ಹೊನ್ನಾವರ: ಶ್ರೀಕುಮಾರ ಸಮೂಹ ಸಂಸ್ಥೆ ಹೊನ್ನಾವರ ಇವರ ವತಿಯಿಂದ ನಾರಾಯಣ ಹೃದಯಾಲಯ ಬೆಂಗಳೂರು ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ದೊರೆತಿದೆ.ಎರಡು ದಿನಗಳ ಕಾಲ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ ನಡೆಯಲಿದ್ದು ಜನ ಸರತಿ ಸಾಲಿನಲ್ಲಿ ನಿಂತು ಇದರ ಪ್ರಯೋಜನ ಪಡೆಯುತ್ತಿರುವ ದೃಷ್ಯ ಕಂಡು ಬಂತು.

RELATED ARTICLES  ಮುಂದುವರಿದ ಶೋಧ ಕಾರ್ಯ

ಹೊನ್ನಾವರದ ಮೂಡಗಣಪತಿ ಸಭಾಗೃಹದಲ್ಲಿ ಶಿಬಿರಕ್ಕೆ ಚಾಲನೆದೊರೆತಿದ್ದು ಹಾಸ್ಟಲ್ಸ್ ಅಸೋಸಿಯೇಷನ್ ಆಪ್ ಇಂಡಿಯಾ ತುಮಕೂರು ಘಟಕ ,ಐ.ಎಂ.ಎ.ಹೊನ್ನಾವರ ನಾರ್ಥ್ ಕೆನರಾ ಜಿಲ್ಲಾ ಕೆಮಿಸ್ಟ್ ಅಂಡ್ ಡ್ರಗೀಸ್ಟ್ ಅಸೋಸಿಯೇಶನ್ ಇವರುಗಳ ಸಯುಕ್ತ ಆಶ್ರಯದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಉಚಿತ ಔಷಧ ವಿತರಣೆ ನಡೆಯುತ್ತಿದೆ.

RELATED ARTICLES  ಶ್ರೀ ರಾಮಚಂದ್ರಾಪುರ ಮಠದ ವತಿಯಿಂದ ವಿದ್ಯಾ ಸಹಾಯ ನಿಧಿ ವಿತರಣೆ

ಶ್ರೀಕುಮಾರ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವೆಂಕಟ್ರಮಣ ಹೆಗಡೆಯವರ ಮುಂದಾಳತ್ವದಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿದ್ದು ಅಪೂರ್ವ ಜನ ಸ್ಪಂದನೆ ವ್ಯಕ್ತವಾಗಿದೆ.

ಶ್ರೀ ವೆಂಕಟ್ರಮಣ ಹೆಗಡೆಯವರು ಸ್ಥಳದಲ್ಲಿದ್ದು ಅದರ ಎಲ್ಲ ಉಸ್ತುವಾರಿ ನಿಭಾಯಿಸುತ್ತಿದ್ದರು.ಡಾ.ಜಿ.ಜಿ ಸಭಾಹಿತ ಹಾಗೂ ಇನ್ನಿತರರು ವೇದಿಕೆ ಅಲಂಕರಿಸಿದ್ದರು. ಸೂರ್ಯನಾರಾಯಣ ಹೆಗಡೆ ಹಾಗೂ ಇನ್ನಿತರ ಪ್ರಮುಖರು ಕಾರ್ಯಕ್ರಮಕ್ಕೆ ಸಹಕರಿಸಿದರು.