ಹೊನ್ನಾವರ : ಹೊನ್ನಾವರದ ಯುವಕ ಪರೇಶ ಮೇಸ್ತ ಹತ್ಯೆಯ ಆರೋಪಿಗಳಾದ ಇಮ್ತಿಯಾಜ್ ಶೇಖಗನಿ (44) ಮತ್ತು ಪೈಸಲ್ ಸಯ್ಯದ್ ಹರೂನ್ (23) ಕೊನೆಗೂ ಬಂಧನಕ್ಕೊಳಗಾಗಿದ್ದರೆ. ತಲೆಮರೆಸಿಕೊಂಡಿದ್ದ ಈ ಇಬ್ಬರು ಆರೋಪಿಗಳನ್ನು ಶಿರಸಿಯಲ್ಲಿ ಬಂಧಿಸಲು ಹೊನ್ನಾವರ ಪೊಲೀಸರು ಯಶಸ್ವಿಯಾಗಿದ್ದಾರೆ.

ಒಟ್ಟು ಐವರು ಆರೋಪಿಗಳಲ್ಲಿ ಈ ಮೊದಲು ಆಜಾದ್ ಅಣ್ಣಿಗೇರಿ, ಜೀಮ್ ಸಲೀಂ ಶೇಖ ಹಾಗೂ ಆಸಿಫ್ ರಫೀಕ್ ನನ್ನು ಪೊಲೀಸರು ಬಂಧಿಸಿದ್ದು, ಈಗ ಒಟ್ಟು ಐದೂ ಆರೋಪಿಗಳನ್ನು ಬಂದಿಸಿದಂತೆ ಆಗಿದೆ.

RELATED ARTICLES  ಜಿಲ್ಲೆಯಲ್ಲಿ ಇಂದು 51 ಮಂದಿಗೆ ಕೊರೋನಾ ಸೋಂಕು

ಆರೋಪಿಗಳ ಬಂದನ ವಿಳಂಬಕ್ಕೆ ರಾಜಕೀಯ ಅಡೆತಡೆಗಳು ಕಾರಣವೆಂದು ಸಾಕಷ್ಟು ಆರೋಪಗಳು ಕೇಳಿಬಂದಿದ್ದವು ಹಾಗೂ ಸಾಕಷ್ಟು ಪ್ರತಿಭಟನೆ ನಡೆದಿದ್ದವು. ಕೊನೆಗೂ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಲು ನಿಷ್ಠಾವಂತ ಪೋಲಿಸ್ ಅಧಿಕಾರಿಗಳಾದ ಚೆಲುವರಾಜು ಮತ್ತು ತಂಡ ಯಶಸ್ವಿಯಾದಂತೆ ಆಗಿದೆ. ಈ ಮಧ್ಯೇ ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿದೆ ಎಂದು ಹೇಳಲಾಗಿತ್ತು.

RELATED ARTICLES  ಜ.೨೮ ಕ್ಕೆ ಹಣತೆ ಬೆಳಕಿನಲ್ಲಿ ಸಾರಾ ಅಬೂಬಕ್ಕರ್ : ಕಾಳಿ ತೀರದಲ್ಲಿ ‘ಚಂದ್ರಗಿರಿ ತೀರ’ದ ನೆನಪುಗಳು ಕಾರ್ಯಕ್ರಮ