ಯುವ ಕವಯಿತ್ರಿ ಅಶ್ವಿನಿ ಕೋಡಿಬೈಲು ಅವರ ಕವನ ಸಂಕಲನ ಸೌಗಂದಿಕ ಇದೆ ಫೆ.೧೦ ರಂದು ಸುಳ್ಯ ತಾಲೂಕಿನ ಬೆಳ್ಳಾರೆ ಅಂಬೇಡ್ಕರ್ ಸಭಾಭವನದಲ್ಲಿ ಲೋಕಾರ್ಪಣೆ ಗೊಳ್ಳಲಿದೆ.

ನಾಡಿನ ಹಿರಿಯ ಸಾಹಿತಿ ಪ್ರೊ.ವಿ.ಬಿ.ಅರ್ತಿಕಜೆ ಸೌಂಗದಿಕ ಬಿಡುಗಡೆಗೊಳಿಸಲಿದ್ದು. ಅಧ್ಯಕ್ಷತೆಯನ್ನು ಬೆಳ್ಳಾರೆಯ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೆಸರ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ ವಹಿಸಲಿದ್ದು, ಮುಖ್ಯ ಅತಿಥಿ ಗಳಾಗಿ ಉ.ಕ. ಜಿಲ್ಲೆಯ ಭಾವಕವಿ, ಭಟ್ಕಳ ತಾಲೂಕು ಎಂಟನೇ ತಾಲೂಕು ಸಮ್ಮೇಳನಾಧ್ಯಕ್ಷ ಉಮೇಶ ಮುಂಡಳ್ಳಿ, ಮಾಣಿಯ ಸಂಸ್ಕೃತ ಅಧ್ಯಾಪಕ ಕೃಷ್ಣ ಭಟ್ ಶಿರಂಕಲ್ಲು,ಸದಾಶಿವ ಭಟ್ ಭಾಗವಹಿಸಲಿದ್ದಾರೆ.

RELATED ARTICLES  ವಿದ್ಯುತ್ ಗ್ರಾಹಕರ ಜಾಗೃತಿ ಮತ್ತು ಸುರಕ್ಷತಾ ಕಾರ್ಯಕ್ರಮ

ಸಭಾ ಕಾರ್ಯಕ್ರಮದ ನಂತರ ನಾಡಿನ ಸುಗಮಸಂಗೀತ ಗಾಯಕ ಉಮೇಶ ಮುಂಡಳ್ಳಿ ಅವರಿಂದ ಸ್ವರಚಿತ ಮತ್ತು ಅಶ್ವಿನಿ ಕೋಡಿಬೈಲು ಅವರ ಕವಿತೆಗಳ ಗಾಯನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಹಿರಿಯ ಪತ್ರಕರ್ತ, ಅಂಕಣಕಾರ ಅನಂತ ವೈದ್ಯ ಇನ್ನಿಲ್ಲ : ಕನ್ನಡ ಮತ್ತು ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಹಿರಿಯರು.