ಶಿರಸಿ : ರಾಜ್ಯ ಪ್ರಸಿದ್ಧ ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಮಂಗಳವಾರ ಮಾರಿಕಾಂಬಾ ದೇವಾಲಯದ ಆವರಣದಲ್ಲಿ ಬಿಡುಗಡೆ ಮಾಡಲಾಯಿತು.
ದೇವಸ್ಥಾನದ ಆಡಳಿತ ಮಂಡಳಿತ ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಮನೋಹರ ಮಲ್ಮನೆ, ಸದಸ್ಯರಾದ ಲಕ್ಷ್ಮಣ ಕಾನಡೆ, ಶಶಿಕಲಾ ಚಂದ್ರಪಟ್ಟಣ ಹಾಗೂ ಶಾಂತಾರಾಮ ಹೆಗಡೆ ಅವರುಗಳು ಅಧಿಕೃತವಾಗಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು.
ಫೆ.೨೭ ರಿಂದ ಮಾ.೭ ರವರೆಗೆ ಜಾತ್ರೆ ನಡೆಯಲಿದ್ದು, ಫೆ.೨೭ ರಂದು ದೇವಿಯೆ ಜಾತ್ರಾ ಕಲ್ಯಾಣ ಪ್ರತಿಷ್ಠೆ, ಫೆ.೨೮ ರಂದು ಮೆರವಣಿಗೆ ಹಾಗೂ ಬಿಡ್ಕಿ ಬೈಲಿನ ಜಾತ್ರಾ ಪೀಠದಲ್ಲಿ ಸ್ಥಾಪನೆ, ಮಾ. ೧ ರಿಂದ ೬ ರವರೆಗೆ ದೇವಿಯೆ ಸೇವಗಳು ಬೆಳಿಗ್ಗೆ ೫ ರಿಂದ ರಾತ್ರಿ ೧೦ ರವರೆಗೆ ಮಾ.೭ ರಂದು ಜಾತ್ರಾ ಮುಕ್ತಾಯದ ಕಾರ್ಯಕ್ರಮಗಳು ನಡೆಯಲಿದೆ.
ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಚಪ್ಪದರದಲ್ಲಿ ಕುಡಿಯುವ ನೀರು, ಪಾನಕ, ಪ್ರಥಮ ಚಿಕಿತ್ಸೆ ವ್ಯವಸ್ಥೆ ಹಾಗೂ ಮಧ್ಯಾಹ್ನ ಅನ್ನ ಪ್ರಸಾದ ವ್ಯವಸ್ಥೆಯನ್ನು ಮಾರಿಗುಡಿ ಶಾಲೆಯ ಆವಾರದಲ್ಲಿ ಮಾಡಲಾಗಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ವೆಂಕಟೇಶ ನಾಯ್ಕ ಈ ವೇಳೆ ಮಾಹಿತಿ ನೀಡಿದರು.