ಫೆಬ್ರುವರಿ ೨೪ ಶನಿವಾರ ಹಾಗೂ ೨೫ ರವಿವಾರ ದಂದು ಬಾಡ ಗುಡೇಅಂಗಡಿಯ ಕಾಂಚಿಕಾಂಬಾ ದೇವಸ್ಥಾನದ ರಥಬೀದಿಯಲ್ಲಿ ಜರುಗಲಿರುವ ಕುಮಟಾ ತಾಲೂಕಾವ ೬ ನೇ ತಾಲೂಕಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಖ್ಯಾತ ಸಾಹಿತಿ ದಯಾನಂದ ತೊರ್ಕೆ ಅವರು ನುಡಿತೇರನ್ನು ಎಳೆಯಲಿದ್ದಾರೆ.

ಕುಮಟಾ ತಾಲ್ಲೂಕಿನ ಗೋಕರ್ಣದ ತೊರ್ಕೆಗ್ರಾಮದವರಾದ ದಯಾನಂದ ತೊರ್ಕೆಯವರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಅಪಾರಕೊಡುಗೆಯನ್ನು ಪರಿಗಣಿಸಿ ಅವರಿಗೆ ಈ ಗೌರವವನ್ನು ನೀಡಲು ತಾಲೂಕಾ ಸಾಹಿತ್ಯ ಪರಿಷತ್ತು ನಿರ್ಧರಿದ್ದು ತಮ್ಮ ಕೋರಿಕೆಗೆ ಶ್ರೀ ದಯಾನಂದ ತೊರ್ಕೆಯವರು ಪೂರಕವಾಗಿ ಸ್ಪಂದಿಸಿ ಸಮ್ಮೇಳನದ ಸಾರಥ್ಯವಹಿಸಲು ಒಪ್ಪಿರುವುದು ಕನ್ನಡ ಸಾರಸ್ವತಲೋಕಕ್ಕೆ ಸಂತಸ ತಂದಿದೆ ಎಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಶ್ರೀಧರ ಉಪ್ಪಿನ ಗಣಪತಿ ತಿಳಿಸಿದ್ದಾರೆ.

RELATED ARTICLES  ಪುನೀತ್ ರಾಜ್ ಕುಮಾರ್ ಅಕಾಲಿಕ ಮರಣ : ಶೃದ್ಧಾಂಜಲಿ ಸಲ್ಲಿಕೆ.

ಜಿಲ್ಲಾಧ್ಯಕ್ಷ ಅರವಿಂದ ಕರ್ಕೀಕೋಡಿ ಅಧ್ಯಕ್ಷತೆಯಲ್ಲಿ ನೆಡೆದ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯು ಸರ್ವಾನುಮತದಿಂದ ಈ ಆಯ್ಕೆಯನ್ನು ಅನುಮೋದಿಸಿದ್ದು ತೊರ್ಕೆಯವರು ಇದುವರೆಗೆ ಉಡುಗೊರೆ, ಚೇತನ ,ಗೌರಿ ,ದಯಾನಂದತೊರ್ಕೆಯವರ ಕತೆಗಳು,ವಾಸ್ತವ ಮೊದಲಾದ ಎಂಟು ಪ್ರಕಟಿತ ಕಥಾಸಂಕಲನಗಳನ್ನೂ ಗೆಜ್ಜೆನಾದ,ಬಂಧನ, ಅನುರಾಗ ಒಳಗೊಂಡಂತೆ ಐವತ್ತು ಸಾಮಾಜಿಕ ಕಾದಂಬರಿಗಳನ್ನೂ, ಆರೋಹಣ,ಮಹಾಪುರುಷ ಮೊದಲಾದ ಎಂಟು ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದಾರೆ.

RELATED ARTICLES  ಕುಮಟಾ ತಾಲೂಕು 6 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ.

ಅಲ್ಲದೇ ಕನ್ನಡದ ಅನೇಕ ಪತ್ರಿಕೆಗೆ ಇವರು ಲೇಖನಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ.ತಮ್ಮ ಎಂಟನೆಯ ತರಗತಿಯಿಂದಲೇ ಇವರು ಸಾಹಿತ್ಯ ರಚನೆ ಆರಂಭಿಸಿ ಇಂದಿನವರೆಗೂ ಕನ್ನಡನುಡಿಸೇವೆಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.