ಪಂದ್ಯಾವಳಿ ಒಟ್ಟು ಮೂರು ವಿಭಾಗಗಳಲ್ಲಿ ನಡೆಯಲಿದೆ. ಫೆ.10 ಮಧ್ಯಾಹ್ನ 3 ಗಂಟೆಗೆ 18 ವರ್ಷ ಮೇಲ್ಪಟ್ಟ ವಿಭಾಗದ ಮಿಕ್ಸೆಡ್ ಡಬಲ್ಸ್ ಪಂದ್ಯ ನಡೆಯಲಿದೆ. ಫೆ:11 ರಂದು ಬೆಳಿಗ್ಗೆ 9 ಗಂಟೆಗೆ 12 ವರ್ಷ ಒಳಗಿನ ಮಕ್ಕಳ ಹಾಗೂ 12 ರಿಂದ 17 ವರ್ಷ ವಯೋಮಿತಿಯ ಮಕ್ಕಳ ಡಬಲ್ಸ್ ಪಂದ್ಯಾವಳಿ ನಡೆಯಲಿದೆ.

ಮಿಕ್ಸೆಡ್ ಡಬಲ್ಸಿನಲ್ಲಿ ಭಾಗವಹಿಸುವ ಸ್ಪರ್ಧಾಳುವಿಗೆ ಪ್ರವೇಶ ಶುಲ್ಕ 250 ರೂ. ಮತ್ತು ಮಕ್ಕಳ ಡಬಲ್ಸ್ ನಲ್ಲಿ ಸ್ಪರ್ಧಿಸುವವರಿಗೆ 200 ರೂ. ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದೆ. ಮಿಕ್ಸೆಡ್ ಡಬಲ್ಸ್ ನಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ನಗದು 4000 ರೂ., ದ್ವಿತೀಯ ಸ್ಥಾನದ ಬಹುಮಾನ 2000 ರೂ. ಹಾಗೂ ಫಲಕ ನೀಡಲಾಗುತ್ತಿದೆ.

RELATED ARTICLES  ಪತ್ನಿಯನ್ನೇ ಕತ್ತು ಹಿಸುಕಿ ಕೊಂದ ಪತಿರಾಯ? : ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!

ಪಂದ್ಯಾವಳಿಯಲ್ಲಿ ಭಾಗವಹಿಸಲಿ ಇಚ್ಛಿಸುವವರು ವಿನ್ನರ್ ವಿಲ್ ಕ್ಲಬ್ ಅಧ್ಯಕ್ಷೆ ರಾಜೇಶ್ವರಿ.ಆರ್. ನಾಯ್ಕ ಮೊ: 9986021348 ಹಾಗೂ ಪದಾಧಿಕಾರಿಗಳಾದ ರೇಷ್ಮಾ ಕುಮಾರ್ ಮೊ: 9980704060 ಮತ್ತು ಸೀಮಾ ವಿನಯ್ ಮೊ: 9008531406 ಇವರಿಗೆ ಸಂಪರ್ಕಿಸುವಂತೆ ಕೋರಲಾಗಿದೆ. ಇನ್ನರ್ ವಿಲ್‍ನಿಂದ ಚೊಚ್ಚಲ ಬಾರಿಗೆ ಆಯೋಜಿಸುತ್ತಿರುವ ಈ ಪಂದ್ಯಾವಳಿಯಲ್ಲಿ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಬೇಕಾಗಿ ಇನ್ನರ್ ವಿಲ್ ಅಧ್ಯಕ್ಷೆ ರಾಜೇಶ್ವರಿ.ಆರ್.ನಾಯ್ಕ ವಿನಂತಿಸಿದರು.

RELATED ARTICLES  ಅಪಘಾತ : ಡಿವೈಡರ್ ಗೆ ಬಡಿದು ವ್ಯಕ್ತಿ ಸಾವು