ಮುರ್ಡೇಶ್ವರ: ವ್ಯಾಲಂಟೈನ್ಸ್ ಡೇ ಇನ್ನೇನು ಬಂದೇ ಬಿಡತ್ತೆ. ಪ್ರೇಮಿಗಳಿಗೆ ಇದು ಹಬ್ಬ ಇದ್ದಂತೆ. ಎಲ್ಲೆಲ್ಲೋ ಇರೋ ಪ್ರೇಮಿಗಳು ಎಷ್ಟೇ ಕಷ್ಟ ಆದ್ರೂ ಪರವಾಗಿಲ್ಲ, ಈ ದಿನ ಮಾತ್ರ ಒಟ್ಟಿಗೆ ಇರಬೇಕು. ಒಟ್ಟಿಗೆ ಟೈಮ್ ಕಳಿಬೇಕು ಅಂತ ಇಷ್ಟ ಪಡೋ ದಿನ.

ಹಾಗಿದ್ರೆ ಈ ಬಾರಿ ವ್ಯಾಲಂಟೈನ್ಸ್ ಡೇಗೆ ಪ್ರೇಯಸಿಯನ್ನ ಎಲ್ಲಿಗೆ ಕರೆದುಕೊಂಡು ಹೋಗಬೇಕು ಅನ್ಕೊಂಡಿದ್ದೀರಾ? ಎಲ್ಲಾದ್ರು ದೂರ ಟ್ರಿಪ್ ಗೆ ಹೋಗಬೇಕು ಅಂತ ಪ್ಲಾನ್ ಹಾಕಿದ್ದೀರಾ? ಅಥವಾ ಯಾವ್ದಾದ್ರು ಬೀಚ್ ನಲ್ಲಿ ಇಬ್ಬರೂ ಸಮಯ ಕಳಿಬೇಕು ಅಂತ ಅನ್ಕೊಂಡಿದ್ದೀರಾ? ಒಟ್ಟಾರೆ ಈ ದಿನ ಪ್ರೇಮಿಗಳಿಬ್ಬರ ನೆನಪಿನಂಗಳದಲ್ಲಿ ಚಿರ ನೆನಪಾಗಿ ಉಳಿಬೇಕು. ಅಂಥ ಕಡೆ ಕರ್ಕೊಂಡ್ ಹೋದ್ರೆ ನಿಮ್ ಹುಡ್ಗಿ ಕೂಡ ನಿಮ್ಮನ್ನ ಕುಂತಲ್ಲಿ, ನಿಂತಲ್ಲಿ ನೆನೆಸ್ಕೋತಿರ್ತಾಳೆ ಅಲ್ವಾ.

RELATED ARTICLES  ಡಿ.ಸಿ ಹಾಗೂ ಎಸ್.ಪಿ ಗೆ ಸಮನ್ಸ್ ಜಾರಿ

ಹಾಗಿದ್ರೆ ಅಂಥಾ ಜಾಗ ಯಾವ್ದು? ಎಲ್ಲಿಗೆ ಕರ್ಕೊಂಡ್ ಹೋಗಿ, ಪ್ರೀತಿಯನ್ನ ನಿವೇದನೆ ಮಾಡ್ಕೊಳ್ಳಲಿ ಅಂತ ಯೋಚನೆ ಮಾಡ್ತಿದ್ದೀರಾ? ಅದಕ್ಕಾಗಿ ಮುರುಡೇಶ್ವರದ ನೇತ್ರಾಣಿ ಅಡ್ವೆಂಚರ್ ನಿಮಗೊಂದು ಅವಕಾಶ ಕಲ್ಪಿಸಿಕೊಡುತ್ತಿದೆ‌. ಅದು ಕೂಡ ನಿಮ್ಮ ನೆನಪಿನಲ್ಲಿ ಸದಾ ಇರುವಂಥೆ ಮಾಡುವ ಸುವರ್ಣವಕಾಶ ಕಲ್ಪಿಸುತ್ತಿದೆ.

ಹೌದು. ಈಗಾಗಲೇ ಜಗತ್ಪ್ರಸಿದ್ಧಿ ಪಡಿದಿರೋ ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ ನೇತ್ರಾಣಿಯ ಸ್ಕೂಬಾ ಡೈವಿಂಗ್ ಪ್ರೇಮಿಗಳಿಗಾಗಿ ಪ್ರೇಮಿಗಳ ದಿನದಂದು ಪ್ರೇಮಿಗಳ ತಾಣವಾಗಿ ರೂಪುಗೊಳ್ಳಲಿದೆ. ಇದಕ್ಕಾಗಿ ಸ್ಕೂಬಾ ಡೈವಿಂಗ್ ಏಜೆನ್ಸಿ ಪಡೆದಿರುವ ನೇತ್ರಾಣಿ ಅಡ್ವೆಂಚರ್ಸ್‌ ಸಂಸ್ಥೆ ಜೋಡಿಗಳಿಗೆ ಸ್ಕೂಬಾ ಡೈವಿಂಗ್ ಮಾಡಲು ವಿಶೇಷ ರಿಯಾಯಿತಿ ನೀಡುತ್ತಿದೆ. ವಸತಿಯೊಂದಿಗೆ ಕೇವಲ 10 ಸಾವಿರ ರೂ.ಗೆ ಇಬ್ಬರಿಗೂ ಸ್ಕೂಬಾ ಡೈವ್ ಮಾಡಲು ಅವಕಾಶ ನೀಡುತ್ತಿದೆ.

RELATED ARTICLES  ಆಯ ತಪ್ಪಿ ಬಾವಿಗೆ ಬಿದ್ದ ಮಗು ಸಾವು ; ಕುಟುಂಬದವರ ಆಕ್ರಂದನ

ಮುರುಡೇಶ್ವರ ಪಾಮ್ ಗ್ರೂವ್ ಹೋಟೆಲ್ ನಲ್ಲಿ ಉಚಿತ ವಸತಿ, ಬಳಿಕ ನೇತ್ರಾಣಿ ದ್ವೀಪಕ್ಕೆ ಇಬ್ಬರನ್ನೂ ಕರೆದೊಯ್ದು ಸ್ಕೂಬಾ ಡೈವ್ ಮಾಡಿಸಲು ಸಂಸ್ಥೆ ಅಣಿಯಾಗಿದೆ.

ಫೆ.9ರಿಂದ ಫೆ.18ರವರೆಗೆ ಈ ಅವಕಾಶ ಇದ್ದು, ನಿಮ್ಮ ಪ್ರೇಯಸಿಗೆ ಮರೆಯಲಗಾದ ಈ ಸ್ಕೂಬಾ ಡೈವಿಂಗ್ ಅನುಭವ ನೀಡಲು ಮಾತ್ರ ಮರಿಯಬೇಡಿ. ಹಾಗಿದ್ರೆ ಇನ್ನೇಕೆ ತಡ. ಮೊ.ಸಂ: 9900431111, 9916554422ಗೆ ಕರೆ ಮಾಡಿ ಇಂದೇ ಈ ಆಫರ್ ಅನ್ನ ಬುಕ್ ಮಾಡಿಕೊಳ್ಳಿ.