ಕುಮಟಾ: ಜ್ಯೇಷ್ಠಾ ಯುವಕ ಮಂಡಳ, ಜ್ಯೇಷ್ಠಾಪುರ, ಕುಮಟಾ ಇವರ ಆಶ್ರಯದಲ್ಲಿ ಇತ್ತೀಚೆಗೆ ಅಗಲಿದ ಕಮಲೇಶ ನಾಯ್ಕ ಇವರ ಸ್ಮರಣಾರ್ಥ ಹಮ್ಮಿಕೊಂಡ ತಾಲೂಕಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಹಾಗೂ ಮಕ್ಕಳ ಮನರಂಜನಾ ಕಾರ್ಯಕ್ರಮ ಜ್ಯೇಷ್ಠಾಪುರ ಜಗದಂಬಾ ದೇವಸ್ಥಾನದ ಆವರಣದಲ್ಲಿ ಅದ್ಧೂರಿಯಾಗಿ ಜರುಗಿತು.

ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಯುವ ಮುಖಂಡ ರವಿಕುಮಾರ ಶೆಟ್ಟಿ ಅವರು ಮಾತನಾಡಿ ಅಮೋಘವಾಗಿ ನಡೆಯುತ್ತಿರುವ ಈ ಕಬಡ್ಡಿ ಪಂದ್ಯಾವಳಿ ನಿಜಕ್ಕೂ ಶ್ಲಾಘನೀಯ. ಯುವಕರು ಇಂತಹ ದೇಶೀಯ ಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಪಂದ್ಯಾವಳಿಗಳನ್ನು ಹೆಚ್ಚೆಚ್ಚು ನಡೆಸಬೇಕು ಎಂದರು.

RELATED ARTICLES  ರಾಷ್ಟ್ರಮಟ್ಟದ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಹೊನ್ನಾವರದ ಅದ್ವೈತ ಸ್ಪೋಟ್ಸ್ ಕ್ಲಬ್ ಚಾಂಪಿಯನ್!

ಕ್ರೀಡಾಂಗಣವನ್ನು ಉದ್ಘಾಟಿಸಿದ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶ್ರೀ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಕಬಡ್ಡಿಯಂತಹ ದೇಶೀಯ ಕ್ರೀಡೆಗಳ ಮಹತ್ವವನ್ನು ಚಿಕ್ಕ ಮಕ್ಕಳಲ್ಲೂ ಕೂಡಾ ತುಂಬಿ ಇಂತಹ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕು. ಎಲ್ಲಾ ಸ್ಪರ್ಧಾಳುಗಳು ಕ್ರೀಡೆಯನ್ನು ಸ್ಪರ್ಧಾತ್ಮಕವಾಗಿ ಆಡಿ ತಮ್ಮ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬೇಕು. ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಸದೃಢತೆ ಉಂಟಾಗುತ್ತದೆ. ಇದರಿಂದ ಮನುಷ್ಯನ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ ಮತ್ತು ಜೀವನದಲ್ಲಿ ಆಗುವ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನಃಸ್ತಿತಿ ಬೆಳೆಯುತ್ತದೆ. ಸ್ಪರ್ಧಾಳುಗಳು ನಿರ್ಣಾಯಕರ ತೀರ್ಪನ್ನು ಸಮಚಿತ್ತದಿಂದ ಸ್ವೀಕರಿಸಿ ಮುನ್ನಡೆಯಬೇಕು ಎಂದು ಕರೆ ನೀಡಿ ಇತ್ತೀಚೆಗೆ ಅಗಲಿದ ಕಮಲೇಶ ನಾಯ್ಕ ಇವರಿಗೆ ಶೃದ್ಧಾಂಜಲಿಯನ್ನು ಅರ್ಪಿಸಿದರು.

RELATED ARTICLES  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪರೀಕ್ಷೆಯಲ್ಲಿ ಸಾಧನೆ.

ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯ ಜಗನ್ನಾಥ ಆರ್. ನಾಯ್ಕ ಟ್ರೋಫಿ ಅನಾವರಣಗೊಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷರಾದ ಲಕ್ಷ್ಮೀ ದತ್ತ ಪಟಗಾರ ವಹಿಸಿದ್ದರು.

ಇದೇ ವೇದಿಕೆಯಲ್ಲಿ ಅನಿಲಕುಮಾರ, ವೆಂಕಟ್ರಮಣ ಹೆಗಡೆ, ಭಾಸ್ಕರ ಪಟಗಾರ, ಗಣಪತಿ ಜಿ. ನಾಯ್ಕ, ವಸಂತ ಎಲ್. ನಾಯ್ಕ ಮತ್ತು ಸುಬ್ರಾಯ ಜಿ. ನಾಯ್ಕ ಮುಂತಾದ ಗಣ್ಯರು ಉಪಸ್ಥಿತರಿದ್ದರು.