರ ಬಾನಾವಳಿ, ಚಿಪ್ಕರ್, ರಮೀಜಾ ಶೇಖ್, ಎಂ.ಇ.ಶೇಖ್ ವೇದಿಕೆಯೆದುರು ಕೆಲಕಾಲ ಧರಣಿ ನಡೆಸಿ ನಂತರ ಸಭೆಯಿಂದ ಹೊರ ನಡೆದರು.

ವಿಫಲವಾಯ್ತು ಮನವೊಲಿಕೆ ಯತ್ನ

ಬಳಿಕ ಅಧ್ಯಕ್ಷ ಗಣಪತಿ ನಾಯ್ಕ ಮುಂಗಡ ಪತ್ರದ ಮಂಡನೆಗೆ ಸಹಕಾರ ಕೋರಿ ಹೊರನಡೆದ ಸದಸ್ಯರನ್ನು ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಅವಶ್ಯಕ ಕೋರಂ ಇರುವುದನ್ನು ಖಚಿತಪಡಿಸಿಕೊಂಡು ಹಾಜರಿದ್ದ ಸದಸ್ಯರ ಮುಂದೆ 2018-19 ನೇ ಸಾಲಿನ ನಗರಸಭೆ ಆಯ ವ್ಯಯ ಮಂಡಿಸಿದರು

RELATED ARTICLES  ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ಅವಕಾಶ ಕಲ್ಪಿಸಿಲ್ಲ ಎಂದು ಆರೋಪಿಸಿ ಭಟ್ಕಳದಲ್ಲಿ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ!!