ಕುಮಟಾ:ಹೆಗಡೆಯ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಶುಭಾರಂಭಗೊಂಡಿದೆ.

ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ವೀಣಾ ಸೂರಜ್ ನಾಯ್ಕ ಉದ್ಘಾಟಿಸಿದರು. ಸಮಿತಿಯ ಅಧ್ಯಕ್ಷ ರಾಮನಾಥ (ಧೀರೂ) ಶಾನಭಾಗ ಎಲ್ಲ ಗಣ್ಯರನ್ನು ಊರ ನಾಗರಿಕರನ್ನು ಸ್ವಾಗತಿಸಿದರು. ಶಾಲೆಯ ಶಿಕ್ಷಕರಾದ ಶ್ಯಾಮಲಾ ಪಟಗಾರ ವರದಿ ವಾಚಿಸಿದರು. ಶಿಕ್ಷಕ ಶ್ರೀಧರ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವೀಣಾ ಸೂರಜ್ ನಾಯ್ಕ ನನಗೆ ಉದ್ಘಾಟನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಹೆಗಡೆಯಲ್ಲಿ ಯಾವುದೇ ಕಾರ್ಯಕ್ರಮ ಆದರೂ ಗ್ರಾಮದ ಜನ ಒಗ್ಗಟ್ಟಿನಿಂದ ಸಹಕರಿಸುತ್ತಾರೆ. ಈ ಶಾಲೆ ಶತಮಾನೋತ್ಸವ ಪೂರೈಸಿದ ಇನ್ನು ಮುಂದೆಯೂ ಕೂಡ ಯಶಸ್ವಿಯಾಗಿ ದಾಪುಗಾಲು ಹಾಕಿ ಮನ್ನೆಡೆಯಲಿ ಎಂದು ಹಾರೈಸಿದರು.

RELATED ARTICLES  ಕೊರೋನಾ ಕಾಲದಲ್ಲಿ ದೇಶಪಾಂಡೆ ಟ್ರಸ್ಟ್ ವತಿಯಿಂದ "ಸಹಾಯ ಹಸ್ತ" ಕಾರ್ಯಕ್ರಮ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಗಡೆ ಗ್ರಾ ಪಂ ಅಧ್ಯಕ್ಷರಾದ ಮಂಜುನಾಥ ಪಟಗಾರ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕ ದಿನಕರ ಶೆಟ್ಟಿಯವರು ಮಾತನಾಡಿ ಶತಕದ ಹೊಸ್ತಿಲ್ಲಿ ಉನ್ನತಿಯ ಶಿಕ್ಷಣ ನೀಡುತ್ತಿರುವ ಈ ಶಾಲೆ ಅನೇಕರ ಜೀವನ ಬೆಳಗಿದೆ ಎಂದರು.

RELATED ARTICLES  ಆಸ್ತಿಯ ಕಲಹ ಕೊಲೆಯಲ್ಲಿ ಅಂತ್ಯ? ಹೊನ್ನಾವರದಲ್ಲಿ ಕತ್ತಿಯಿಂದ ಹೊಡೆದು ವ್ಯಕ್ತಿಯ ಕೊಲೆ?

ಜಿ ಪಂ ಸದಸ್ಯ ಪ್ರದೀಪ ನಾಯಕ, ಜಿ ಪಂ ಸದಸ್ಯ ರತ್ನಾಕರ ನಾಯ್ಕ, ಜಿ ಪಂ ಸದಸ್ಯೆ ಗಾಯತ್ರಿ ಗೌಡ, ಶಿಕ್ಷಣ ಇಲಾಖೆ ಉಪನಿರ್ದೇಶಕ ಪಿ ಕೆ ಪ್ರಕಾಶ್, ಆನಂದು ಗಾಂವ್ಕರ್, ಸಮಿತಿಯ ಗೌರವಾಧ್ಯಕ್ಷ ಎಲ್ ವಿ ಶಾನಭಾಗ, ಮುಖ್ಯಾಧ್ಯಾಪಕಿ ಮಂಗಲಾ ಹೆಬ್ಬಾರ್ ಹಾಗೂ ಇತರರು ಉಪಸ್ಥಿತರಿದ್ದರು. ರತ್ನಾಕರ ನಾಯ್ಕ ಶತಮಾನ ಸಂಭ್ರಮ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.ಶಿಕ್ಷಕರು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.