ಕುಮಟಾ : ತಾಲೂಕಿನ ಹೊಲನಗದ್ದೆ ಗ್ರಾಮದ ಹವ್ಯಕ ಸಭಾಭವನದಲ್ಲಿ ಯಶೋಧರ ನಾಯ್ಕ ಟ್ರಸ್ಟವತಿಯಿಂದ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಹಾಗೂ ಟ್ರಸ್ಟವತಿಯಿನಂದ 6 ತಿಂಗಳ ಕಾಲ ನಡೆಯುವ
ಹೋಲಿಗೆ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ಮತ್ತು ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಟ್ರಸ್ಟನ ಅಧ್ಯಕ್ಷರಾದ ಶ್ರೀ ಯಶೋಧರ ನಾಯ್ಕರವರು ಮತ್ತು ಶ್ರೀ ಎಮ್. ಎನ್. ಹೆಗಡೆಯವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದ ಶ್ರೀ ಎಮ್. ಎನ್. ಹೆಗಡೆಯವರು ಶ್ರೀ ಯಶೋಧರ ನಾಯ್ಕರವರು ಪ್ರೇರಣಾ ಶಕ್ತಿಯಾಗಿದ್ದಾರೆ, ಅವರ ದುಡಿಮೆಯ ಹಣವನ್ನು ಇಲ್ಲಿ ಜನರಿಗಾಗಿ, ಮಹಿಳಾ ಸಬಲಿಕರಣಕ್ಕಾಗಿ ಉಪಯೊಗಿಸುತ್ತಿರುವುದು ತುಂಬಾ ಹೆಮ್ಮೆಯ ಸಂಗತಿ, ಹಾಗೂ ಇಂತಹ ನಾಯಕರು ನಮ್ಮ ಕುಮಟಾ ಹೊನ್ನಾವರಕ್ಕೆ ಬೇಕಾಗಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಶ್ರೀ ರಾಘವೇಂದ್ರ ಜಿ ಪಟಗಾರ (ಅಧ್ಯಕ್ಷರು ಗ್ರಾಮ ಪಂಚಾಯತ, ಹೊನಲಗದ್ದೆ), ಶ್ರೀ ಎಸ್. ಎನ್. ಭಟ್ (ಅಧ್ಯಕ್ಷರು ಹವ್ಯಕ ಸಭಾಭವನ, ಹೊನಲಗದ್ದೆ), ಶ್ರೀ ಆರ್. ಜಿ. ನಾಯ್ಕ (ವಕಿಲರು), ಶ್ರೀ ವಿಷ್ಣು ಪಟಗಾರ (ಉದ್ದಿಮೆದಾರರು), ಶ್ರೀ ರಾಮಾ ಸಿತಾರಾಮ ಭಟ್ ಕೋಟಿ (ನಿವೃತ್ತ ಶಿಕ್ಷಕರು), ಶ್ರೀ ಸುಬ್ರಾಯ ಜಿ ನಾಯ್ಕ (ಅಧ್ಯಕ್ಷರು ವ್ಯವಸಾಯ ಸಹಕಾರಿ ಸಂಘ, ಬಾಡ) ಶ್ರೀಮತಿ ಭಾರತಿ ಎಸ್ ಹರಿಕಂತ್ರ (ಉಪಾಧ್ಯಕ್ಷರು ಗ್ರಾಮ ಪಂಚಾಯತ, ಹೊನಲಗದ್ದೆ), ಶ್ರೀ ಸತೀಶ ಎಸ್ ಹರಿಕಂತ್ರ (ಮಾಜಿ ಸೈನಿಕರು), ಶ್ರೀ ಗೋವಿಂದ ಅಂಬಿಗ (ಸಮಾಜ ಮುಖಂಡರು), ಶ್ರೀ ವೆಂಕಟ್ರಮಣ ಎನ್ ಹರಿಕಂತ್ರ (ಸಮಾಜ ಮುಖಂಡರು), ಶ್ರೀ ನಾಗಪ್ಪ ಆರ್ ಮುಕ್ರಿ (ನಿವೃತ್ತ ಗುಮಾಸ್ತರು), ಶ್ರೀ ಚಂದ್ರಹಾಸ ಆರ್ ನಾಯ್ಕ (ಸಮಾಜ ಸೇವಕರು), ಶ್ರೀ ಮೋಹನ ಪಿ ನಾಯ್ಕ (ಸಮಾಜ ಸೇವಕರು), ಶ್ರೀ ನಾಗೇಶ ಎಸ್ ನಾಯ್ಕ (ಗ್ರಾಮ ಪಂಚಾಯತ ಸದಸ್ಯರು, ಹೊನಲಗದ್ದೆ), ಶ್ರೀ ಈಶ್ವರ ನಾರಾಯಣ ಪಟಗಾರ (ಗ್ರಾಮ ಪಂಚಾಯತ ಸದಸ್ಯರು, ಹೊನಲಗದ್ದೆ), ಶ್ರೀಮತಿ ರಮ್ಯಾ ಆರ್ ಶೇಟ್ (ಗ್ರಾಮ ಪಂಚಾಯತ ಸದಸ್ಯರು, ಹೊನಲಗದ್ದೆ), ಶ್ರೀ ಶಾರದಾ ಪಟಗಾರ (ಗ್ರಾಮ ಪಂಚಾಯತ ಸದಸ್ಯರು, ಹೊನಲಗದ್ದೆ), ಶ್ರೀ ಸತ್ಯ ಜಾವಗಲ್ (ಸಾಮಾಜಿಕ ಕಾರ್ಯಕರ್ತರು), ಶ್ರೀ ಹರಿಶ ಶೆಟ್ಟಿ (ಉದ್ದಿಮೆದಾರರು), ಹಾಗೂ ಶ್ರೀ ಎಸ್.ಟಿ. ನಾಯ್ಕ ಗ್ರಾಂ. ಪಂ. ಸದಸ್ಯರು ಉಪಸ್ಥಿತರಿದ್ದರು.