ಭಟ್ಕಳ: ಸಿದ್ಧಾರ್ಧ ಪದವಿ ಮಹಾವಿದ್ಯಾಲಯ ಶಿರಾಲಿ ಇದರ ಕರ್ನಾಟಕ ವಿಶ್ವವಿದ್ಯಾಲಯದ 2017ರ ಬಿ.ಎಸ್ಸಿ. ಪ್ರಥಮ ಸೆಮಿಸ್ಟರ್ ಫಲಿತಾಂಶ ಪ್ರಕಟವಾಗಿದ್ದು ಕಾಲೇಜಿನಿಂದ ಪರೀಕ್ಷೆಗೆ ಹಾಜರಾದ ಎಲ್ಲಾ 36 ವಿದ್ಯಾರ್ಧಿಗಳು ಉತ್ತೀರ್ಣರಾಗುವುದರೊಂದಿಗೆ ಕಾಲೇಜಿಗೆ ಶೇ.100 ಫಲಿತಾಂಶ ಬಂದಿದೆ.
ಉತ್ತೀರ್ಣರಾದವರಲ್ಲಿ 17 ವಿದ್ಯಾರ್ಧಿಗಳು ಡಿಸ್ಟಿಂಕ್ಷನ್ ಹಾಗೂ 19 ವಿದ್ಯಾರ್ಧಿಗಳು ಪ್ರಧಮ ಶ್ರೇಣಿಯಲ್ಲಿ ಪಾಸಾಗುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಪರೀಕ್ಷೆಯಲ್ಲಿ ಪಿ.ಸಿ.ಎಂ. ವಿಭಾಗದಲ್ಲಿ ಚೇತನಾ ಎಲ್. ನಾಯ್ಕ ಶೇ.97, .ದಿವ್ಯಾ ಆರ್. ನಾಯ್ಕ ಶೇ.93, ಕಾವ್ಯ ಸಿ. ಹೆಗಡೆ ಶೇ.92, ಸಂಧ್ಯಾ ಎಸ್.ಹೆಬ್ಬಾರ ಶೇ.92, ಶ್ವೇತಾ ಎಸ್. ರಾಥೋಡ ಶೇ.87 ಹಾಗೂ ಅನ್ನಪೂರ್ಣ ಬಿ. ದೇವಾಡಿಗ ಶೇ.86 ಅಂಕಗಳನ್ನು ಪಡೆದಿರುತ್ತಾರೆ.
ಪಿ.ಸಿ.ಎಂ.ಎಸ್. ವಿಭಾಗದಲ್ಲಿ ಭಾರತಿ ಎನ್.ನಾಯ್ಕ ಶೇ.87, ಭಾರತಿ ಎ. ನಾಯ್ಕ ಶೇ.85, ಅನುಷಾ ವಿ. ಫರ್ಟಾಡೋ ಶೇ.84, ಅಶ್ವಿನಿ ಎಲ್. ನಾಯ್ಕ ಶೇ.83, ನಿತೇಶ ಆರ್. ನಾಯ್ಕ ಶೇ.82, ಕೇಶವ ನಾಯ್ಕ ಶೇ.80 ಹಾಗೂ ಮಂಜುನಾಥ ದೇವಡಿಗ ಶೇ.80 ಅಂಕಗಳನ್ನು ಪಡೆದಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ವಿದ್ಯಾರ್ಧಿಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.