ಕುಮಟಾ: ತಾಲ್ಲೂಕಿನ ಗೊಕರ್ಣ ಗ್ರಾಮ ಪಂಚಾಯತಕ್ಕೆ ಕುಡಿಯುವ ನೀರನ್ನು ಪೂರೈಸಲು ಅಂದಿನ ಶಾಸಕರಾದ ದಿ. ಮೋಹನ ಕೆ ಶೆಟ್ಟಿಯವರಕಾಲದಲ್ಲಿಯೋಜನೆಯನ್ನು ರೂಪಿಸಿ 2001 ರಲ್ಲಿಯೋಜನೆಗೆ 4 ಕೋಟಿ 46 ಲಕ್ಷ ರೂಗಳ ಅನುದಾನ ಬಿಡುಗಡೆ ಮಾಡಿಸಿ, ಯೋಜನೆಯಅನುಷ್ಠಾನಕ್ಕೆ ಚಾಲನೆ ನೀಡಲಾಗಿದ್ದರೂ ಸಹ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಟಾನಗೊಳಿಸುವಲ್ಲಿ ಅಂದಿನ ಆದಿಕಾರಿಗಳ ನಿರ್ಲಕ್ಷದಿಂದ ಯೋಜನೆಯು ಜನರಿಗೆ ನೀರಿಕ್ಷಿತ ಫಲ ನೀಡುವಲ್ಲಿ ವಿಫಲವಾಯಿತು.
ನಂತರದಲ್ಲಿ ಶಾಸಕಿಯಾಗಿ ಆಯ್ಕೆಯಾದ ಶಾರದಾ ಮೋಹನ ಶೆಟ್ಟಿಯವರು ತಾವು ಆಯ್ಕೆಯಾದ ಪ್ರಾರಂಭದ ದಿನಗಳಿಂದ ಗೋಕರ್ಣಗ್ರಾಮ ಪಂಚಾಯತದ ಜೊತೆಗೆ ಆ ಭಾಗದ ಇನ್ನುಳಿದ ನಾಡುಮಾಸ್ಕೇರಿ, ಹನೇಹಳ್ಳಿ, ತೊರ್ಕೆ ಮಾದನಗೇರಿ, ಹೀರೇಗುತ್ತಿ ಮತ್ತು ಬರ್ಗಿ ಗ್ರಾಮಪಂಚಾಯತಗಳ ಕುಡಿಯುವ ನೀರಿನ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಆಲೋಚಿಸಿ ವಿಸ್ತೃತವಾದ ಯೊಜನೆಯನ್ನು ತಾಂತ್ರಿಕ ಪರಿಣತರಿಂದ ರೂಪಿಸಿಕೊಂಡು ಅಂದಿನಿಂದ ಈ ಯೋಜನಗೆಅನುಮತಿ ದೊರಕಿಸಿಕೊಡುವಲ್ಲಿ ಹಲವಾರು ತೊಂದರೆಗಳು ಎದುರಾದರೂ ಸಹ ಎಲ್ಲವನ್ನು ಎದುರಿಸಿ, ಇವರು ವಿಧಾನಸೌದ, ಬಹುಮಹಡಿಕಟ್ಟಡ, ಕಾವೆರಿ ಭವನ ಹೀಗೆ ಹತ್ತು ಹಲವಾರುಕಡೆ ತಾವೇ ಖುದ್ದಾಗಿ ಹಲವಾರು ಬಾರಿ ಭೇಟಿಯಾಗಿ, ಅವಶ್ಯಯಕತೆಯಿದ್ದಲ್ಲಿ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ದೇಶಪಾಂಡೆಯವರ ಸಹಾಯ ಪಡೆದುಅಂತುಅಂತಿಮವಾಗಿ 24.5 ಕೋಟಿ ಮೊತ್ತದಕುಡಿಯುವ ನೀರಿನಯೋಜನೆಗೆ ಮಂಜೂರಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ರಿಯೋಜನೆಯಲ್ಲಿ ಗೋಕರ್ಣ ಗ್ರಾಮ ಪಂಚಾಯತವಲ್ಲದೇ ನಾಡುಮಾಸ್ಕೇರಿ, ಹನೇಹಳ್ಳಿ, ತೊರ್ಕೆ ಮಾದನಗೇರಿ, ಹೀರೇಗುತ್ತಿ ಮತ್ತು ಬರ್ಗಿ ಗ್ರಾಮಪಂಚಾಯತಗಳ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ಅವಶ್ಯಕವಾದ ವಿತರಣಾ ವ್ಯವಸ್ಥೆ, ಫೀಡರಲೈನ್ ಸ್ಥಾಪನೆ, ಟ್ಯಾಂಕರಗಳ ನಿರ್ಮಾಣ, ಎಚ್.ಟಿ ವಿದ್ಯುತ ಲೈನಗಳ ಜೋಡಣೆ ಹಾಗೂ ಪಂಪ, ಮೋಟಾರ ಮತ್ತಿತರಅವಶ್ಯಕ ಕಾಮಗಾರಿಗಳ ಅನುಷ್ಟಾನಕ್ಕೆ 24.5 ಕೋಟಿಅನುದಾನ ಒದಗಿಸಿದ್ದು, ಸದ್ರಿಯೋಜನೆಯಟೆಂಡರನ್ನು ಸಹ ಕರೆದಿದ್ದು, ಈ ಭಾಗದಕುಡಿಯುನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದೊರಕಿದ್ದುಜನರ ಕನಸು ನನನಸಾಂದಂತಾಗಿದೆ.
