ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವರ್ಷ ಜಾತ್ರೆಗಳ ಸರಾವಳಿ, ಹೌದು ಜಿಲ್ಲೆಯಲ್ಲಿ ಒಂದರ ಹಿಂದೆ ಒಂದಂತೆ ಜಾತ್ರೆಗಳ ಸರಮಾಲೆ. ರಾಜ್ಯದ ಪ್ರಮುಖ ಜಾತ್ರೆಯಲ್ಲೊಂದಾದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ದೇವಮ್ಮ ಮತ್ತು ದುರ್ಗಮ್ಮ ದೇವಿಯ ಜಾತ್ರೆಗೆ ನಿನ್ನೆ ಫೆಬ್ರುವರಿ 07ರಂದು ಅತಿ ವಿಜೃಂಭಣೆಯಿಂದ ಪ್ರಾರಂಭವಾಗಿದೆ. ಈ ಜಾತ್ರೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಶಕ್ತಿ ದೇವತೆಗಳಾದ ದೇವಮ್ಮ ಮತ್ತು ದುರ್ಗಮ್ಮ ತಾಯಂದಿರ ಜಾತ್ರೆ. ಮೂರು ವರ್ಷಕ್ಕೊಮ್ಮೆ 9 ದಿನಗಳ ಕಾಲ ನಡೆಯಿಲಿರುವ ಜಾತ್ರೆಗೆ ನಿನ್ನೆ ವಿದ್ಯುಕ್ತವಾಗಿ ಚಾಲನೆಗೊಂಡಿದೆ. ಅಲಾಂಕರ ಭೂಷಿತೆ ದೇವಿಯರ ಮೂರ್ತಿಗಳನ್ನು ಜಾತ್ರಾ ಗದ್ದುಗೆಗೆ ಲಕ್ಷಾಂತರ ಭಕ್ತ ಸಮೂಹದ ಮದ್ಯೆ ಕರೆತರಲಾಯಿತು.

ನಿನ್ನೆ ಸಂಜೆ ಹೊತ್ತಿಗೆ ಭಕ್ತರ ಮುಗಿಲು ಮುಟ್ಟುವ ಜೈಕಾರ ಘೋಷಣೆಗಳ ನಡುವೆ ದೇವಮ್ಮ_ದುರ್ಗಮ್ಮ ದೇವಿಯರ ವಿಗ್ರಹವನ್ನು ಮೂಲ ದೇವಾಲಯದಿಂದ ಹೊರಗೆ ತರಲಾಯಿತು. ಬೇರೆ ಜಾತ್ರೆಗೆ ಹೋಲಿಸಿದ್ರೆ ದೇವರನ್ನ ರಥದ ಮೇಲೋ ಅಥವಾ ಪಲ್ಲಕ್ಕಿಯ ಮೇಲೊ ಮೆರವಣಿಗೆ ಮಾಡೋದು ಸರ್ವೆ ಸಾಮಾನ್ಯ, ಆದರೆ ಯಲ್ಲಾಪುರ ಅಮ್ಮಂದಿರ ಜಾತ್ರೆಯಲ್ಲಿ ವಿಶೇಷ ಅಂದರೆ ದೇವಿಯ ವಿಗ್ರಹಗಳನ್ನು ಭಕ್ತರೆ ಶಿರದ ಮೇಲೆ ಹೊತ್ತು ತರುವುದು. ಈ ಪದ್ಧತಿಯಿಂದ ದೇವರ ಪಥದಲ್ಲಿ ಕಿಕ್ಕಿರಿದು ನೆರೆದಿದ್ದ ಭಕ್ತಸಮುಹವು ಅಕ್ಕ ತಂಗಿಯರಾದ ದೇವಮ್ಮ ದುರ್ಗಮ್ಮ ದೇವರ ವಿಗ್ರಹವನ್ನು ಅತೀ ಸುಲಭವಾಗಿ ಕಣ್ತುಂಬಿ ಕೊಳ್ಳಬಹುದು. ಮೈನವಿರೆರಿಸುವ ಈ ಸನ್ನಿವೇಶ ನೋಡಲು ಪ್ರತಿವರ್ಷದಂತೆ ಈ ವರ್ಷವೂ ಸಾವಿರಾರು ಭಕ್ತರು ನೆರೆದಿದ್ದರು.

RELATED ARTICLES  ಯಲ್ಲಾಪುರ ಈಗ ಅಕ್ಷರಶಃ ದ್ವೀಪ!!

ಸಾವಿರಾರು ಭಕ್ತರ ಅತೀ ಭವ್ಯ ಮೆರವಣಿಗೆಯಲ್ಲಿ ಹೊತ್ತುತಂದ ವಿಗ್ರಹಗಳನ್ನು ರಾಷ್ಟೀಯ ಹೆದ್ದಾರಿ ಪಕ್ಕದಲ್ಲೇ ಇರುವ ಮೈದಾನದಲ್ಲಿ ಪ್ರತಿಷ್ಠಾಪಿಸಲಾಯಿತು. ಜಾತ್ರೆಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸಾರಿಗೆ ವ್ಯವಸ್ತೆಯನ್ನು ಮಾಡಲಾಗಿದ್ದು. ಸಿಹಿ ತಿಂಡಿ, ಮಕ್ಕಳ ಆಟಿಕೆ ಸಾಮಗ್ರಿ, ಮಹಿಳೆಯರ ಮಾರಾಟ ಮಳಿಗೆ, ಸರ್ಕಸ್ ಇತ್ಯಾದಿಗಳು ಜಾತ್ರೆಯ ಆಕರ್ಷಣೆಯಾಗಿದೆ. ಜಾತ್ರೆಗೆ ಬರುವ ಭಕ್ತಾದಿಗಳಿಗಾಗಿ ಸುತ್ತಮುತ್ತಲಿನ ಊರಿಗೆ ವಿಶೇಷ ಬಸ್ ವ್ಯವಸ್ತೆಯನ್ನು ಸಹ ಸಾರಿಗೆ ಸಂಸ್ಥೆ ಮಾಡಿದೆ ಎಂದು ತಿಳಿದುಬಂದಿದೆ. ಉದ್ಯೋಗ, ವ್ಯಾಪಾರವನ್ನರಸಿ ಯಲ್ಲಾಪುರ ಬಿಟ್ಟು ಬೇರೆ ಊರಲ್ಲಿ ನೆಲೆಯುರಿದವರಿಗಂತೂ ಈ ಜಾತ್ರೆ ತಮ್ಮ ಊರಿಗೆ ಬೇಟಿ ನೀಡಲು ಉತ್ತಮ ಸಂದರ್ಭವಾಗಿದ್ದು, ಊರೆಲ್ಲ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

RELATED ARTICLES  ಪತ್ರಕರ್ತರಿಗೆ ರಕ್ಷಣೆ ನೀಡುವಂತೆ ಕುಮಟಾ ಸಹಾಯಕ ಆಯುಕ್ತರಿಗೆ ಮನವಿ