ಕಾರವಾರ: 2018 ರಲ್ಲಿ ನಡೆಯಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ಪೋಲಿಸ ಇಲಾಖೆ ಸೇರಿದಂತೆ ಚುನವಣಾ ಕಾರ್ಯದಲ್ಲಿ ಭಾಗವಹಿಸುವ ಇತರ ಇಲಾಖೆಗಳ ಅಧಿಕಾರಿಗಳು ಜಾಗೃತಿವಹಿಸಿ ಚುನಾವಣೆಯನ್ನುಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೂಚಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2018 ರ ಪ್ರಯುಕ್ತ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸುವಿಕೆ ಮತ್ತು ಅಕ್ರಮ ಮದ್ಯ ಸಾಗಾಟ ನಿಯಂತ್ರಣ ಹಾಗೂ ಕಾನೂನು ಸುವ್ಯವಸ್ಥೆ ಕುರಿತ ಸಭೆಯನ್ನುಉದ್ದೆಶಿಸಿ ಮಾತನಾಡಿದರು.

ಚುನಾವಣಾ ಪ್ರಕ್ರಿಯಗಳನ್ನು ಪ್ರಾರಂಭಿಸಲು ರಾಜ್ಯ ಚುನಾವಣಾ ಆಯೋಗದಿಂದ ಸೂಚಿಸಲಾಗಿದೆ, ನಮ್ಮ ಜಿಲ್ಲೆಯಲ್ಲಿ ಬರುವ ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ ಅಲ್ಲಿ ಯಾವುದೇ ರೀತಿಯ ಅಹಿತಕರ ಘಟಣೆಗಳು, ಗಲಭೆ ಹಾಗೂ ಇನ್ನಿತರ ಯಾವುದೇ ರೀತಿಯ ತೊಂದರೆಯಾಗದಂತೆ ಜಾಗೃತಿವಹಿಸಬೇಕು ಎಂದರು.
ಇತ್ತ್ತೀಚಿಗೆ ಜಿಲ್ಲೆಯಲ್ಲಿಕೋಮುಗಲಭೆಗಳು ನೆಡೆದಿದ್ದು ಚುನಾವಣಾ ಸಮಯದಲ್ಲಿ ಅದು ಬೇರೆ ಯಾವುದಾದರೊಂದು ಸ್ವರೂಪ ಪಡೆದುಕೊಂಡು ಸಮಾಜದಲ್ಲಿ ಅಹಿತಕರ ಘಟಣೆಗೆ ಕಾರಣವಾಗಬಹುದು ಪೋಲಿಸ ಇಲಾಖೆಯು ಯಾವುದೇ ಮೂಲಾಜು ಇಲ್ಲದೇ ಸೂಕ್ತಕ್ರಮ ಕೈಗೊಳ್ಳಿ ಎಂದು ಹೇಳಿದರು.

RELATED ARTICLES  ಇಂದಿನ ಕೊರೋನಾ Update

ಚುನಾವಣಾ ಸಮಯದಲ್ಲಿ ಸಮಾಜದಲ್ಲಿನ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಆಸೆ ಆಮೀಷಗಳನ್ನು ತೋರಿಸಿ ಚುನಾವಣಾ ಸ್ವಾಸ್ಥ್ಯವನ್ನು ಹಾಳು ಮಾಡುವ ಕೆಲಸಗಳು ನಡೆಯುತ್ತಿರುತ್ತವೆ. ಅಂತಹವುಗಳ ಬಗ್ಗೆ ನಿಗಾವಹಿಸಬೇಕು ಎಂದರು.

ಈ ಹಿಂದೆ ಚುನಾವಣಾ ಸಂಬಂದಿತ ಗಲಾಟೆಗಳು ಹಾಗೂ ಅಹಿತಕರ ಘಟಣೆ ಮತ್ತು ಯಾವುದೇ ರೀತಿಯ ದುಷ್ಕøತ್ಯದಲ್ಲಿ ಭಾಗಿಯಾದಂತಹ ಆರೋಪಿಗಳ ಬಗ್ಗೆ ಚುಣಾವಣಾ ಮುಗಿಯವರೆಗೂ ನಿಗಾ ವಹಿಸಬೇಕು. ಈ ಕೆಲಸದಲ್ಲಿ ಪೋಲೀಸ ಇಲಾಖೆಯ ಕಾರ್ಯ ಮಹತ್ವದ್ದಾಗಿರುತ್ತದೆ ಎಂದು ತಿಳಿಸಿದರು.

RELATED ARTICLES  ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಜಿಲ್ಲಾಡಳಿತ.

ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಅವರು, ಸಿ.ಆg.ïಪಿ.ಸಿ ಕಲಂ. 107, 109, 110 ಮತ್ತು ಪೋಲೀಸ ಕಾಯ್ದಿ 55ಅಡಿಯಲ್ಲಿ ದಾಖಲಾದ ಪ್ರಕರಣಗಳ ಮಾಹಿತಿಗಳನ್ನು ಪೋಲೀಸ್ ಸಬ್ ಇನ್ಸಪೆಕ್ಟರಗಳು ಆಯಾ ತಾಲೂಕಿನ ತಹಸೀಲ್ದಾರ್‍ಗಳೊಂದಿಗೆ ಚರ್ಚಿಸಿ ಪ್ರಕರಣಗಳ ವರದಿಗಳನ್ನು ಇಲಾಖೆಗೆ ಸಲ್ಲಿಸಬೇಕು ಎಂದು ಹೇಳಿದರು.
ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟಗಳಲ್ಲಿ ಪೋಲೀಸ ಕಾರ್ಯಕ್ಷಮತೆಯು ಅತ್ಯಂತ ಮೂತುವರ್ಜಿಯಿಂದ ಕಾರ್ಯನಿರ್ವಹಿಸಬೇಕು. ಜೊತೆಗೆ ಸಾರ್ವಜನಿಕರೊಂದಿಗೆ ಜನಸ್ನೇಹಿಯಾಗಿ ವರ್ತಿಸಿ ಚುನಾವಣಾ ಜಾಗೃತಿಯನ್ನು ಮೂಡಿಸಲು ಪ್ರಯತ್ನಿಸಿ ಎಂದು ಎಲ್ಲಾ ಪೊಲೀಸ್ ಸಿಬ್ಬಂದಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಪಂಚಾಯತ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಲ್. ಚಂದ್ರಶೇಖರ ನಾಯಕ ಅಪರ ಜಿಲ್ಲಾಧಿಕಾರಿ
ಹೆಚ್. ಪ್ರಸನ್ನ, ಪೋಲೀಸ ಇಲಾಖೆಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.