‘ರಾಜೀವ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಕರ್ನಾಟಕ’ ಇವರು ನಡೆಸಿದ ಆಯುರ್ವೇದ ಸ್ವಸ್ಥ ವೃತ್ತ ಪರೀಕ್ಷೆ- 2017 ರ M.D.(ಆಯುರ್ವೇದ ಸ್ನಾತಕೋತ್ತರ ಪದವಿ)ಯಲ್ಲಿ ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಡಾ.ನಾಗರಾಜ ಭಟ್ಟ ಇವರು ಯೂನಿವರ್ಸಿಟಿಗೆ ಪ್ರಥಮ Rank ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಇವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು ಗೀತಾ ಭಟ್ಟ ಮತ್ತು ಗಣಪತಿ ಭಟ್ಟ ಹೊಲನಗದ್ದೆ ದಂಪತಿಯ ಸುಪುತ್ರರು.

ಕುಮಟಾ ಹೊಲನಗದ್ದೆ-ಬಾಡಾ ದ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದ ಇವರು ಆಯುರ್ವೇದ B.M.S.ಪದವಿಯನ್ನು ಉಡುಪಿಯ ಎಸ್.ಡಿ.ಎಮ್.ಕಾಲೇಜಿನಲ್ಲಿ ಪೂರೈಸಿರುತ್ತಾರೆ.

RELATED ARTICLES  ಉತ್ತರ ಕನ್ನಡದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರ ಸಂಚಾರ : ಪಕ್ಷ ಸಂಘಟನೆಗೆ ನಡೆಯಲಿದೆ ಹೊಸ ತಂತ್ರ

ಮೂರು ವರ್ಷಗಳ ಸ್ನಾತಕೋತ್ತರ ಪದವಿಯ ಅವಧಿಯಲ್ಲಿ ಅಂತೂ ಆರು ಥಿಸಿಸ್ ಗಳನ್ನು ಮಂಡಿಸಿದ್ದು ರಾಷ್ಟ್ರ ಮಟ್ಟದ MANAS-2015 ರಲ್ಲಿ “ಬೆಸ್ಟ್ ಪೇಪರ್ ಪ್ರೆಸೆಂಟೇಶನ್ ಅವಾರ್ಡ” ಗೂ ಭಾಜನರಾಗಿದ್ದಾರೆ.
ಕೊಯಿಮುತ್ತೂರು,ಕೇರಳ,ಬೆಂಗಳೂರು ನಲ್ಲಿ ಅಂತರಾಷ್ಟ್ರೀಯ ಮಟ್ಟದ ಪ್ರೆಸೆಂಟೇಶನ್ ಮಾಡಿರುವುದಲ್ಲದೇ ಇವರ ಮೂರು ರಿಸರ್ಚ ಆರ್ಟಿಕಲ್ ಗಳು ಇಂಟರ್ ನ್ಯಾಶನಲ್ ಜರ್ನಲ್ ಗಳಲ್ಲಿಯೂ ಪ್ರಕಟವಾಗಿರುವುದು ಹೆಮ್ಮೆಯ ವಿಷಯ.

ದೇಶದ ವಿವಿಧೆಡೆಯಷ್ಟೇ ಅಲ್ಲದೇ ವಿದೇಶದ ಕೆಲವೆಡೆಗೂ ಸೇವೆ ಸಲ್ಲಿಸುವ ಅವಕಾಶ ಡಾ.ನಾಗರಾಜ ಭಟ್ಟರವರಿಗೆ ಲಭಿಸಿದ್ದಾಗ್ಯೂ ತಮ್ಮ ಹುಟ್ಟೂರಿನಲ್ಲಿಯೇ ವೈದ್ಯಕೀಯ ಸೇವೆ ಸಲ್ಲಿಸಬೇಕೆಂಬ ಇರಾದೆಯೊಂದಿಗೆ ಗ್ರಾಮೀಣ ಪ್ರದೇಶವಾಗಿರುವ ಹೊಲನಗದ್ದೆ ಯಲ್ಲಿ ಸ್ವಂತದ್ದಾದ “ಶ್ರೀ ನಾಗ ಆಯುರ್ಧಾಮ” ಹೆಸರಿನಲ್ಲಿ ಆಯುರ್ವೇದ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದು ವಾರದ ಕೆಲ ದಿನ ಕುಮಟಾದ ‘ಪತಂಜಲಿ ಆರೋಗ್ಯ ಕೇಂದ್ರ’ ದಲ್ಲಿಯೂ ಸೇವೆಗೆ ಲಭ್ಯರಿರುತ್ತಾರೆ.

RELATED ARTICLES  ಭಟ್ಕಳದಲ್ಲಿ ಕೋವಿಡ್-19 ಕುರಿತು ಪ್ರಮುಖ ಅಧಿಕಾರಿಗಳ ಸಭೆ : ಸಂಸದರ ಅಧ್ಯಕ್ಷತೆಯಲ್ಲಿ ಸಭೆ

ಇವರ ಪತ್ನಿ ಡಾ.ವಿನಯಾ ರವರೂ ಕೂಡ ಆಯುರ್ವೇದದಲ್ಲಿ ಸ್ನಾತಕೋತ್ತರ ಪದವಿಯ ಅಧ್ಯಯನ ಮಾಡುತ್ತಿದ್ದಾರೆ.ಡಾ.ನಾಗರಾಜ ಭಟ್ಟ ರವರ ಅಜ್ಜ ಗಜಾನನ ಭಟ್ಟ ರವರೂ ಗಿಡಮೂಲಿಕೆ ಔಷಧಿ ನೀಡುತ್ತಿದ್ದರೆಂಬುದನ್ನೂ ಇಲ್ಲಿ ಸ್ಮರಿಸಬಹುದಾಗಿದೆ.

-ಜಯದೇವ ಬಳಗಂಡಿ
ಸತ್ವಾಧಾರಾ ನ್ಯೂಸ್.