ಬೆಂಗಳೂರು: ಚಿತ್ರರಂಗದ ಮಾಜಿ ನಟಿ ಕಂ ರಾಜಕಾರಣಿ ಕಾಂಗ್ರೆಸ್‍ನ ರಮ್ಯಾ ನೀಡುವ ಹೇಳಿಕೆಗಳು ಸದಾ ವಿವಾದಕ್ಕೆ ತುತ್ತಾಗುವ ಇವರು ಈಗ ತಮ್ಮ ಕೀಳುಮನಃಸ್ಥಿತಿಯಿಂದ ಮತ್ತೊಮ್ಮೆ ನಗೆಪಾಟಲಿಗೀಡಾಗಿದ್ದಾರೆ.
ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯನ್ನು ಶತಾಯಗತಾಯ ಹಣಿಯಲೇ ಬೇಕು ಎಂದು ಈಕೆ ನಿರ್ಧರಿಸಿದಂತಿದೆ. ಇದಕ್ಕಾಗಿ ಈಕೆ ಆಯ್ದುಕೊಂಡಿದ್ದು ಮಾತ್ರ ವಾಮಮಾರ್ಗ.
ಇತ್ತೀಚೆಗೆ, ನಡೆದ ಕಾಂಗ್ರೆಸ್ ಐಟಿ ಸೆಲ್‍ನ ಸಭೆಯಲ್ಲಿ ಮಾತನಾಡಿದ ರಮ್ಯ ಪ್ರತಿಪಕ್ಷಗಳನ್ನು ಹಣಿಯಲು ಹಾಗೂ ಕಾಂಗ್ರೆಸನ್ನು ಬಲಗೊಳಿಸಲು ನಕಲಿ ಖಾತೆಗಳನ್ನು ತೆರೆಯಿರಿ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕಾರ್ಯಕರ್ತರು ಕನಿಷ್ಠ ಮೂರು ನಕಲಿ ಖಾತೆಗಳನ್ನು ಹೊಂದಬೇಕು ಎಂಬ ನಿರ್ದೇಶನ ನೀಡಿರುವ ಈಕೆ, ತಾವೂ ಸಹ ಹಲವಾರು ಖಾತೆಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.
ನಿಮ್ಮ ಹೆಸರಿನಲ್ಲಿ ಒಂದು ಖಾತೆಯನ್ನು ತೆರೆದಿದ್ದರೆ ಅದನ್ನು ನಿಭಾಯಿಸಿ. ಇದರೊಂದಿಗೆ ನಕಲಿ ಖಾತೆಗಳನ್ನೂ ಸಹ ತೆರೆದು ನಿರ್ವಹಿಸಿದ ಎಂದು ಉವಾಚಿಸಿರುವ ರಮ್ಯಾ, ಪ್ರಚಾರಕ್ಕಾಗಿ ಇಂತಹ ವಾಮಮಾರ್ಗವನ್ನು ಸೂಚಿಸಿದ್ದಾರೆ.
ಇನ್ನು, ಮೊನ್ನೆ ಪ್ರಧಾನಿ ಮೋದಿ ಬೆಂಗಳೂರಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರನ್ನು ಟೀಕಿಸಿದ್ದ ರಮ್ಯಾ, ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಕಾಂಗ್ರೆಸ್ ಗೆ ಸೇರ್ಪೆಡೆಯಾದಾಗಲಿಂದಲೂ ಮೋದಿಯವರನ್ನು ಗುರಿಯಾಗಿಸಿ ಮಾತನಾಡುವ ರಮ್ಯಾ ನಡೆಗೆ ಜನ ಹಲವು ಬಾರಿ ಛೀಮಾರಿ ಹಾಕಿದ್ದಾರೆ. ಆದರೂ ಸಹ ತಮ್ಮ ಪ್ರವೃತ್ತಿಯನ್ನೇ ಮುಂದುವರೆಸಿರುವ ಈಕೆ, ಈಗ ತಮ್ಮ ಕಾರ್ಯಕರ್ತರಿಗೂ ಸಹ ಇದನ್ನೇ ಹೇಳಿಕೊಟ್ಟಿರುವುದು ಇವರ ಯೋಗ್ಯತೆಯನ್ನು ಬಟಾಬಯಲು ಮಾಡಿದೆ.