ಅಂಗಾರಕ ಸಂಕಷ್ಟಿಯಂದು ಮುಖ್ಯವಾಗಿ ಗಣೇಶ ಹಾಗೂ ಚಂದ್ರನ ಪೂಜೆ ಮಾಡುವುದು ಶ್ರೇಷ್ಠ. ಸಮಸ್ತ ದೇವತೆಗಳಲ್ಲಿ ಮೊದಲು ಪೂಜೆ ಸಲ್ಲೋದು ಗಣೇಶನಿಗೆ. ಇಷ್ಟಾರ್ಥ ಸಿದ್ಧಿಗೆ ನಾಲ್ಕು ಭುಜಗಳುಳ್ಳ ಗಣೇಶನನ್ನು ಪೂಜೆ ಮಾಡುವುದು ಶ್ರೇಷ್ಠ ಎಂದು ಪರಿಗಣಿಸಲಾಗಿದೆ.
ಪ್ರತಿ ಚತುರ್ಥಿಗೆ ಅನೇಕರು ವೃತವನ್ನು ಆಚರಣೆ ಮಾಡ್ತಾರೆ. ವೃತ ಆಚರಣೆ ಮಾಡಲು ಸಾಧ್ಯವಾಗದವರು ಗಣೇಶನ ಪೂಜೆ ಮಾಡಿ ಹಾಗೂ ಕೆಲ ವಸ್ತುಗಳನ್ನು ದಾನ ಮಾಡಿ ಗಣೇಶನ ಕೃಪೆಗೆ ಪಾತ್ರರಾಗಬಹುದು. ಶುದ್ಧ ಮನಸ್ಸಿನಿಂದ ಗಣೇಶನ ಪ್ರಾರ್ಥನೆ ಮಾಡಿದ್ರೆ ಸಾಕು. ದುಃಖ, ಕಷ್ಟಗಳೆಲ್ಲ ದೂರವಾಗಿ ಸುಖ, ಶಾಂತಿ ನೆಲೆಸುತ್ತದೆ.
ಆತ್ಮವಿಶ್ವಾಸ ಕಡಿಮೆ ಇರುವ ವ್ಯಕ್ತಿ ಶ್ರೀಗಣೇಶನ ಪ್ರಾರ್ಥನೆ ಮಾಡ್ತಾ ಬಂದಲ್ಲಿ ವಿಶ್ವಾಸ ಹೆಚ್ಚುತ್ತದೆ.
ಗಣೇಶ ಚತುರ್ಥಿಯಂದು ಎಳ್ಳಿನಿಂದ ಮಾಡಿದ ಸಿಹಿ ತಿಂಡಿ ಅಥವಾ ಕಾಕಂಬಿಯಿಂದ ಮಾಡಿದ ಉಂಡೆಯನ್ನು ಅರ್ಪಿಸಬೇಕು.
ಅಂಗಾರಕ ಸಂಕಷ್ಠಿಯಂದು ಬೆಚ್ಚಗಿನ ಬಟ್ಟೆ, ಕಂಬಳಿ ಅಥವಾ ಬಟ್ಟೆಯನ್ನು ದಾನ ಮಾಡುವುದು ಒಳ್ಳೆಯದು.
ಅರ್ಧಕ್ಕೆ ನಿಂತ ಕೆಲಸ ಪೂರ್ತಿಯಾಗಬೇಕೆಂದಾದಲ್ಲಿ ಗಣೇಶ ಚತುರ್ಥಿಯಂದು ಗಣೇಶ ಸ್ತೋತ್ರವನ್ನು ಜಪಿಸಿ. ಪ್ರತಿ ಬುಧವಾರ ಹಾಗೂ ಚತುರ್ಥಿಯಂದು ಗಣೇಶ ಮಂತ್ರ ಪಠಣೆ ಮಾಡಬೇಕು.
ಶೀಘ್ರ ಫಲಕ್ಕಾಗಿ ಪ್ರತಿ ಬುಧವಾರ ಅಥವಾ ಚತುರ್ಥಿಯ ದಿನದಂದು ವೃತವನ್ನು ಆಚರಿಸಬೇಕು. ದಿನಪೂರ್ತಿ ಉಪವಾಸವಿದ್ದು, ಶ್ರದ್ಧೆಯಿಂದ ಗಣೇಶನ ಮಂತ್ರ ಪಠಿಸಿ, ಪೂಜೆ ಮಾಡಿ ರಾತ್ರಿ ಚಂದ್ರನನ್ನು ನೋಡಿದ ಬಳಿಕ ಆಹಾರ ಸೇವನೆ ಮಾಡಬೇಕು