ಭಟ್ಕಳ : ‘ಉದ್ಯಮಶೀಲತೆಯ ಅನ್ವೇಷಣೆ ಹಾಗೂ ತೆರಿಗೆಯ ವ್ಯವಸ್ಥೆ – ಭಾರತದ ಉದ್ದಿಮೆಯ ಮೇಲೆ ಇತ್ತೀಚಿನ ಪ್ರವೃತ್ತಿಗಳು’ ಎಂಬ ವಿಷಯವಾಗಿ ಇಲ್ಲಿನ ಅಂಜುಮನ್ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವು ಅತ್ಯಂತ ಯಶಸ್ವಿಯಾಗಿ ಜರಗಿತು.
ಕಾಲೇಜಿನ ವಾಣಿಜ್ಯ ವಿಭಾಗದಡಿಯಲ್ಲಿ ನಡೆದ ಈ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಮಹಾರಾಷ್ಟ್ರದ ಪುಣೆಯ ಎ.ಐ.ಎಂ.ಎಸ್.ದ ನಿರ್ದೇಶಕರಾದ ಡಾ. ಮೊಹಮ್ಮದ್ ಸಲೀಮ್ ಎ. ಲಾಹೋರಿ ಉದ್ಯಮ ಕ್ಷೇತ್ರದ ಹೊಸ ಅವಕಾಶಗಳನ್ನು ಕುರಿತು ವಿವರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ, ಮಂಗಳೂರಿನ ನಂದಗೋಪಾಲ ಶೆಣೈ, ಉದ್ದಿಮೆಯ ಮೇಲೆ ಸರಕು ಮತ್ತು ಸೇವಾ ತೆರಿಗೆಯ ಪರಿಣಾಮಗಳ ಕುರಿತು ವಿವರಿಸಿದರು. ಸೇವಾ ಮತು ಸರಕು ತೆರಿಗೆಯ ಕುಮಟಾ ವಲಯದ ಸಹಾಯಕ ಆಯುಕ್ತರಾದ ಭರತೇಶ ಕುಮಾರ ಜಿ.ಎಸ್.ಟಿ. ಪಾವತಿಸುವ ವಿಧಾನವನ್ನು ಕುರಿತು ಸವಿವರವಾಗಿ ಮಾಹಿತಿ ನೀಡಿದರು. ಕಾರವಾರ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ನಂದನ ಐಗಳ, ಆದಾಯ ತೆರಿಗೆಯ ವಿಧಾನಗಳ ಕುರಿತು ವಿವರಿಸಿದರು. ಧಾರವಾಡದ ಜೆ.ಎಸ್.ಎಸ್.ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಶೌಕತ್ ಅಲಿ ಎಂ. ಮಗಲಮನಿ, ಭಾರತದ ಆರ್ಥಿಕ ವ್ಯವಸ್ಥೆಯ ಮೇಲೆ ಸೇವಾ ಮತ್ತು ಸರಕು ತೆರಿಗೆ ಬೀರಿದ ಪರಿಣಾಮಗಳನ್ನು ಕುರಿತು ಪರಿಣಾಮಕಾರಿಯಾಗಿ ವಿವರಿಸಿದರು.
ಅಂಜುಮನ್ ಆಡಳಿತ ಮಂಡಳಿಯ ಉಪಾಧ್ಯಕ್ಷ ಸೈಯ್ಯದ್ ಎಸ್.ಎಂ ಅಬ್ದುರ್ರಹ್ಮಾನ್ ಬಾತಿನ್ ಧ್ಯಕ್ಷತೆ ವಹಿಸಿದ್ದರು. ನಡೆದ
ವೇದಿಕೆಯಲ್ಲಿ ಕಾಲೇಜ್ ಬೋರ್ಡ್ ಕಾರ್ಯದರ್ಶಿ ಜಾವೇದ್ ಹುಸೇನ್ ಅರ್ಮಾರ್, ಪ್ರಾಚಾರ್ಯರಾದ ಪ್ರೊ. ಎಂ. ಕೆ. ಶೇಖ್, ಉಪಪ್ರಾಚಾರ್ಯರಾದ ಸಹೀಲ್ ಅಹ್ಮದ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಎ.ಎಂ.ಮುಲ್ಲಾ, ನ್ಯಾಕ್ ಸಂಯೋಜಕ ಪ್ರೊ. ಬಿ. ಎಚ್. ನದಾಫ್ ಉಪಸ್ಥಿತರಿದ್ದರು.
ಪ್ರಾಚಾರ್ಯ ಪ್ರೊ. ಮುಸ್ತಾಕ್ ಕೆ. ಶೇಖ್ ಸ್ವಾಗತಿಸಿದರೆ, ಪ್ರೊ. ಎ.ಎಂ.ಮುಲ್ಲಾ ವಂದಿಸಿದರು. ಪ್ರೊ. ರವೀಂದ್ರ ಕಾಯ್ಕಿಣಿ ಕಾರ್ಯಕ್ರಮ ನಿರೂಪಿಸಿದರು.