ಪ್ರವಾಸೋದ್ಯಮ ಇಲಾಖೆಯಿಂದ ಕಳೆದ 4 ವರೆ ವರ್ಷದಲ್ಲಿ ಕೋಟ್ಯಂತರ ರೂಗಳ ಅನುದಾನವನ್ನು ಕ್ಷೇತ್ರಕ್ಕೆತಂದು ಪ್ರವಾಸಿ ತಾಣಗಳಾದ ಗೋಕರ್ಣ, ವನ್ನಳ್ಳಿ, ಮಿರ್ಜಾನ,ಯಾಣ, ಮತ್ತಿತರ ಭಾಗಗಳಲ್ಲಿ ಪ್ರವಾಸೋದ್ಯಮ ಬೆಳೆಯುವ ನಿಟ್ಟಿನಲ್ಲಿಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿದ್ದು ಕ್ಷೇತ್ರಕ್ಕೆ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದುಇದಕ್ಕೆಲ್ಲ ಶಾಸಕಿ ಶರದಾ ಶೆಟ್ಟಿ ಮತ್ತುಉಸ್ತುವಾರಿ ಸಚಿವರಅಭಿವೃದ್ದಿ ಪೂರಿತ ಮುಂದಾಲೋಚನೆಯಕಾರಣವಾಗಿದೆ. ಈಗಾಗಲೇ ಗೋಕರ್ಣ ಬಹುಗ್ರಾಮಕುಡಿಯುವ ನೀರಿನಯೋಜನೆಯರೀತಿಯಲ್ಲಿ ಹೊನ್ನಾವರ ಪಟ್ಟಣ ಮತ್ತು 09 ಗ್ರಾಮ ಪಂಚಾಯತಗಳ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿಕ್ರಮಕೈಗೊಂಡಿರುವ ಶಾಸಕಿಯು 122 ಕೋಟಿಯೋಜನೆಗೆ ಮಂಜೂರಿ ದೊರಕಿಸಿಕೊಂಡಿದ್ದು ಟೆಂಡರ ಪ್ರಕ್ರಿಯೆಗೆ ಚಾಲನೆ ನಿಡಬೇಕಾಗಿರುವ ಹಂತದಲ್ಲಿರುತ್ತದೆ.
ಅದೇರೀತಿ ಹೆಗಡೆ ಮತ್ತು ಅಳಕೋಡ ಜಿಲ್ಲಾ ಪಂಚಾಯತಗಳ ಗ್ರಾಮಪಂಚಾಯತಿ ವ್ಯಾಪ್ತಿಯ 208 ಮಜಿರೆಗಳ ಕುಡಿಯುವ ನೀರಿನ ಸಮಸ್ಯೆ ಬಗೆ ಹರಸಲು 94 ಕೋಟಿ ರೂಗಳ ವಿಸ್ತøತಯೋಜನೆಯನ್ನು ಸಿದ್ದಪಡಿಸಿದ್ದು ಅನುದಾನದ ಲಭ್ಯತೆಯ ನೀರಿಕ್ಷೆಯಲ್ಲಿರುತ್ತದೆ. ಹೀಗೆ ಹತ್ತು ಹಲವಾರುಯೋಜನೆಯ ಮೂಲಕ ಕುಮಟಾ ಹೊನ್ನಾವರ ವಿದಾನಸಭಕ್ಷೆತ್ರದಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಲು ಶೃಮಿಸುತ್ತಿರುವ ಶಾಸಕಿಯ ಅಭಿವೃದ್ಧಿಯ ಸಾಧನೆಗೆ ಗೋಕರ್ಣ ಬಹುಗ್ರಾಮಕುಡಿಯುವ ನೀರಿನಯೋಜನೆಯು ಮತ್ತೊಂದು ಗರಿಯಾಗಿದೆ.