ಭಟ್ಕಳ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಭರವಸೆಯ ಕವಯಿತ್ರಿ ಅಶ್ವಿನಿ ಕೋಡಿಬೈಲು ಅವರ ಚೊಚ್ಚಲ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಭೂಮಿಕೆಯಾಗಿ ಉತ್ತರ ಕನ್ನಡ ಜಿಲ್ಲೆಯ ನಿನಾದ ಸಾಹಿತ್ಯ ಸಂಗೀತ ಸಂಚಯದ ಪ್ರಧಾನ ಸಂಚಾಲಕರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಸುಗಮಸಂಗೀತ ಗಾಯಕ ಉಮೇಶ ಮುಂಡಳ್ಳಿ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.
ಸುಳ್ಯ ಬೆಳ್ಳಾರೆಯ ಅಂಬೇಡ್ಕರ್ ಸಭಾ ಭವನದಲ್ಲಿ ನಡೆದ ಸುಗಮ ಸಂಗೀತ ಕಾರ್ಯಕ್ರಮ ದಲ್ಲಿ ಗಾಯಕ ಉಮೇಶ ಮುಂಡಳ್ಳಿ ತಮ್ಮದೇ ಸ್ವರ ಸಂಯೋಜನೆಯೊಂದಿಗೆ ಸ್ವರಚಿತ ಭಾವಗೀತೆ ಹಾಗು ಲೇಖಕಿ ಅಶ್ವಿನಿ ಕೋಡಿಬೈಲು ಅವರ ಕವಿತೆಗಳಿಗೆ ಧ್ವನಿಯಾದರು.

RELATED ARTICLES  ಸರಕಾರ ಕೃಷಿಕ ಮತ್ತು ಕೃಷಿ ಕಾರ್ಮಿಕರಿಗೆ ಅನೇಕ ಯೋಜನೆ ತಂದಿದೆ: ಶಾಸಕ ಹೆಬ್ಬಾರ

ಎರಡು ಗಂಟೆಗಳ ಕಾಲ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಮುಂಡಳ್ಳಿ ಯವರ ನಾವು ಕನ್ನಡಿಗರು, ಏಕೋ ಏನೋ ನಮ್ಮ ನಡುವೆ ಅಂತರ ಇದೆ ಭಾವಗೀತೆಗಳು ಹಾಗೂ ಅಶ್ವಿನಿಯವರ ಪಂಜರದ ಗಿಳಿ ನಾನು, ನಲ್ಲೆ ನಿನ್ನ ಮುಖದಲ್ಲಿಂದು ಹೊಸತು ಕಳೆಯ ಕಂಡೆನು ಭಾವಗೀತೆಗಳು ಸೇರಿದ ಸಂಗೀತ ಸಾಹಿತ್ಯ ಸಹೃದಯರ ನ್ನು ಸೆಳೆದು ಮಂತ್ರಮುಗ್ದಗೊಳಿಸಿದವು.

RELATED ARTICLES  ಕೊರೋನಾ ತಡೆಗೆ ಕುಮಟಾ ಹೆಗಡೆಯ ಎರಡು ಸ್ಥಳಗಳು ಸೀಲ್ ಡೌನ್..!

ಅನೇಕ ಶಾಸ್ತ್ರೀಯ ಸಂಗೀತ ಪರಿಣಿತರು ಉಪಸ್ಥಿತರಿದ್ದ ಈ ಸಂದರ್ಭದಲ್ಲಿ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಗಾಯನ ಸಂಗೀತ ಸಾಧಕರಿಂದ ಪ್ರಶಂಸೆಗೆ ಪಾತ್ರವಾಗಿದ್ದು ಒಂದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ಸಾಹಿತಿ ಪ್ರೋ. ವಿ.ಬಿ.ಅರ್ತಿಕಜೆ ಕಾರ್ಯಕ್ರಮದಲ್ಲಿ ಹಾಜರಿದ್ದು ಮುಂಡಳ್ಳಿಯವರ ಪ್ರತಿಭೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮ ದಲ್ಲಿ ಪುತ್ತುರಿನ ಪ್ರಸಿದ್ದ ತಬಲಾ ವಾದಕ ಸುಹಾಸ್ ಹೆಬ್ಬಾರ್ ತಬಲಾ ಮತ್ತು ಡೊಲಕ್ ನಲ್ಲಿ, ಉಪ್ಪಿನಂಗಡಿಯ ಸದಾಶಿವ ಭಟ್ ಶಿವಗಿರಿ ಕಲ್ಲಡ್ಕ ಕೀಬೋರ್ಡ್‌ ನಲ್ಲಿ ಸಹಕರಿಸಿದರು.