ಶಿರಸಿ: ತಾಲೂಕಿನ ಗಡಿಯಲ್ಲಿರುವ ಸರಕುಳಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ವಾಲಿಬಾಲ್ ಪಂದ್ಯಾಟ ಫೆ.25ರಂದು ಸರಕುಳಿ ಶ್ರೀಜಗದಾಂಬಾ ಪ್ರೌಢ ಶಾಲಾ ಆವಾರದಲ್ಲಿ ನಡೆಯಲಿದೆ.

ಕಳೆದ 46 ವರ್ಷದಿಂದ ನಿರಂತರವಾಗಿ ವಿವಿಧ ಕ್ರೀಡಾ ಸ್ಪರ್ಧೆ ನಡೆಸುತ್ತಿರುವ ಕ್ರಿಯಾಶೀಲ ಸರಕುಳಿ ಜಗದಾಂಬಾ ಪ್ರೌಢ ಶಾಲೆಹಳೆ ವಿದ್ಯಾರ್ಥಿ ಸಂಘವು ಈ ಬಾರಿ 47ನೇ ವರ್ಷದ ಸ್ಪರ್ಧೆ ಹಮ್ಮಿಕೊಂಡಿದೆ. ಶಿರಸಿ ಉಪ ವಿಭಾಗ ಮಟ್ಟದ ಗ್ರಾಮೀಣ ಕ್ರೀಡಾಸಕ್ತರು ವಾಲಿಬಾಲ್ ಪಂದ್ಯಾವಳಿಗೆ ಹೆಸರು ನೊಂದಾಯಿಸಬಹುದಾಗಿದೆ. ಬೆಳಿಗ್ಗೆ 10ಕ್ಕೆ ಸ್ಪರ್ಧೆಗಳು ಆರಂಭವಾಗಲಿದ್ದು, ಸ್ಥಳದಲ್ಲೂ ಹೆಸರು ನೊಂದಾಯಿಸಲು ಅವಕಾಶವಿದೆ.

RELATED ARTICLES  ಅ. 8 ರಂದು ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ

ವಿವರಗಳಿಗೆ 08389 254940, 9481972531ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಜಿ.ಹೆಗಡೆ ತ್ಯಾರಗಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.