ಕುಮಟಾ: 2017 – 18ನೇ ಶೈಕ್ಷಣಿಕ ವರ್ಷದ ಸ್ಕೌಟ್ ಆಂಡ್ ಗೈಡ್ಸ್‍ನ ರೋವರ್ ರಾಜ್ಯ ಪುರಸ್ಕಾರ ಪ್ರಶಸ್ತಿಗೆ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಬಿ.ಕಾಂ. 6ನೇ ಸೆಮಿಸ್ಟರ್ ವಿದ್ಯಾರ್ಥಿ ಭಾಸ್ಕರ ಈಶ್ವರ ಮರಾಠಿ ಆಯ್ಕೆಯಾಗಿದ್ದಾನೆ.

RELATED ARTICLES  ಶಿರಸಿಯಲ್ಲಿ ಮೊಳಗಿದ ಮೋದಿ ಘೋಷ: ಗಮನ ಸೆಳೆದ "ವಿಜಯ ಸಂಕಲ್ಪ ಯಾತ್ರೆ"

IMG 20180204 WA0004
ಫೆಬ್ರವರಿ 3 ರಂದು ಬೆಂಗಳೂರಿನ ರಾಜಭವನದಲ್ಲಿ ನಡೆದ ರಾಜ್ಯ ಪುರಸ್ಕಾರ ಪ್ರಶಸ್ತಿ ಸಮಾರಂಭದಲ್ಲಿ ಇವರು ರಾಜ್ಯಪಾಲರರಿಂದ ಈ ಪ್ರಶಸ್ತಿಯನ್ನು ಪಡೆದಿದ್ದಾರೆ.

ಸಾಧನೆಗೈದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದ ಭಾಸ್ಕರ ಈಶ್ವರ ಮರಾಠಿ ಇನ್ನು ಮುಂದೆ ಹೆಚ್ಚಿನ ಸಾಧನೆ ಮಾಡಲಿ ಎಂದು ಕೆನರಾ ಕಾಲೇಜು ಸೊಸೈಟಿ ಆಡಳಿತ ಮಂಡಳಿಯವರು, ಕಾಲೇಜಿನ ಪ್ರಾಚಾರ್ಯರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

RELATED ARTICLES  ಹದಿಹರೆಯ ವಯೋಮಾನದ ಮಕ್ಕಳಲ್ಲಿ ಉಂಟಾಗುವ ಸಮಸ್ಯೆಗಳ ಕುರಿತಾಗಿ ಉಪನ್ಯಾಸ ಕಾರ್ಯಕ್ರಮ.